Thursday, March 12, 2026
Flats for sale
Homeರಾಜಕೀಯವಿಜಯಪುರ : ಬಿಜೆಪಿ ಯಲ್ಲಿ ಹಿಂದು ನಾಯಕರನ್ನು ಯಡಿಯೂರಪ್ಪ ಕುಟುಂಬ ಮೂಲೆಗುಂಪು ಮಾಡುತ್ತಿದೆ,ಹೊಸ ರಾಜಕೀಯ ಪಕ್ಷದ...

ವಿಜಯಪುರ : ಬಿಜೆಪಿ ಯಲ್ಲಿ ಹಿಂದು ನಾಯಕರನ್ನು ಯಡಿಯೂರಪ್ಪ ಕುಟುಂಬ ಮೂಲೆಗುಂಪು ಮಾಡುತ್ತಿದೆ,ಹೊಸ ರಾಜಕೀಯ ಪಕ್ಷದ ನಿರೀಕ್ಷೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ..!

ವಿಜಯಪುರ : ಬಿಜೆಪಿ ಯಲ್ಲಿ ಯಡಿಯೂರಪ್ಪ ಹಿಂದು ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದು ಹಿರಿಯ ಬಿಜೆಪಿ ನಾಯಕರಿಗೆ ನೆಲೆಯಿಲ್ಲದಂತಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ. ಸಿ ಎಂ ಸಿದ್ದರಾಮಯ್ಯ ಜೊತೆ ಯೆಡಿಯೂರಪ್ಪ ಮಗ ವಿಜಯೇಂದ್ರ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದು ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ಇಲ್ಲ ಸಲ್ಲದ ಆರೋಪ ಮಾಡಿ ಹಿಂದೂ ಮುಖಂಡರನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.

ಜನ ಏನು ಹೇಳುತ್ತಾರೆ ಅದನ್ನು ನಾವು ಮಾಡುತ್ತೇವೆ. ನಾವು ಜನರು ಬಿಟ್ಟು ಇರುವದಿಲ್ಲ, ನಮಗೆ ಇಲ್ಲಿ ಭವಿಷ್ಯ ಕಾಣುತ್ತಿಲ್ಲ. ಹಿಂದು ನಾಯಕರನ್ನು ಮೂಲೆಗುಂಪು ಮಾಡುವ ಕುತಂತ್ರ ಯಡಿಯೂರಪ್ಪ ಕುಟುಂಬ ಮಾಡುತ್ತಿದೆ. ಜನಾಭಿಪ್ರಾಯ ಹೊಸ ರಾಜಕೀಯ ಪಕ್ಷ ಕಟ್ಟಲಿ ಎಂದು ಅಭಿಪ್ರಾಯ ಬಂದರೆ. ನೂರಕ್ಕೆ ನೂರು ನಾವು ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ಬರುವ ವಿಜಯದಶಮಿ ದಿನ ಉದ್ಘಾಟನೆ ಮಾಡುತ್ತೇವೆ ಎಂದ ಯತ್ನಾಳ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಯೆಡಿಯೂರಪ್ಪ ಕುಟುಂಬ ಈ ಮೊದಲು ರಾಜ್ಯದಲ್ಲಿ ಪ್ರಬಲ ನಾಯಕರನ್ನು ಮೂಲೆ ಗುಂಪು ಮಾಡಿದ್ದೂ ಯೆಡಿಯೂರಪ್ಪ ಬಣ ಹಾಗೂ ಬಿಲ್ .ಸಂತೋಷ್ ಜಿ ಅವರ ಬಣದ ನಡುವಿನ ರಾಜಕೀಯ ಸಮರ ನಡೆಯುತ್ತಿದೆಂದು ಬಲ್ಲ ಮೂಲಗಳಿಂದ ಮಾಹಿತಿ.

RELATED ARTICLES

LEAVE A REPLY

Please enter your comment!
Please enter your name here

Most Popular