ಮೈಸೂರು : ಸುಡಾನ್ನಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರದ ನಿವಾಸಿ, ಹಕ್ಕಿಪಿಕ್ಕಿ ಜನಾಂಗದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ವರದಿಯಾಗಿದೆ .
ಪಕ್ಷಿರಾಜಪುರದಲ್ಲಿ ನಂದಿನಿ ಪತಿ ಹಾಗೂ ಮಕ್ಕಳು ವಾಸವಾಗಿದ್ದು ನಂದಿನಿ ಅವರು ಸುಡಾನ್ಗೆ ವ್ಯಾಪಾರಕ್ಕಾಗಿ ತೆರಳಿದ್ದರು ಎಂದು ತಿಳಿದುಬಂದಿದೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ನಂದಿಯವರನ್ನು ದುಸ್ಕರ್ಮಿಗಳು ಕೊಲೆಮಾಡಿದ್ದರೋ ಅಥವಾ ಅರೋಗ್ಯ ಸಮಸ್ಯೆಯಿಂದ ಸವನಪ್ಪಿದ್ದಾರೋ ಎಂಬ ಮಾಹಿತಿ ತಿಳಿದುಬಂದಿಲ್ಲ,ಸುಡಾನ್ನಲ್ಲಿರುವ ಭಾರತದ ರಾಯಭಾರಿ ಜೊತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮಾತನಾಡಿದ್ದು, ಮೃತದೇಹನ್ನು ದೇಶಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಂದಿನಿ ಮೃತದೇಹ ಏ.17 ರಂದು ಹುಣಸೂರಿಗೆ ಕರೆತರುವ ಸಾಧ್ಯತೆವಿದೆ ಎಂಬ ಮಾಹಿತಿ ದೊರೆತಿದೆ.