ಮೈಸೂರು ; ಮೈಸೂರು ಸಂಸ್ಥಾನದ ಒಡೆಯರಾದ ಬಿಜೆಪಿ ಅಭ್ಯರ್ಥಿ ಯದುವೀರ್ ರಾಜ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ನಾಲಗೆ ಹರಿಯಬಿಟ್ಟಿದ್ದಾರೆ . ಮೈಸೂರಿಗೆ ಈ ಮನೆತನದ ಕೊಡುಗೆ ಅಪಾರ ಜನಸಾಮನ್ಯರು ಮೈಸೂರಲ್ಲಿ ನೆಲೆಸುವ ಪ್ರತಿಯೊಂದು ಭೂಮಿ ರಾಜಮನೆತನಕ್ಕೆ ಸೇರಿದ್ದು ಎಂಬುದು ಈ ನಾಯಕರಿಗೆ ತಿಳಿದಿಳಿಯದಿರುವುದು ವಿಪರ್ಯಾಸ. ಜನರ ನಾಡಿಮಿಡಿತವನ್ನು ಹರಿಯದವರು ದಂತದ ಗೋಪುರದಲ್ಲಿ ಇದ್ದವರು ಅವರಿಗೆ ಯಾವತ್ತೂ ಜನರ ಮಧ್ಯೆ ಇದ್ದು ಗೊತ್ತಿಲ್ಲ ಎಂದು ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇವರಿಗೆ ಜನರ ಸಮಸ್ಯೆಗಳು ಏನೂ ಅಂತ ಗೊತ್ತಿಲ್ಲ. ನೀವ್ಯಾರು ಅರಮನೆ ಮುಂದೆ ಹೋಗಿ ನಿಂತುಕೊಳ್ಳಲು ಆಗಲ್ಲ. ಕಾರ್ಯಕರ್ತರು ಹೋಗಿ ಭೇಟಿ ಮಾಡೊಕೆ ಆಗಲ್ಲ. ಇನ್ನು ಜನಸಾಮಾನ್ಯರು ಭೇಟಿ ಮಾಡಲು ಸಾಧ್ಯವಾ ಎಂದು ಪ್ರಶ್ನಿಸುವ ಮೂಲಕ ಟೀಕಿಸಿದ್ದಾರೆ.
ಮೈಸೂರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರವಾಗಿ ಪ್ರಚಾರ ನಡೆಸಿದ ಅವರುಅಂದು ಬಿಜೆಪಿ ಅಭ್ಯರ್ಥಿ ಯಾರು ಎಂದು ಗೊತ್ತಿಲ್ಲ ಅಂತಾ ಕಾಂಗ್ರೆಸ್ ಸಚಿವ ಕೆ.ವೆಂಕಟೇಶ್ ಹೇಳಿದ್ದರು. ಇಂದು ಬಿಜೆಪಿ ಅಭ್ಯರ್ಥಿಗಿಂತಲೂ ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ ಉತ್ತಮ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ ಆರೋಫ ಪ್ರತ್ಯಾರೋಪ ನಡೆದಿದೆ.