ರಬಕವಿ-ಬನಹಟ್ಟಿ : ಕೆಲ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ನಮೂದಾಗಿರುವ ವಿಷಯ ತಾಲೂಕಿನಾದ್ಯಂತ ಪ್ರತಿಧ್ವನಿಸಿದೆ. ಹೊಸೂರಿನ ಮಸಣವಾಟ(ಸ್ಮಶಾನ)ದ ಪಹಣಿ ಉತಾರೆಯಲ್ಲಿ ಖಬರಸ್ಥಾನ ಸುನ್ನಿ ವಕ್ಫ್ ಆಸ್ತಿ ಹೆಸರು ದಾಖಲಾಗಿರುವುದು ಈಗ ಬೆಳಕಿಗೆ ಬಂದಿದೆ.
ಪಟ್ಟಣದ ಸರ್ವೆ ನಂ.64ರಲ್ಲಿರುವ 1.29 ಗುಂಟೆ ಜಾಗದ ಪಹಣಿಯು 2020ರ ಅ. 13ರಿಂದ ಖಬರಸ್ಥಾನ ಸುನ್ನಿ ವಕ್ಫ್ ಹೆಸರಿನಲ್ಲಿ ನಮೂದಾಗಿದೆ. ಪಹಣಿ ಚಿತ್ರ ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ.
ನಿರ್ವಹಣೆ: ಈ ಮೊದಲು ಸಣ್ಣವ್ವ ಕೋಲಾರ ಎಂಬುವರು ಸರ್ಕಾರಕ್ಕೆ ನೀಡಿದರನ್ವಯ 1.29 ಎಕರೆಯಷ್ಟು ಪ್ರದೇಶದಲ್ಲಿ 1 ಎಕರೆ ಮಸಣವಾಟ (ಸ್ಮಶಾನ)ವಾಗಿ ಹಲವಾರು ವರ್ಷಗಳಿಂದ ಈಗಿನವರೆಗೂ ನಿರ್ವಹಣೆಯಾಗುತ್ತಿದೆ. ಉಳಿದ 29 ಗುಂಟೆಯಷ್ಟು ಜಾಗೆಯು ಖಬರಸ್ಥಾನ ನಿರ್ವಹಿಸುತ್ತಿದೆ. ಇದೀಗ ಎಲ್ಲ 1.29 ಎಕರೆಯಷ್ಟು ಜಾಗೆ ಖಬರಸ್ಥಾನ ಸುನ್ನಿ ವಕ್ಫ್ ಎಂದಾಗಿರುವ ದಾಖಲೆ ಜನರನ್ನು ಆಶ್ಚರ್ಯಗೊಳಿಸಿದೆ.


