Saturday, November 23, 2024
Flats for sale
Homeರಾಜ್ಯರಾಮನಗರ : ರಾತ್ರೋರಾತ್ರೇ ಕನಕಪುರದ ಕಬ್ಬಾಳು ಗ್ರಾಮಕ್ಕೆ ಬಂದ 12 ಕಾಡಾನೆಗಳ ಗುಂಪು,ಭಯಭೀತರಾದ ಗ್ರಾಮಸ್ಥರು.

ರಾಮನಗರ : ರಾತ್ರೋರಾತ್ರೇ ಕನಕಪುರದ ಕಬ್ಬಾಳು ಗ್ರಾಮಕ್ಕೆ ಬಂದ 12 ಕಾಡಾನೆಗಳ ಗುಂಪು,ಭಯಭೀತರಾದ ಗ್ರಾಮಸ್ಥರು.

ರಾಮನಗರ : ಇತ್ತೀಚಿನ ದಿನಗಳಲ್ಲಿ ಆನೆ,ಚಿರತೆ,ಹುಲಿ,ಕಾಡುಕೋಣ ಇಂತಹ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಜನಸಾಮನ್ಯರು ತಲೆಕೆಡಿಸಿಕೊಂಡಿದ್ದು ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಭಯಭೀತರಾಗಿದ್ದಾರೆ.

ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮಕ್ಕೆ 12 ಕಾಡಾನೆಗಳ ಗುಂಪೊಂದು ರಾತ್ರಿ ಏಕಾಏಕಿ ಗ್ರಾಮಕ್ಕೆ ನುಗ್ಗಿದೆ. ಇದರಿಂದ ಜನರು ಭಯಭೀತರಾಗಿದ್ದು ಆನೆಗಳ ಗುಂಪನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸದ್ಯ ಕಾಡಾನೆ ಗುಂಪು ಕಬ್ಬಾಳು ಕಡೆಯಿಂದ ಕಾಂಚನಹಳ್ಳಿ ಕಡೆ ತೆರಳಿದೆ ಎಂಬ ಮಾಹಿತಿ ಸಿಕ್ಕಿದೆ. ಗ್ರಾಮದ ರಸ್ತೆಯಲ್ಲಿ ಕಾಡಾನೆಗಳು ಸಾಲಾಗಿ ಹೋಗುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕೆಲ ದಿನಗಳ ಹಿಂದೆ ಓರ್ವ ರೈತನನ್ನು ಕಾಡಾನೆಗಳು ಬಲಿ ಪಡೆದಿದ್ದು ಈ ಕಾಡಾನೆಗಳ ಹಾವಳಿಯಿಂದ ಕಬ್ಬಾಳು ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಜಮೀನಿಗೆ ನೀರು ಹರಿಸಲು ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಕಾಡಾನೆಗಳನ್ನು ಕಾಡಿಗಟ್ಟಿ ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular