Saturday, November 23, 2024
Flats for sale
Homeರಾಜ್ಯರಾಮನಗರ : ಈಜಲು ತೆರಳಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು .

ರಾಮನಗರ : ಈಜಲು ತೆರಳಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು .

ರಾಮನಗರ : ಈಜಲು ತೆರಳಿದ್ದ ಮೂವರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ಬಳಿಯ ಮೇಕೆದಾಟು ಸಂಗಮದಲ್ಲಿ ನಡೆದಿದೆ .

ಅವರೆಲ್ಲರೂ‌ ಒಂದೇ ಕಾಲೇಜಿನ ಸ್ನೇಹಿತರು, ಕಾಲೇಜಿಗೆ ರಜೆ ಇದ್ದ ಹಿನ್ನಲೆ ಸ್ನೇಹಿತರೆಲ್ಲರೂ ಕನಕಪುರ ತಾಲ್ಲೂಕಿನ ಸಂಗಮದ ಕಾವೇರಿ ನದಿಗೆ ಪ್ರವಾಸಕ್ಕೆ ಬಂದಿದ್ದರು, ಈಜುಬಾರದೇ ಇದ್ರೂ ನದಿಗೆ ಇಳಿದ ಕಾರಣ 12 ವಿಧ್ಯಾರ್ಥಿಗಳ ಪೈಕಿ ಐವರು ನೀರುಪಾಲಾಗಿ ಸಾವನ್ನಪ್ಪಿದಾರೆ.ಇಂದು ಬೆಳ್ಳಂಬೆಳಿಗ್ಗೆ ಸಂಗಮಕ್ಕೆ ಪ್ರವಾಸಕ್ಕೆ ಬಂದಿದ್ದ ವಿಧ್ಯಾರ್ಥಿಗಳು ಎಲ್ಲಾ ಕಡೆ ಸುತ್ತಾಡಿದ ನಂತರ ಮಧ್ಯಾಹ್ನದ ವೇಳೆಗೆ ಸಂಗಮದಲ್ಲಿ ಈಜಲು ಐವರು ವಿಧ್ಯಾರ್ಥಿಗಳು ನೀರಿಗಿಳಿದಿದ್ದರು, ನೀರಿಗೆ ಇಳಿಯಬಾರದು ಎಂಬ ಸೂಚನೆ ಇದ್ರೂ ನೀರಿಗಿಳಿದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನೂಳಿದ ವಿದ್ಯಾರ್ಥಿಗಳು ಕಿರುಚಾಡ್ತಿದ್ದಂತೆ‌ ಕೂಡಲೇ ಅಲ್ಲಿನ ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ನೀರಿಗೆ ಧುಮುಕಿ ವಿಧ್ಯಾರ್ಥಿಗಳ ಮೃತ ದೇಹವನ್ನು ಹೊರತೆಗೆದಿದ್ದಾರೆ.

ಇನ್ನೂ ಮೃತರೆಲ್ಲರೂ ಒಂದೇ ಕಾಲೇಜಿನವರಾಗಿದ್ದು, ಹರ್ಷಿತ(20), ಅಭಿಷೇಕ್ ( 20), ತೇಜಸ್(21), ವರ್ಷ(20), ನೇಹಾ( 21) ಎಂದು ಗುರುತಿಸಲಾಗಿದೆ. ಇನ್ನೂಳಿದ 7 ವಿಧ್ಯಾರ್ಥಿಗಳು ಸೇಪ್ ಆಗಿದ್ದು, ಮೃತರೆಲ್ಲರೂ ಬೆಂಗಳೂರು ಮೂಲದವರೆಂದು ಗೊತ್ತಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ‌ ಕಾರ್ತಿಕ್‌ ರೆಡ್ಡಿ, ಎಎಸ್ಪಿ ಸುರೇಶ್, ಡಿವೈಎಸ್ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜುಬಾರದ ಹಿನ್ನಲೆ ನೀರಿಗಿಳಿದು ಸಾವನ್ನಪ್ಪಿರೋದು ಧೃಡವಾಗಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಲು ದಯಾನಂದ ಸಾಗರ್ ಆಸ್ಪತ್ರೆಗೆ ಮೃತ ದೇಹಗಳನ್ನು ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಮಾಹಿತಿ ಪಡೆದು ನಂತರ ಮೃತದೇಹ ಹಸ್ತಾಂತರಿಸಲಾಗುವುದು, ಈ ಸಂಬಂಧ ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನೀರುಪಾಲಾದ ಐವರು ವಿದ್ಯಾರ್ಥಿಗಳು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಐವರು ಶವವನ್ನ ಹೊರ ತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಸಾತನೂರು ಠಾಣೆ ಪೋಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular