Monday, March 16, 2026
Flats for sale
Homeರಾಜ್ಯಮೈಸೂರು ; ಲೋ.. ಬಿ.ಪಿ ಯಿಂದ 13 ವರ್ಷದ ಬಾಲಕ ಸಾವು…!

ಮೈಸೂರು ; ಲೋ.. ಬಿ.ಪಿ ಯಿಂದ 13 ವರ್ಷದ ಬಾಲಕ ಸಾವು…!

ಮೈಸೂರು : ನಂಜನಗೂಡು ತಾಲೂಕಿನ ತರಗನಹಳ್ಳಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಲೋ ಬಿಪಿಯಿಂದಾಗಿ ಕುಸಿದು ಬಿದ್ದು 13 ಮ ಬಾಲಕ ಮೃತಪಟ್ಟ ಘಟನೆ ನಡೆದಿದೆ.

ತರಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಮಹಾಂತೇಶ (13) ಲೋ ಬಿಪಿಯಿಂದ ಮೃತಪಟ್ಟ ಬಾಲಕ.

ಅನಾರೋಗ್ಯದ ಕಾರಣ ಗುರುವಾರ ರಾತ್ರಿ ಮಹಾಂತೇಶ್ ನನ್ನು ಸಮೀಪದ ಹುಲ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷೆ ನಡೆಸಿದಾಗ ಲೋ ಬಿಪಿ ಕಂಡು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular