Saturday, March 14, 2026
Flats for sale
Homeರಾಜ್ಯರಿಪ್ಪನ್‌ಪೇಟೆ ; ಬದುಕಿಗೆ ಭಯ ಮುಖ್ಯವಲ್ಲ ಭರವಸೆ ಮುಖ್ಯ - ಮಳಲಿಶ್ರೀ.

ರಿಪ್ಪನ್‌ಪೇಟೆ ; ಬದುಕಿಗೆ ಭಯ ಮುಖ್ಯವಲ್ಲ ಭರವಸೆ ಮುಖ್ಯ – ಮಳಲಿಶ್ರೀ.

ರಿಪ್ಪನ್‌ಪೇಟೆ ; ಬದುಕಿಗೆ ಭಯ ಮುಖ್ಯವಲ್ಲ ಭರವಸೆ ಮುಖ್ಯ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಮಸರೂರು ಪೂಜಾರಗೊಪ್ಪ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣಮಾಸದ ಅಂಗವಾಗಿ ಆಯೋಜಿಸಲಾದ “ಇಷ್ಟಲಿಂಗ ರುದ್ರಾಭಿಷೇಕ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಸರ್ವ ಅನಿಷ್ಟಗಳನ್ನ ಪರಿಹರಿಸಿ ಇಷ್ಟಾರ್ಥ ಪ್ರದಾಯಕವಾದ ಈ ಲಿಂಗಕ್ಕೆ ಇಷ್ಟಲಿಂಗವೆಂದು ಕರೆಯುತ್ತಾರೆ. ಕಾರಣ ಅನುಭವಿಗಳು ಸಾವಧಾನ ಪೂರ್ವಕವಾಗಿ ಶರೀರದ ಮೇಲೆ ಯಾವಾಗಲೂ ಈ ಇಷ್ಟಲಿಂಗವನ್ನು ಧರಿಸಬೇಕೆಂದು ತಿಳಿಹೇಳಿದರು. ಅನುಭವ ಹೆಚ್ಚಾದಷ್ಟು ಮನಸ್ಸು ಗಟ್ಟಿಯಾಗಿರುತ್ತದೆ.ಮನಸ್ಸು ಗಟ್ಟಿಯಾದಷ್ಟು ಅತ್ಮ ಸ್ಥರ್ಯ ಹೆಚ್ಚಾಗುತ್ತದೆ.ವ್ಯಕ್ತಿಯ ವ್ಯಕ್ತಿತ್ವ ಗಡಿಯಾದಲ್ಲಿರುವ ನಂಬರ ಅಗಬೇಕೆ ವಿನ: ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಗಬಾರದು ಎಂದು ನುಡಿದರು.

ಈ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮದಲ್ಲಿ ಎಂ.ಆರ್. ಶಾಂತವೀರಪ್ಪಗೌಡರು,ಎಂ .ಆರ್.ಮುರುಗೇಶಪ್ಪಗೌಡ,ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದಪ್ಪ,ರಾಚಪ್ಪ,ಎನ್.ವರ್ತೇಶ್,ರುದ್ರಪ್ಪ, ಗಣೇಶ ಕೆಂಚನಾಲ,ಇನ್ನಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular