ಲಕ್ನೊ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಉತ್ತರ ಪ್ರದೇಶದ ಬ್ರಿಜೇಶ್ ಸೋಲಂಕಿ (22 ವರ್ಷ) ಅವರು ರೇಬಿಸ್ನಿಂದ ಸಾವನಪ್ಪಿದ ಘಟನೆ ನಡೆದಿದೆ.
ಮೋರಿಯಿಂದ ತಾನೇ ರಕ್ಷಿಸಿ ತಂದ ನಾಯಿ ಮರಿಯಿಂದ ಸಾವನಪ್ಪಿದ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ನಾಯಿ ಜೊತೆ ಆಡುವ ವೇಳೆ ಬ್ರಿಜೇಶ್ ಸೋಲಂಕಿ ಅವರನ್ನು ಲಘುವಾಗಿ ಕಚ್ಚಿತ್ತು. ಆ ಸಂದರ್ಭದಲ್ಲಿ ಗಾಯ ಚಿಕ್ಕದಾಗಿತ್ತು. ನಾಯಿ ಮರಿ ಅನ್ನೊ ಕಾರಣಕ್ಕೆ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿ ಲಸಿಕೆ ಹಾಕಿಸಿಕೊಳ್ಳಲಿಲ್ಲ. ನಂತರ ರೇಬಿಸ್ ತೀವ್ರಗೊಂಡಿತ್ತು. ಜೂ.೨೮ರಂದು ಬ್ರಿಜೇಶ್ ಅಭ್ಯಾಸ ಮಾಡುತ್ತಿದ್ದಾಗ ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೊತ್ತಿಗಾಗಲೇ ರೇಬಿಸ್ ತೀವ್ರಗೊಂಡಿತ್ತು.
ನೋಯ್ಡಾದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಉಳಿಸಲಾಗಲಿಲ್ಲ. ಬ್ರಿಜೇಶ್ ಸೋಲಂಕಿ ಕೊನೆಯಲ್ಲಿ ನರಳಿ ನರಳಿ ಕೊನೆಯುಸಿರೆಳೆದಿದ್ದಾರೆ. ಈ ಬಾರಿ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆಡುವ ಕನಸು ಕಂಡಿದ್ದರು.