Tuesday, January 28, 2025
Flats for sale
Homeರಾಜಕೀಯಬೆಂಗಳೂರು : ರಾಜ್ಯ ಬಿಜೆಪಿಯ ಬಿ ಟೀಮ್ ನಿಂದ ವಕ್ಫ್ ವಿರುದ್ದ ಜನಜಾಗೃತಿ ಅಭಿಯಾನ,ಪ್ರತ್ಯೇಕ ಹೋರಾಟ...

ಬೆಂಗಳೂರು : ರಾಜ್ಯ ಬಿಜೆಪಿಯ ಬಿ ಟೀಮ್ ನಿಂದ ವಕ್ಫ್ ವಿರುದ್ದ ಜನಜಾಗೃತಿ ಅಭಿಯಾನ,ಪ್ರತ್ಯೇಕ ಹೋರಾಟ ..!

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ಮುನ್ನಲೆಗೆ ಬಂದಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರೋಧಿ ಗುಂಪು ವಕ್ಫ್ ವಿರುದ್ದ ಜನಜಾಗೃತಿ ಅಭಿಯಾನವನ್ನು ಕೈಗೊಳ್ಳುವ ಘೋಷಣೆ ಮಾಡುವ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಡ್ಡು ಹೊಡೆದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ವಿರೋಧಿ ಗುಂಪಿನಲ್ಲಿರುವ ನಾಯಕರುಗಳಾದ ಶಾಸಕ ಬಸನಗೌಡಪಾಟೀಲ್ ಯತ್ನಾಳ್, ಮಾಜಿ ಸಚಿವರುಗಳಾದ ಅರವಿಂದ ಲಿAಬಾವಳಿ, ರಮೇಶ್ ಜಾರಕಿಹೊಳಿ
ಇವರುಗಳೆಲ್ಲಾ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕುಮಾರ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿ ನಂತರ ಸುದ್ದಿಗೋಷ್ಠಿ ನಡೆಸಿ ನ. 25 ರಿಂದ ಡಿಸೆಂಬರ್ 25 ರವರೆಗೆ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನವನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದರು.

ಈ ಅಭಿಯಾನ ಬೀದರ್‌ನಿಂದ ಆರAಭವಾಗಲಿದೆ. ಬೀದರ್,ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ,ಬೆಳಗಾವಿ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ ಎಂದರು. ಈ ಅಭಿಯಾನದ ನಂತರ ಸಾರ್ವಜನಿಕರ ಅಭಿಪ್ರಾಯವನ್ನು ಜೆಪಿಸಿಗೆ ಸಲ್ಲಿಸುತ್ತೇವೆ ಎಂದರು.

ಈ ಜನ ಜಾಗೃತಿ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಅವರ ಮೌನವೇ ಸಮ್ಮತಿ ಎಂದು ಹೇಳಿದರು. ಈ ಜನ ಜಾಗೃತಿ ಅಭಿಯಾನಕ್ಕೆ ಹೈಕಮಾಂಡ್‌ನ ಒಪ್ಪಿಗೆ ಪಡೆದಿದ್ದೀರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಹೈಕಮಾಂಡ್‌ನಿAದ ಅನುಮತಿ ಪಡೆಯುವ ಪ್ರಶ್ನೆ ಇಲ್ಲಿ ಉದ್ಬವಿಸುವುದಿಲ್ಲ. ಈಗಾಗಲೇ ನಾನು ಬಿಜಾಪುರದಲ್ಲಿ ವಕ್ಪ್ ವಿರುದ್ಧ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಅವರು ಹೋರಾಟಕ್ಕೆ ಬಂದಿದ್ದರು. ಇದಕ್ಕೆ ನಮ್ಮ ನಾಯಕರ ಬೆಂಬಲ ಇದೆ ಎಂಬುದನ್ನು ತೋರಿಸುತ್ತದೆ.

