ರಾಮನಗರ : 19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಠಾಣೆ ಪೊಲೀಸರಿಂದ ಮೂವರು ಯುವಕರನ್ನು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ವಿಕಾಸ್, ಪ್ರಶಾಂತ್, ಚೇತನ್ ಬಂಧಿತ ಆರೋಪಿಗಳು.
ಮಾಗಡಿ ಪಟ್ಟಣದಲ್ಲಿ ನಡೆದಿರೋ ಘಟನೆ
ಬೆಂಗಳೂರಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ
ಪ್ರಾರಂಭದಲ್ಲಿ ಪ್ರೀತಿಯ ನೆಪದಲ್ಲಿ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ವಿಕಾಸ್ ಆನಂತರ ಯುವತಿ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ನಾನು ಕರೆದಾಗಲೆಲ್ಲ ಬರಬೇಕು ಎಂದು ಬೆದರಿಕೆ ಹಾಕಿದ್ದು ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡು ಮತ್ತೆ ಬೆದರಿಕೆ ಹಾಕಿದ್ದಾರೆ.
ಆನಂತರ ಪ್ರಶಾಂತ್, ಚೇತನ ಎಂಬುವವರನ್ನು ಜೊತೆಗೆ ಸೇರಿಸಿಕೊಂಡು ವಿದ್ಯಾರ್ಥಿನಿ ಮೇಲೆ ಆತ್ಯಾಚಾರ ನಡೆಸಿದ್ದು ಈ ಹಿನ್ನೆಲೆ ಮಾಗಡಿ ಯುವತಿ ಠಾಣೆಗೆ ದೂರು ನೀಡಿದ್ದು ಮಾಗಡಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದಾರೆ.


