Friday, March 13, 2026
Flats for sale
Homeರಾಜ್ಯರಾಮನಗರ : ಮೊರಾರ್ಜಿ ವಸತಿ ಶಾಲೆ ನೀರಿನ ತೊಟ್ಟಿ ಗೋಡೆ ಕುಸಿದು ವಿದ್ಯಾರ್ಥಿ ಸಾವು,ಇನ್ನೋರ್ವ ಗಂಭೀರ.

ರಾಮನಗರ : ಮೊರಾರ್ಜಿ ವಸತಿ ಶಾಲೆ ನೀರಿನ ತೊಟ್ಟಿ ಗೋಡೆ ಕುಸಿದು ವಿದ್ಯಾರ್ಥಿ ಸಾವು,ಇನ್ನೋರ್ವ ಗಂಭೀರ.

ರಾಮನಗರ : ರಾಮನಗರದ ಹೊಸೂರು ಗೊಲ್ಲಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ, ಹಾಸ್ಟೆಲ್ ಹೊರ ಭಾಗದಲ್ಲಿ ನಿರ್ಮಾಣವಾಗಿರುವ ನೀರಿನ ಸಿಮೆಂಟ್ ತೊಟ್ಟಿ ಈ ತೊಟ್ಟಿಗೆ ನಲ್ಲಿಗಳನ್ನ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ಮುಖ ತೊಳೆದುಕೊಳ್ಳಲು ಇದೆ ತೊಟ್ಟಿಯ ಬಳಿ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.ಬೆಳಿಗ್ಗೆ 8.30ರ ಸುಮಾರಿಗೆ ತೊಟ್ಟಿ ಬಳಿ ಕೌಶಿಕ್ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ಮುಖ‌ ತೊಳೆಯುತ್ತಿದ್ದರು ಅದಕ್ಕಿಂತ ಮೊದಲು 40 ವಿದ್ಯಾರ್ಥಿಗಳು ಜೊತೆಯಲ್ಲಿ ಹೋಗಿ ಮುಖ ತೊಳೆದುಕೊಂಡು‌ ಬಂದಿದ್ರು. ನಂತರ ಸ್ನೇಹಿತರಿಬ್ಬರ ಜೊತೆ ಕೌಶಿಕ್ ಹಾಗೂ ತೊಟ್ಟಿಯ ಬಳಿ ಹೋದಾಗ ತೊಟ್ಟಿಯ ಎರಡು ಕಡೆಯ ಗೋಡೆ ಒಮ್ಮೆಲೆ ಕುಸಿದಿದೆ.ಐದು ಅಡಿ ಎತ್ತರವಿರುವ ತೊಟ್ಟಿಯ ಶಿಥಿಲಗೊಂಡ ಗೋಡೆ ವಿದ್ಯಾರ್ಥಿಗಳ ಮೇಲೆ ಉರುಳಿದ ಪರಿಣಾಮ ಗೋಡೆಯ ಅವಶೇಷಗಳಡಿ ಸಿಲುಕಿದ್ದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಸ್ಥಳಕ್ಕೆ ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಮೃತ ವಿದ್ಯಾರ್ಥಿಯ ಶವವನ್ನ ದಯಾನಂದ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದ್ದು ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular