Tuesday, February 4, 2025
Flats for sale
Homeವಿದೇಶವಾಷಿಂಗ್ಟನ್ : ಅಮೆರಿಕಾ ದಿಂದ ಭಾರತಕ್ಕೆ 18000 ಅಕ್ರಮ ವಲಸಿಗರು ಗಡಿಪಾರು..!

ವಾಷಿಂಗ್ಟನ್ : ಅಮೆರಿಕಾ ದಿಂದ ಭಾರತಕ್ಕೆ 18000 ಅಕ್ರಮ ವಲಸಿಗರು ಗಡಿಪಾರು..!

ವಾಷಿಂಗ್ಟನ್ : ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡುವ ಕಾರ್ಯಕ್ಕೆ ಅಮೆರಿಕಾ ಚಾಲನೆ ನೀಡಿದೆ. ಸುಮಾರು 18 ಸಾವಿರ ಮಂದಿಯನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಿದ್ದು ಮೊದಲ ವಿಮಾನ ಭಾರತ್ತದತ್ತ ಹೊರಟಿದೆ.

ಮೊದಲ ವಿಮಾನದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದು ನಿಖರವಾಗಿ ತಿಳಿದಿಲ್ಲ ವಿಮಾನ ಭಾರತಕ್ಕೆ ಬಂದಿಳಿದ ಬಳಿಕ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಅಧಿಕಾರ ವಹಿಸಿಕೊಂಡ ನಂತರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅದರಲ್ಲಿ ಅಕ್ರಮ ವಲಸಿಗರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸುವುದೂ ಸೇರಿದೆ.

ಅಮೆರಿಕಾದ ಸೇನಾ ವಿಮಾನ ಅಕ್ರಮ ವಲಸಿಗರನ್ನು ಹೊತ್ತ ವಿಮಾನ ಭಾರತದತ್ತ ಹೊರಟ್ಟಿದ್ದು ಇಂದು ಅಥವಾ ನಾಳೆ ದೇಶಕ್ಕೆ ಆಗಮಿಸುವ ಸಾದ್ಯತೆ ಇದೆ ಎನ್ನಲಾಗಿದೆ.. ಡೊನಾಲ್ಡ್ ಟ್ರಂಪ್ ಆಡಳಿತ ದಾಖಲೆರಹಿತ ವಲಸಿಗರ ವಿರುದ್ಧದ ತನ್ನ ಶಿಸ್ತುಕ್ರಮವನ್ನು ತೀವ್ರಗೊಳಿಸುತ್ತಿರುವುದರಿಂದ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕಾದ ಸೇನಾ ವಿಮಾನ ಭಾರತಕ್ಕೆ ಹೊರಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿ- 17 ವಿಮಾನ ವಲಸಿಗರೊಂದಿಗೆ ಭಾರತಕ್ಕೆ ಹೊರಟಿದೆ ಆದರೆ ಕನಿಷ್ಠ 24 ಗಂಟೆಗಳ ಕಾಲಕಾಲ ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ಗಡಿಪಾರು ಮಾಡುವುದಾಗಿ

ಡೊನಾಲ್ಡ್ ಟ್ರಂಪ್ ವಾಗ್ದಾನ ಮಾಡಿದ್ದರು ಮತ್ತು ಅಮೆರಿಕಾ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್ಮೆಂಟ್ ಸುಮಾರು 18,೦೦೦ ದಾಖಲೆರಹಿತ ಭಾರತೀಯ ಪ್ರಜೆಗಳ ಆರಂಭಿಕ ಪಟ್ಟಿಯನ್ನು ಸಂಗ್ರಹಿಸಿದೆ, ೧.೫ ದಶಲಕ್ಷ ವ್ಯಕ್ತಿಗಳನ್ನು ಗಡಿಪಾರು ಮಾಡಲು ಗುರುತಿಸಲಾಗಿದೆ. ಈ ನಡುವೆ ವಿದೇಶಾಂಗ ಸಚಿವ ಡಾ. ಎಸ್ ಜೈ ಶಂಕರ್ ಪ್ರತಿಕ್ರಿಯೆ ನೀಡಿ ಕಳೆದ ತಿಂಗಳು, ಅಮೆರಿಕಾದಿಂದ ಗಡಿಪಾರು ಮಾಡುವ ಯೋಜನೆಗಳ ಬಗ್ಗೆ ಕೇಳಿದಾಗ, ತಮ್ಮ ದೇಶಕ್ಕೆ ದಾಖಲೆರಹಿತ ಭಾರತೀಯರನ್ನು ಕಾನೂನುಬದ್ಧವಾಗಿ ಹಿಂದಿರುಗಿಸಲು ಭಾರತ ಯಾವಾಗಲೂ ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದಿಂದ ಯಾರನ್ನು ಭಾರತಕ್ಕೆ ಗಡಿಪಾರು ಮಾಡಬಹುದು ಎಂಬುದನ್ನು ಭಾರತ ಪರಿಶೀಲಿಸುತ್ತಿದ್ದು, ಅಂತಹ ವ್ಯಕ್ತಿಗಳ ಸಂಖ್ಯೆಯನ್ನು ಇನ್ನೂ ನಿರ್ಧರಿಸಲು ಸಾಧ್ಯವಿಲ್ಲ ”ಪ್ರತಿಯೊಂದು ದೇಶದೊಂದಿಗೆ, ಮತ್ತು ಅಮೆರಿಕಾ ಇದಕ್ಕೆ ಹೊರತಾಗಿಲ್ಲ, ನಮ್ಮ ಯಾವುದೇ ನಾಗರಿಕರು ಅಕ್ರಮವಾಗಿ ಅಲ್ಲಿದ್ದರೆ ಮತ್ತು ಅವರು ನಮ್ಮ ಪ್ರಜೆಗಳು ಎಂದು ನಮಗೆ ಖಚಿತವಾಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ನಾವು ಯಾವಾಗಲೂ ಮುಕ್ತ ಅವಕಾಶವಿದೆ ಎಂದಿದ್ದಾರೆ.

ಅಕ್ರಮವಾಗಿ ಅಮೆರಿಕಕ್ಕೆ ಆಗಮಿಸಿದ ಭಾರತೀಯ ವಲಸಿಗರನ್ನು ವಾಪಸ್ ಕರೆತರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಸರಿಯಾಗಿದ್ದನ್ನು ಮಾಡುತ್ತಾರೆ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು.ಉಭಯ ನಾಯಕರ ನಡುವೆ ದೂರವಾಣಿ ಕರೆ ಮಾಡಿದ ನಂತರ ಈ ಹೇಳಿಕೆಗಳು ಬಂದಿದ್ದವು..

RELATED ARTICLES

LEAVE A REPLY

Please enter your comment!
Please enter your name here

Most Popular