ಯಾದಗಿರಿ : ನಗರದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಲು ಜನ ಮುಗಿಬಿದ್ದ ಘಟನೆ ವರದಿಯಾಗಿದೆ.
ಮದ್ಯಪ್ರಾಚ್ಯ ರಾಷ್ಟ್ರಗಳ ಯುದ್ದ ಹಿನ್ನಲೆ ಪೆಟ್ರೋಲ್ ಕೊರತೆ ವದಂತಿ ಹರಡಿದ್ದ ಹಿನ್ನಲೆ, ರಾತ್ರೋ ರಾತ್ರಿ ಪೆಟ್ರೋಲ್ ಬಂಕ್ ಗಳಿಗೆ ಜನ ಬಂದು ಪೆಟ್ರೋಲ್ ತುಂಬಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಕೊರತೆ ವದಂತಿ ಬಗ್ಗೆ ಮಾಹಿತಿ ವೈರಲ್ ಆಗಿದ್ದು ಈ ಹಿನ್ನೆಲೆ ಕೈಯಲ್ಲಿ ಖಾಲಿ ಬಾಟ್ ತೆಗೆದುಕೊಂಡು ಬಂದು ಜನ ಪೆಟ್ರೋಲ್ ಬಂಕ್ ಬಳಿ ಮುಗಿಬಿದ್ದಿದ್ದಾರೆ.ಬಳಿಕ ಮನೆಗೆ ಪೆಟ್ರೋಲ್ ತೆಗೆದುಕೊಂಡು ವಾಹನ ಸವಾರರು ಹೋಗುತ್ತಿರುವುದು ಕಂಡುಬಂದಿದೆ.


