Friday, November 22, 2024
Flats for sale
Homeರಾಜ್ಯಮೈಸೂರು : ಬಂಧಿತ ಆರೋಪಿಗಳು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಐಟಿ ಸೆಲ್​ನಲ್ಲಿ ಕೆಲಸಮಾಡುತ್ತಿದ್ದ :...

ಮೈಸೂರು : ಬಂಧಿತ ಆರೋಪಿಗಳು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಐಟಿ ಸೆಲ್​ನಲ್ಲಿ ಕೆಲಸಮಾಡುತ್ತಿದ್ದ : ಎಂ ಲಕ್ಷ್ಮಣ.

ಮೈಸೂರು : ಮೈಸೊರಿನಿನ ಯುವಕ ಸಂಸತ್ ಭವನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ್ದ ಘಟನೆ ಈಗ ಒಂದಕ್ಕೊಂದು ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ.ಬಂಧಿತರು ಸಂಸದ ಪ್ರತಾಪ್ ಸಿಂಹ ಐಟಿ ಸೆಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು. ಬಂಧಿತ ಮನೋರಂಜನ್, ಪ್ರತಾಪ್ ಸಿಂಹ ಬಹಳ ಹತ್ತಿರವಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನ ನಗದರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲಕ್ಷ್ಮಣ್ ಮೈಸೂರು, ಮಡಿಕೇರಿ ಹಾಗೂ ಡೆಲ್ಲಿಯಲ್ಲಿ ಇವರ ಜೊತೆ ಸಭೆ ನಡೆಸಿದ್ದಾರೆ. ಪ್ರತಾಪ್ ಜೊತೆ ಒಂದು ಸಭೆಯು ಆಗಿದೆ. ಆದರೆ ಯಾವಾಗ ಸಭೆ ಆಗಿದೆ ಎಂದು ಗೊತ್ತಿಲ್ಲ. ಪ್ರತಾಪ್ ಸಿಂಹ ಕಚೇರಿ ಸೀಜ್ ಮಾಡಬೇಕು ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ದಾಖಲೆ ಇಲ್ಲದೆ ನಾವು ಮಾತನಾಡುತ್ತಿಲ್ಲ. ನಾಳೆ ನ್ಯಾಷನಲ್ ಸೆಕ್ಯೂರಿಟಿ ಕೇಳಿದರೆ ದಾಖಲೆ ನೀಡಬೇಕಾಗುತ್ತದೆ,ಆದರಿಂದ ನಾವು ಹೇಳುವ ವಿಷಯ ಸತ್ಯಕ್ಕೆ ಹತ್ತಿರವಾದದ್ದು ಎಂದಿದ್ದಾರೆ.ಇದರ ಬಗ್ಗೆ ಸಮಗ್ರ ತನಿಖೆ ನಡೆದರೆ ಎಲ್ಲವೂ ಹೊರಬರುತ್ತೆ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರು, ಸಚಿವರು, ಗೃಹ ಸಚಿವರು ಒಬ್ಬರು ಪ್ರತಿಕ್ರಿಯೆ ನೀಡಿಲ್ಲ,ಇಲ್ಲ ಸಲ್ಲದಕ್ಕೆ ಟ್ವೀಟ್ ಮಾಡುವ ಸಿಂಹ ಕೂಡ ಘಟನೆ ನಡೆದು 24 ಗಂಟೆಯಾದರೂ ಒಂದು ಟ್ವೀಟ್​ ಮಾಡಿಲ್ಲ, ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡಿಲ್ಲ,ಪ್ರತಾಪ್ ಸಿಂಹ ಏಲ್ಲಿ? ಡೆಲ್ಲಿ, ಕೊಡಗಿನಲ್ಲಿದ್ದಾರಾ? ಕಾಣೆಯಾಗಿದ್ದರ ? ವ್ಯಕ್ತಿ ಸೈಲೆಂಟ್ ಆಗಿರಲು ಕಾರಣವೇನು? ಇದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ, ನಾಳೆ ದಿನ ಕಾಂಗ್ರೆಸ್​ನವರೇ ಈ ಘಟನೆ ಮಾಡಿಸಿದ್ದೀರಿ ಎಂದು ಕತೆ ಕಟ್ಟಬಹುದು ಎಂದು ಕಿಡಿಕಾರಿದ್ದಾರೆ.

ಇದು ಪೂರ್ವ ನಿಯೋಜಿತ ಕೃತ್ಯ ನಾಲ್ಕು ಲೇಯರ್ ಸೆಕ್ಯೂರಿಟಿ ಹೇಗೆ ದಾಟಿ ಹೋಗಿದ್ದಾರೆ.ನಿನ್ನೆಯ ಘಟನೆಯಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ ಅಥವಾ ಆ ಲೆಟರ್ ಕಾಂಗ್ರೆಸ್​ನವರು ನೀಡಿದ್ದರೆ ಇಷ್ಟೊತ್ತಿಗೆ ದೇಶವೇ ಹೊತ್ತಿ ಉರಿಯುತ್ತಿತ್ತುಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular