Friday, November 22, 2024
Flats for sale
Homeದೇಶವಡೋದರಾ : ಸ್ಕೂಟರ್‌ನಲ್ಲಿ ಮೊಸಳೆಯೊಂದಿಗೆ ರೈಡ್ : ವೀಡಿಯೋ ವೈರಲ್..!

ವಡೋದರಾ : ಸ್ಕೂಟರ್‌ನಲ್ಲಿ ಮೊಸಳೆಯೊಂದಿಗೆ ರೈಡ್ : ವೀಡಿಯೋ ವೈರಲ್..!

ವಡೋದರಾ : ಗುಜರಾತ್‌ನಲ್ಲಿ ಇಬ್ಬರು ಯುವಕರು ಸ್ಕೂಟರ್‌ನಲ್ಲಿ ಮೊಸಳೆಯನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಬೃಹತ್ ಆಕಾರದ ಮೊಸಳೆಯನ್ನು ಮುಸುಡಿಗೆ ಬಟ್ಟೆ ಕಟ್ಟಿ ತನ್ನ ಮಡಿಲಲ್ಲಿ ಹೊತ್ತೊಯ್ಯುತ್ತಿರುವುದನ್ನು ವೀಡಿಯೊ ಸಂಚಲನ ಸೃಷ್ಟಿಸಿದೆ. ಅವರಲ್ಲಿ ಒಬ್ಬರು ಸ್ಕೂಟರ್ ಅನ್ನು ಓಡಿಸುತ್ತಿದ್ದರೆ, ಇನ್ನೊಬ್ಬ ಯುವಕ ಹಿಂಬದಿಯಲ್ಲಿ ತೊಡೆಯ ಮೇಲಿಟ್ಟು ಹೊತ್ತೊಯ್ಯುವ ದೈರ್ಯಕ್ಕೆ ಎಲ್ಲೆಡೆ ವ್ಯಾಪಕ ಹರ್ಷ ವ್ಯಕ್ತವಾಗಿದೆ.

ಗುಜರಾತಿನ ವಡೋದರಾದಲ್ಲಿ ಪ್ರವಾಹದ ನೀರು ತಗ್ಗಿದ ನಂತರ ಈ ದೃಶ್ಯ ಕಂಡು ಬಂದಿದೆ. ಕನಿಷ್ಠ 40 ಮೊಸಳೆಗಳನ್ನು ವಸತಿ ನೆರೆಹೊರೆಗಳಿಂದ ರಕ್ಷಿಸಲಾಗಿದೆ. ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಮೊಸಳೆಗಳ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ತಂಡಗಳು ಕೈಜೋಡಿಸಿವೆ.

ವಿನಾಶಕಾರಿ ಪ್ರವಾಹದ ನಂತರ ಗುಜರಾತ್ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಯಾವುದೇ ರೀತಿಯ ಮನುಷ್ಯ-ಪ್ರಾಣಿ ಸಂಘರ್ಷವನ್ನು ತಡೆಯಲು ಅಧಿಕಾರಿಗಳು ಈಗಾಗಲೇ ಮೊಸಳೆಗಳು ಮತ್ತು ಇತರ ಪ್ರಾಣಿಗಳ ಪುನರ್ವಸತಿ ಕಾರ್ಯ ಮತ್ತು ರಕ್ಷಣೆಯನ್ನು ಪ್ರಾರಂಭಿಸಿದ್ದಾರೆ.

ಇಬ್ಬರು ಯುವಕರನ್ನು ಸಂದೀಪ್ ಠಾಕೂರ್ ಮತ್ತು ರಾಜ್ ಭಾವಸರ್ ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ವಡೋದರಾದಲ್ಲಿ ಪ್ರಾಣಿ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ವೀಡಿಯೊವನ್ನು ಚಿತ್ರೀಕರಿಸಿದಾಗ ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮೊಸಳೆಯನ್ನು ತೆಗೆದುಕೊಂಡು ಹೋಗುತ್ತಿದ್ದರು.

ವಿಶ್ವಾಮಿತ್ರ ನದಿಯ ದಡದಲ್ಲಿರುವ ವಡೋದರಾವು ಹೆಚ್ಚಿನ ಸಂಖ್ಯೆಯ ಮೊಸಳೆಗಳಿಗೆ ನೆಲೆಯಾಗಿದೆ. ಪ್ರವಾಹದಿಂದ ಅನೇಕ ಪ್ರಾಣಿಗಳು ವಸತಿ ಪ್ರದೇಶಗಳಿಗೆ ನುಗ್ಗಿದ್ದು ಜನಸಾಮನ್ಯರು ಆತಂಕಕ್ಕೆ ಒಳಗಾಗಿದ್ದಾರೆ.

ಅರಣ್ಯ ಇಲಾಖೆಗೆ ಸಿಕ್ಕಿಬಿದ್ದ ಬೃಹತ್ ಮೊಸಳೆಗಳನ್ನು ಮತ್ತೆ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗುತ್ತಿದೆ. ಪ್ರವಾಹದ ನಂತರ ಮೊಸಳೆಗಳಲ್ಲದೆ, ಅರಣ್ಯ ಇಲಾಖೆಯು ವಸತಿ ಪ್ರದೇಶಗಳಿಂದ ಹಾವು ಮತ್ತು ಆಮೆಗಳನ್ನು ಸಹ ರಕ್ಷಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular