Sunday, March 8, 2026
Flats for sale
Homeರಾಜ್ಯರಿಪ್ಪನ್‌ಪೇಟೆ ; ಮತದಾರರು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮತ ನೀಡುತ್ತಾರೆ : ಬಿ.ವೈ ರಾಘವೇಂದ್ರ.

ರಿಪ್ಪನ್‌ಪೇಟೆ ; ಮತದಾರರು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮತ ನೀಡುತ್ತಾರೆ : ಬಿ.ವೈ ರಾಘವೇಂದ್ರ.

ರಿಪ್ಪನ್‌ಪೇಟೆ ; ಮತದಾರರು ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಮತ ನೀಡುತ್ತಾರೆ. ಇಡೀ ಭಾರತ ದೇಶದ ನಾಗರಿಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲಿದ್ದು. ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಮತ್ತೊಮ್ಮೆ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು .

ಪಟ್ಟಣದ ವಿನಾಯಕ ವೃತ್ತದಲ್ಲಿರುವ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಲಾದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿ ನಾನು ತಮ್ಮಗಳ ಅಶೀರ್ವಾದದಿಂದ ಮೂರು ಭಾರಿ ಸಂಸತ್ ಸದಸ್ಯನಾಗಿ ಆಯ್ಕೆ ಆಗಿದ್ದು ಜನಮೆಚ್ಚುವ ಆಭಿವೃದ್ದಿಯನ್ನು ಮಾಡಲಾಗಿದ್ದು ಸರ್ಕಾರದ ಹಿರಿಯರಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇನೆ. ಕ್ಷೇತ್ರದಾದ್ಯAತ ಸಾಕಷ್ಟು ಜನಪರವಾದಂತಹ ಆಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆನುದಾನವನ್ನು ತರುವುದರೊಂದಿಗೆ ಸಂಪರ್ಕ ರಸ್ತೆ .ಮೆಡಿಕಲ್‌ಕಾಲೇಜ್,ಕೃಷಿ.ತೋಟಗಾರಿಕಾ ಕಾಲೇಜ್,ರೈಲ್ವೆ ಸ್ಟೇಷನ್,ವಿಮಾನ ನಿಲ್ದಾಣ,ಅಕಾಶವಾಣಿ. ಸರ್ವಋತು ಜೋಗ್ ಅಭಿವೃದ್ದಿ ಹಾಗೂ ತುಮರಿ ಸಂಪರ್ಕದ ಸೇತುವೆ ನಿರ್ಮಾಣ ಕಾಮಗಾರಿಗಳ ಆಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರದಿAದ 20 ಸಾವಿರ ಕೋಟಿ ಅನುದಾನವನ್ನು ತಂದಿರುವುದಾಗಿ ವಿವರಿಸಿ ಕೊಲ್ಲೂರಿಗೆ ಹೊಸನಗರದಿಂದ ಅಡಗೋಡಿ ತಿರುವು ರಹಿತ ರಸ್ತೆ ಸೇತುವೆ ಕೊಡಚಾದ್ರಿಗೆ ರೋಪ್‌ಕಾರು ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಹಾಗಯೇ ಮೇಗರವಳ್ಳಿಯಿಂದ ಮಣಿಪಾಲದವರಗೆ 12ಕೋಟಿ ವೆಚ್ಚದ ಸುರಂಗ ಮಾರ್ಗ ಕಾಮಗಾರಿಗೆ ಯೋಜನಾ ವರದಿ ನೀಡಲಾಗಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಕೇವಲ ಒಂದೇ ವಾರದಲ್ಲಿ ಅನುದಾನವನ್ನು ಬಿಡುಗಡೆಮಾಡಿದ್ದಾರೆಂದು ಹೇಳಿದರು.

ಬಿಜೆಪಿ ಮಹಿಳೆ ರಾಜ್ಯಾಧ್ಯಕ್ಷ ಮಂಜುಳಾ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಳಿತ ಎಲ್ಲಾ ಕ್ಷೇತ್ರದಲ್ಲಿಯೂ ವಿಫಲವಾಗಿದ್ದು ಕಾನೂನು ಸುವ್ಯವಸ್ಥೆಯನ್ನು ಪುಂಡರ ಕೈಯಲ್ಲಿ ಅಡವಿಟ್ಟಿದೆ ಅಡುಗೆ ಮನೆಯಿಂದ ಕುಟುಂಬವನ್ನು ಮೆಚ್ಚಿಸಿದ ಮಹಿಳೆಯರು ಈಗ ದೇಶವನ್ನು ಗೆಲ್ಲಿಸಿದ್ದಾರೆ ಅದರಿಂದ ಈ ಮಗದೊಮ್ಮೆ ಮೋದಿ ಎಂದು ನಾವು ಚುನಾವಣೆಯಲ್ಲಿ ಗೆಲ್ಲಿಸಿವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular