Thursday, March 12, 2026
Flats for sale
Homeರಾಜ್ಯಮೈಸೂರು: ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್ ವೇ ನಲ್ಲಿ ಭೀಕರ ಅಪಘಾತ! KSRTC ಕಂಡಕ್ಟರ್​​ ಸಾವು!

ಮೈಸೂರು: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ವೇ ನಲ್ಲಿ ಭೀಕರ ಅಪಘಾತ! KSRTC ಕಂಡಕ್ಟರ್​​ ಸಾವು!

ಮೈಸೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಮನಗರದ ಜೈಪುರ ಗೇಟ್ ಬಳಿ ದುರ್ಘಟನೆ ನಡೆದಿದ್ದು, ಪ್ಲೈವುಡ್ ತುಂಬಿದ್ದ ಬೊಲೆರೋ ಗಾಡಿಗೆ ಕೆಎಸ್​ಆರ್​ಟಿಸಿ ಎಲೆಕ್ಟ್ರಿಕ್​​​ ಬಸ್​​ ಡಿಕ್ಕಿ ಹೊಡೆದಿದೆ.

ಅಪಘಾತ ರಭಸಕ್ಕೆ ಬೆಂಗಳೂರು ಕಡೆ ಹೋಗುತ್ತಿದ್ದ ಬಸ್​ ಮೈಸೂರು ಕಡೆಗೆ ಹೋಗುವ ರಸ್ತೆ ದಾಟಿ ಹೆದ್ದಾರಿ ದಾಟಿ ಜಮೀನಿಗೆ ಬಂದು ನಿಂತಿದೆ. ಸ್ಥಳದಲ್ಲೇ ಬಸ್ ನಿರ್ವಾಹಕ ಸಾವನ್ನಪ್ಪಿದ್ದು, ಚಾಲಕ ಸೇರಿ‌ 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕ/ಕಂ ನಿರ್ವಾಹಕ ರಮೇಶ್ ಜಿ ಮೃತಪಟ್ಟಿದ್ದಾರೆ.

ರಾಮನಗರ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳು ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪ ಮಿಲ್ಕಿ ಮಿಸ್ಟ್ ವಾಹನ ಅಪಘಾತ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದಾರೆ. ಅತ್ತಿಬೆಲೆ ಸರ್ಕಲ್ ಬಳಿ ಮುಂಜಾನೆ ದುರ್ಘಟನೆ ಸಂಭವಿಸಿದ್ದು, ಚಾಲಕ ಕಾರ್ತಿಕ್(35) ಕ್ಲೀನರ್ ಉದಯ್ (30) ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್​ಗೆ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಬಳಿಕ ಮಿಲ್ಕಿ ಮಿಸ್ಟ್ ವಾಹನ ಮುಗುಚಿ ಬಿದ್ದಿದೆ. ವಾಹನದಲ್ಲಿದ್ದ ಲಕ್ಷಾಂತರ ಮೌಲ್ಯದ ಹಾಲು ಮೊಸರು ವ್ಯರ್ಥವಾಗಿದೆ.

ಬ್ಯಾರಿಕೇಡ್ ಗಳ ನಡುವೆ ಡ್ರೈವಿಂಗ್ ಕ್ಯಾಬಿನ್ ಜಾಮ್ ಆಗಿದ್ದು, ಕ್ಯಾಬಿನ್ ನಲ್ಲಿದ್ದ ಚಾಲಕ, ಕ್ಲೀನರ್ ಇಬ್ಬರು ಸಾವನ್ನಪ್ಪಿದ್ದಾರೆ. ಬೊಮ್ಮಸಂದ್ರ ಗೋದಾಮಿನಿಂದ ಹೊಸಕೋಟೆ ಕಡೆ ಸಾಗುತ್ತಿದ್ದ ವೇಳೆ ವಾಹನಕ್ಕೆ ಅಪಘಾತ ಸಂಭವಿಸಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular