ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಮಚ್ಚಿನ ಸದ್ದು ಕೇಳಿಬಂದಿದೆ. ಇಬ್ಬರು ಮಹಿಳೆಯರು, ಒಬ್ಬ ಪುರುಷರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಗರದ ಅಗ್ರಹಾರದ ರಾಮನುಜ ರಸ್ತೆಯಲ್ಲಿ ನಡೆದಿದೆ.
ರಸ್ತೆಯ ಮದ್ಯೆ ಆಟೋ ರಿಕ್ಷಾವನ್ನು ಅಡ್ಡ ಹಾಕಿ ರಾಜಾರೋಷವಾಗಿ ಬಂದು ವ್ಯಕ್ತಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.ಇಬ್ಬರು ಮಹಿಳೆಯರು, ಒಬ್ಬ ಪುರುಷ ಆಟೋದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರೊಂದು ಆಟೋವನ್ನು ಹಿಂದಿನಿಂದ ಫಾಲೋ ಮಾಡಿ ಬಂದಿದ್ದು ರಾಮನುಜ ರಸ್ತೆಯಲ್ಲಿ ಆಟೋ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆನಡೆಸಿದ ವಿಡಿಯೋ ವೈರಲ್ ಆಗಿದೆ.
ನಡು ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸುತ್ತಿದ್ದ ವೇಳೆ ಮಹಿಳೆಯರು ಕೂಗಾಡಿದ್ರು ಬಿಡದೆ ಹಲ್ಲೆ ಹಂತಕರು ನಡೆಸಿದ್ದಾರೆ. ಮಚ್ಚು ಹಿಡಿದು ರಾಜಾರೋಷವಾಗಿ ರಸ್ತೆಯಲ್ಲಿ ನಾವೇ ಕತ್ತರಿಸೋದು ಎಂದು ಹಂತಕರು ಕೂಗಿದ್ದು ಭಯವಿಲ್ಲದೆ ನಡು ರಸ್ತೆಯಲ್ಲಿ ಮಚ್ಚು ಹಿಡಿದ ಇಬ್ಬರು ದುಷ್ಕರ್ಮಿಗಳು. ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಒಬ್ಬ ಮಹಿಳೆಗೆ ಗಂಭೀರ ಗಾಯ ಆಸ್ಪತ್ರೆ ದಾಖಲಿಸಿದ್ದು ಮತ್ತಿಬ್ಬರು ಗಾಯಗೊಂಡಿದ್ದಾರೆ. ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನಡು ರಸ್ತೆಯಲ್ಲಿ ನಡೆದ ಘಟನೆಯಿಂದ ಮೈಸೂರಿನ ಜನ ಬೆಚ್ಚಿಬಿದ್ದಿದ್ದಾರೆ.