Sunday, March 15, 2026
Flats for sale
Homeರಾಜ್ಯಮೈಸೂರು : ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಹುಲಿ ಪ್ರತ್ಯಕ್ಷ,ಆತಂಕದಲ್ಲಿ ಸ್ಥಳೀಯ ನಿವಾಸಿಗಳು.

ಮೈಸೂರು : ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಹುಲಿ ಪ್ರತ್ಯಕ್ಷ,ಆತಂಕದಲ್ಲಿ ಸ್ಥಳೀಯ ನಿವಾಸಿಗಳು.

ಮೈಸೂರು : ಮಾನವನು ಅಕ್ರಮವಾಗಿ ಅರಣ್ಯಪ್ರದೇಶಗಳನ್ನು ಅತಿಕ್ರಮಣ ಪ್ರವೇಶಿಸಿದ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬಂದು ಜನರನ್ನು ಭಯಬೀತರನ್ನಾಗಿಸಿದೆ .ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದ ಮೂರು ಹುಲಿಗಳು ಇದುವರೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿಲ್ಲ.ಆದರೆ ಈ ಹುಲಿಗಳಲ್ಲಿ ಕೆಲವು, ಮೈಸೂರು ಜಿಲ್ಲೆಯ ಗಡಿ ದಾಟಿ ನೆರೆಯ ಮಂಡ್ಯ ಜಿಲ್ಲೆ ಪ್ರವೇಶಿಸಿರುವ ಪ್ರಬಲ ಶಂಕೆವ್ಯಕ್ತವಾಗಿದೆ.

ಇದಕ್ಕೆ ಸಾಕ್ಷಿಯೆಂಬAತೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಮಹದೇವಪುರ ಬಳಿ ಹುಲಿಯ ಹೆಜ್ಜೆ ಗುರುತುಗಳು ಕಂಡು ಬAದಿವೆ. ಇದು ಹುಲಿಯದೇ ಹೆಜ್ಜೆ ಎಂದೂ ಸಹ ತಜ್ಞರು ಖಚಿತಪಡಿಸಿದ್ದಾರೆ.

ಮೈಸೂರು ನಗರದ ಹೊರ ವಲಯ ಹಾಗು ಗ್ರಾಮಾಂತರದ ಕಡಕೊಳ, ತಾಂಡ್ಯ ಹಾಗು ಇನ್ನಿತರ ಕೈಗಾರಿಕಾ ಪ್ರದೇಶದ ಬಳಿ ಮೂರು ಹುಲಿಗಳು ಕಾಣಿಸಿಕೊಂಡಿದ್ದವು. ಇವು ಬೆಳಗಿನ ವೇಳೆ ಕಬ್ಬು ಮತ್ತು ಬಾಳೆ ತೋಟಗಳಲ್ಲಿ ಅಡಗಿಕೊಂಡು ರಾತ್ರಿ ವೇಳೆ ವಿವಿಧ ಕಡೆ ಸಂಚರಿಸುತ್ತಿದ್ದವು. ಹುಲಿಗಳ ಓಡಾಟ ಕ್ಯಾಮರಾಗಳಲ್ಲಿ ಕಂಡು ಬರುತ್ತಿತ್ತಾದರೂ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಒಂದು ಹುಲಿಯೂ ಇದುವರೆಗೂ ಬಿದ್ದಿಲ್ಲ. ಬಹಳ ಚಾಣಾಕ್ಷತೆಯಿಂದ ಅರಣ್ಯ ಇಲಾಖೆಯವರ ಕರ‍್ಯಾಚರಣೆ ತಪ್ಪಿಸಿಕೊಳ್ಳುತ್ತಿರುವ ಈ ಹುಲಿಗಳು ಈಗಲೂ ಸಹ ರಾತ್ರಿ ವೇಳೆ ಸಂಚರಿಸುತ್ತಿವೆ. ಇಲಾಖೆಯವರು ಇಂದಿಗೂ ಸಹ ಅಲ್ಲಲ್ಲಿ ಕಾವಲು ಹೆಚ್ಚಿಸಿ ಹುಲಿ ಸೆರೆಗೆ
ಯತ್ನಿಸುತ್ತಿದ್ದರೂ ಇದು ಫಲಕೊಟ್ಟಿಲ್ಲ. ಇದೇ ಹುಲಿಇರಬಹುದು ಮೈಸೂರು ಗ್ರಾಮಾಂತರ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಕಂಡು ಬಂದಿದ್ದ ಮೂರು ಹುಲಿಗಳಲ್ಲಿ ಒಂದು ಅಥವಾ ಎರಡು ಹುಲಿಗಳು ಮಂಡ್ಯದತ್ತ ಹೋಗಿಬರಬಹುದು ಎಂದು ಈಗ ಊಹಿಸಲಾಗುತ್ತಿದೆ.

ಚನ್ನಹಳ್ಳಿ,ಅರಕೆರೆ, ಮಹದೇವಪುರ ಮತ್ತು ಇನ್ನಿತರ ಮಗಳು ಕಾವೇರಿ ಮಡಿಲಿನ ಹಸಿರು ಪರಿಸರದಲ್ಲಿವೆ. ಹೀಗಾಗಿ ಇಲ್ಲಿ ಹುಲಿಗಳಿಗೆ ಕಾಡು ಹಂದಿಗಳು, ಮೊಲಗಳು, ಆಗಾಗ್ಗೆ ನಾಯಿಗಳು, ಗ್ರಾಮೀಣರು ಸಾಕಿರುವ ಆಡು ಕುರಿಗಳು ಈ ಹುಲಿಗಳಿಗೆ ತಿನ್ನಲು ಸಿಗುತ್ತಿವೆ. ಹೀಗಾಗಿ ಹಗಲು ವೇಳೆ ಜನರ ಕಣ್ಣಿಗೆ ಬೀಳದಂತೆ ರಾತ್ರಿ ವೇಳೆಯಷ್ಟೇ ಅವಿತುಕೊಂಡು ಸಂಚರಿಸುತ್ತಿರಬಹುದು ಎಂಬ ಮಾಹಿತಿಇದೆ.

ಹೀಗಾಗಿ ಜನತೆ ಹೆಚ್ಚಿನ ಜಾಗ್ರತೆ ವಹಿಸುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಎಚ್ಚರಿಕೆ ಈ ನಡುವೆ ಶ್ರೀರಂಗಪಟ್ಟಣ ಗಡಿ ಭಾಗದಲ್ಲಿ ಕಂಡು ಬಂದಿರುವ ಹೆಜ್ಜೆಯು ಹುಲಿಯದೇ ಎನ್ನುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಭಾಗದಲ್ಲಿ ಹುಲಿ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ಹೊರಡಿಸಿದೆ. ಇದೇ ವೇಳೆ ಹುಲಿ ಸೆರೆಗೆ ಅಗತ್ಯವಿರುವ ಕಾರ್ಯಾಚರಣೆಯನ್ನೂ ಆರಂಭಿಸಿದೆ ಎಂಬ ಮಾಹಿತಿ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular