Saturday, November 23, 2024
Flats for sale
Homeಕ್ರೈಂಲಕ್ನೋ ; ಅಕ್ರಮ ಸಂಬಂಧ - ಪತ್ನಿ ಇಬ್ಬರು ಮಕ್ಕಳನ್ನು ಕೊಂದು ಶವಗಳ ಜೊತೆ 3...

ಲಕ್ನೋ ; ಅಕ್ರಮ ಸಂಬಂಧ – ಪತ್ನಿ ಇಬ್ಬರು ಮಕ್ಕಳನ್ನು ಕೊಂದು ಶವಗಳ ಜೊತೆ 3 ದಿನ ಕಳೆದ ಪತಿ.

ಲಕ್ನೋ ; ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ವ್ಯಕ್ತಿಯೊಬ್ಬ ಆ ಶವಗಳೊಂದಿಗೆ ಮೂರು ರಾತ್ರಿ ಗಳನ್ನು ಕಳೆದಿರುವ ಭಯಾನಕ ಘಟನೆ ಬಿಜ್ನೋರ್ ಬಳಿಯಲ್ಲಿ ನಡೆದಿದೆ.

ಬಿಜ್ನೋರ್‌ನ ಸರವಣನಗರ ಪ್ರದೇಶದಲ್ಲಿ ರಾಮ್ ಲಗಾನ್ (32)ಎಂಬಾತ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಂದು ಅವರ ಶವಗಳೊಂದಿಗೆ ಮೂರು ದಿನಗಳನ್ನು ಕಳೆದಿದ್ದಾನೆ.

ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರಾಮ್ ಲಗಾನ್‌ಗೆ ಪತ್ನಿ ವಿವಾಹೇತರ ಸಂಬAಧ ಹೊಂದಿದ್ದಾಳೆ ಎಂಬ ಶಂಕೆ ಉಂಟಾಗಿತ್ತು. ಹೀಗಾಗಿ ರಾಮ್ ಲಗಾನ್ ತನ್ನ ಪತ್ನಿ ಜ್ಯೋತಿ (30), ಮಕ್ಕಳಾದ ಪಾಯಲ್ (6) ಮತ್ತು ಆನಂದ್ (3) ಎಂಬವರನ್ನು ಕೊಂದು ಹಾಕಿದ್ದಾನೆ.

ಮಕ್ಕಳ ಎದುರೇ ಪತ್ನಿ ಜ್ಯೋತಿಯನ್ನು ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಂದ ರಾಮ್ ಲಗಾನ್ ಬಳಿಕ ಇಬ್ಬರು ಮಕ್ಕಳನ್ನೂ ಹತ್ಯೆ ಮಾಡಿದ್ದಾನೆ. ಬಳಿಕ ಮರುದಿನ ಏನೂ ನಡೆದೇ ಇಲ್ಲ ಎನ್ನುವಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದಾನೆ.

ರಾಮ್ ಲಗಾನ್ ಮತ್ತು ಜ್ಯೋತಿಗೆ ಮದುವೆಯಾಗಿ ಏಳು ವರ್ಷಗಳಾಗಿತ್ತು. ಇತ್ತೀಚೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪದೇಪದೇ ಆಕೆ ಫೋನ್ ನಲ್ಲಿ ಮಾತನಾಡುವಾಗ ಕಿವಿಕೊಡುತ್ತಿದ್ದ. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ಉಂಟಾಗುತ್ತಿತ್ತು. ಮಾರ್ಚ್ 28 ರ ರಾತ್ರಿಯೂ ಜಗಳವಾಗಿದ್ದು, ಬಳಿಕ ಆಕೆಯನ್ನು ಹತ್ಯೆ ಮಾಡಿದ್ದ. ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಟಿ. ಎಸ್. ಸಿಂಗ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular