ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆ ಮುಗಿಸಿ ಬ್ರಿಟನ್ಗೆ ತೆರಳುವ ವೇಳೆ ಭದ್ರತಾ ಕಾರಣಕ್ಕಾಗಿ ರಹಸ್ಯವಾಗಿ ವಿಮಾನ ಬದಲಿಸಿದ್ದರು ಎನ್ನಲಾಗಿದೆ.
ಇರಾನ್ನಿಂದ ಕ್ಷಿಪಣಿ ದಾಳಿ ಸಾಧ್ಯತೆ?
ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದ ಮೇಲೆ ಇರಾನ್ನಿಂದ ಸಂಭಾವ್ಯ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ವಿಶ್ವಾಸಾರ್ಹ ಮಾಹಿತಿ ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಪ್ರಯಾಣದ ಬಗ್ಗೆ ರಹಸ್ಯ ಭದ್ರತಾ ಯೋಜನೆ ರೂಪಿಸಲಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಏರ್ ಫೋರ್ಸ್ ಒನ್ಗೆ ಹತ್ತಿ ಮತ್ತೆ ಕೆಳಗಿಳಿದ ಟ್ರಂಪ್
ಯೋಜನೆಯಂತೆ ಟ್ರಂಪ್ ಮೊದಲು ಎಲ್ಲರಿಗೂ ಕಾಣುವಂತೆ ಏರ್ ಫೋರ್ಸ್ ಒನ್ ವಿಮಾನವನ್ನು ಹತ್ತಿದ್ದರು. ಬಳಿಕ ಅವರನ್ನು ರಹಸ್ಯವಾಗಿ ವಿಮಾನದಿಂದ ಕೆಳಗಿಳಿಸಲಾಯಿತು ಎನ್ನಲಾಗಿದೆ.
ಕ್ಯಾಟರಿಂಗ್ ಟ್ರಕ್ನಲ್ಲಿ ರಹಸ್ಯ ಪ್ರಯಾಣ ನಂತರ ಆಹಾರ ಸರಬರಾಜು ಮಾಡುವ ಕ್ಯಾಟರಿಂಗ್ ಟ್ರಕ್ ಬಳಸಿ ಟ್ರಂಪ್ ಅವರನ್ನು ವಿಮಾನದ ಮತ್ತೊಂದು ಬದಿಗೆ ಕರೆದೊಯ್ಯಲಾಯಿತು.
ಅಲ್ಲಿಂದ ಅವರನ್ನು ಬೋಯಿಂಗ್ 757 ಆಧಾರಿತ C-32A ಸಣ್ಣ ಸೇನಾ ವಿಮಾನಕ್ಕೆ ಹತ್ತಿಸಲಾಯಿತು ಎಂದು ವರದಿಯಾಗಿದೆ.
ಟರ್ಕಿಯಿಂದ ಬ್ರಿಟನ್ಗೆ C-32Aಯಲ್ಲಿ ಪ್ರಯಾಣ ಟ್ರಂಪ್ ಅವರು C-32A ವಿಮಾನದಲ್ಲಿ ಟರ್ಕಿಯಿಂದ ಬ್ರಿಟನ್ಗೆ ಪ್ರಯಾಣಿಸಿದ್ದು, ಬ್ರಿಟನ್ ತಲುಪಿದ ಬಳಿಕ ಮತ್ತೆ ಏರ್ ಫೋರ್ಸ್ ಒನ್ ವಿಮಾನವನ್ನು ಏರಿದರು ಎನ್ನಲಾಗಿದೆ.
ಪತ್ರಕರ್ತರಿಗೂ ಕಿಟಕಿ ಶೇಡ್ ಇಳಿಸುವಂತೆ ಸೂಚನೆ
ಇದೇ ವೇಳೆ ಏರ್ ಫೋರ್ಸ್ ಒನ್ನಲ್ಲಿದ್ದ ಪತ್ರಕರ್ತರಿಗೆ ಪ್ರಯಾಣದ ವೇಳೆ ವಿಮಾನದ ಕಿಟಕಿ ಶೇಡ್ಗಳನ್ನು ಕೆಳಗಿಳಿಸುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಅಧ್ಯಕ್ಷರ ನೈಜ ಪ್ರಯಾಣದ ಬಗ್ಗೆ ಮಾಹಿತಿ ಹೊರಗೆ ಸೋರಿಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಈ ಹಿಂದೆ ಕ್ಲಿಂಟನ್ಗೂ ನಡೆದಿತ್ತು ಅಮೆರಿಕ ಅಧ್ಯಕ್ಷರ ವಿಮಾನವನ್ನು ಭದ್ರತಾ ಕಾರಣಗಳಿಂದ ರಹಸ್ಯವಾಗಿ ಬದಲಿಸುವುದು ಇದೇ ಮೊದಲಲ್ಲ. 2000ರಲ್ಲಿ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತದಿಂದ ಪಾಕಿಸ್ತಾನಕ್ಕೆ ತೆರಳುವಾಗ ಏರ್ ಫೋರ್ಸ್ ಒನ್ ಬದಲು ಮತ್ತೊಂದು ವಿಮಾನ ಬಳಸಿದ್ದರು ಎಂಬುದನ್ನು ವರದಿಗಳು ಉಲ್ಲೇಖಿಸಿವೆ.