ಬಿಜೆಪಿ ಸರ್ವಾಂತರ್ಯಾಮಿ, ಬಿಜೆಪಿ ಪಕ್ಷ ಎಲ್ಲ ಕಡೆ ಇದೆ. ಬಿಜೆಪಿಯ ಹೋರಾಟದಲ್ಲಿ ಯಾರೂ ಬೇಕಾದರೂ ಪಾಲ್ಗೊಲ್ಲಬಹುದು. ನಮ್ಮ ಅಭಿಯಾನ ಜನರ ಹಿತದೃಷ್ಟಿಯಿಂದ ಅಷ್ಟೇ. ಬಿಜೆಪಿ ಪಕ್ಷ ಇದರ ನೇತೃತ್ವ
ವಹಿಸಬೇಕು ಎಂದು ಅಭಿಯಾನ ಮಾಡುತ್ತಿದ್ದೇವೆ. ಯಾರೂ ಬಂದರೂ ಅಭಿಯಾನ ನಡೆಯುತ್ತದೆ, ಬರದಿದ್ದರೂ ಅಭಿಯಾನವನ್ನು ನಡೆಸುತ್ತೇವೆ ಎಂದರು.

ಈ ಅಭಿಯಾನದಲ್ಲಿ ಕಾಂಗ್ರೆಸ್ ನಾಯಕರು, ಸಂಸದರು ಪಾಲ್ಗೊಳ್ಳಬಹುದು ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್ ನಾಯಕರು ಬರದಿದ್ದರೂ ಅಭಿಯಾನ ನಡೆಸುತ್ತೇವೆ ಎಂದರು.

ಕರ್ನಾಟಕದಲ್ಲಿ ಆರು ಲಕ್ಷ ಎಕರೆಯನ್ನು ವಕ್ಪ್ ಆಸ್ತಿ ಮಾಡಲು ಸರ್ಕಾರ ಮುಂದಾಗಿದೆ. ೨೭೦೦ ಎಕರೆ ಜಮೀನನ್ನು ಕಬರಸ್ಥಾನ ಕೊಡಲು ಕಂದಾಯ ಇಲಾಖೆ ನಿರ್ಣಯ ಮಾಡಿದೆ ಎಂದು ಕಿಡಿಕಾರದಿರು.

ವಕ್ಪ್ ಸಚಿವ ಜಮೀರ್ ಅಹಮದ್ ಖಾನ್ ನಮ್ಮನ್ನು ಸೈಥಾನ್‌ಗೆ ಹೋಲಿಸುತ್ತಿದ್ದಾರೆ, ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದಾರೆ ಎಂದು ದೂರಿದ ಅವರು, ಕೆಲವು ಮುಸ್ಲಿಂ ಸಮುದಾಯದ ಕೆಲವರು ಜಮೀರ್ ನಡವಳಿಕೆಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಅಭಿಯಾನದ ಉದ್ದೇಶ ಬೇಡಿಕೆ ಈ ಅಭಿಯಾನದ ಉದ್ದೇಶ ವಕ್ಪ್ ಟ್ರಿಬನಲ್ ರದ್ದಾಗಬೇಕು ಎಂದು ಅವರು ಸ್ಪಷ್ಟಪಡಿಸಿದರು. ವಕ್ಪ್ ಆದೇಶದಿಂದ ರೈತರು, ಮಠಗಳಿಗೆ ಅನ್ಯಾಯವಾಗುತ್ತಿದೆ. ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನ ಆಗಬೇಕು ಎಂಬುದು ನಮ್ಮ ಬೇಡಿಕೆ. ನೋಟಿಸ್ ವಾಪಸ್ ಪಡೆದರೆ ಸಾಲದು ವಕ್ಫ್ ಟ್ರಿಬನಲ್ ರದ್ದಾಗಬೇಕು. ಇದನ್ನೇ ಮುಂದಿಟ್ಟುಕೊAಡು ಜನಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ ಎಂದರು

RELATED ARTICLES

LEAVE A REPLY

Please enter your comment!
Please enter your name here

Most Popular