ಮೈಸೂರು : ಚುನಾವಣೆಯ ರ್ಯಾಲಿಯ ಸಮಯದಲ್ಲಿ ಹಣ ಕೊಟ್ಟು ಜನರನ್ನು ಕರೆತರುವುದು ಎಲ್ಲರಿಗೂ ತಿಳಿದಿರುವ ವಿಚಾರ ಅಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವರುಣಾ ಕ್ಷೇತ್ರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಜನ ಎದ್ದು ಹೋಗುತ್ತಿರುವಾಗ ಅಂಗಲಾಚಿ ಬೇಡಿಕೊಳ್ಳುವ ಪರಿಸ್ಥಿತಿ ಮುಖ್ಯಮಂತ್ರಿಯವರಿಗೆ ಎದುರಾಗಿದೆ. ಜನ ಎದ್ದು ಹೊಗದಂತೆ ತಡೆಯಲು ಖುದ್ದು ಅವರೇ ಎದ್ದು ಬಂದು ಮನವಿ ಮಾಡಬೇಕಾಯಿತು.
ಬೇರೆ ಸಮಯದಲ್ಲಾಗಿದ್ರೆ ಏನಯ್ಯಾ,ಏಯ್ ಕೂತ್ಕೊಳ್ರಯ್ಯ ಎಂದು ಗಟ್ಟಿ ಧ್ವನಿಯಲ್ಲಿ ಗದರಿಬಿಡುತ್ತಿದ್ದರು. ಆದರೆ ಇದು ಚುನಾವಣೆ ಸಮಯ, ಗದರುವಂತಿಲ್ಲ ಈ ಸಮಯದಲ್ಲಿ ಗದರಿಸಿದರೆ ಜನ ಜಗ್ಗುವುದಿಲ್ಲ ಎಂದು ತಿಳಿದ ಸಿದ್ದರಾಮಯ್ಯ ದಯಮಾಡಿ ಯಾರೂ ಎದ್ದು ಹೋಗಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಅಂತ ಅವರು ಹೇಳುತ್ತಾರೆ.
ವರುಣಾ ಕ್ಷೇತ್ರ ಆದರೆ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆಯಿತು.ತನ್ನ ಕ್ಷೇತ್ರದಲ್ಲೇ ಹೀಗಾದರೆ ಬಹಳ ತಪ್ಪು ಸಂದೇಶ ರವಾನೆಯಾಗುತ್ತದೆ, ಸಭೆ ಮುಗಿಯುವರೆಗೆ ಯಾರೂ ಎದ್ದು ಹೋಗಬೇಡಿ, ಎಲ್ಲರ ಭಾಷಣ ಕೇಳಬೇಕು ಎಂದು ಅಂಗಲಾಚಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಡಾ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ದರ್ಶನ ಧ್ರುವನಾರಾಯಣ್, ಗಣೇಶ್, ಆರ್ ಕೃಷ್ಣಮೂರ್ತಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ವರುಣದಲ್ಲಿ 60 ಸಾವಿರ ಲೀಡ್ ಕೊಟ್ರೆ ನನ್ನ ಯಾರು ಮುಟ್ಟಕಾಗಲ್ಲ ಅಂದ್ರೆ. ಇತ್ತ ಯತೀಂದ್ರ ಕೂಡ ವಿರೋಧಿಗಳ ಟೀಕೆ ತಪ್ಪಿಸಲು ನಮ್ಮನ್ನು ಗೆಲ್ಲಿಸಿ ಅಂತಾ ಮನವಿ ಮಾಡಿದ್ದಾರೆ. ಭಾವನೆ ಬೆರೆಸಿ ಅಪ್ಪ-ಮಗ ಭಾಷಣ ಮಾಡಿದ್ದಾರೆ.3 ದಿನ ಪ್ರವಾಸ ಕೈಗೊಂಡಿರುವ ಸಿಎಂ ಬೂತ್ ನಾಯಕರ ಸಭೆ ಸೇರಿದಂತೆ ಹಲವು ರಣತಂತ್ರ ಹೆಣೆಯುತ್ತಿದ್ದಾರೆ. ಇದರ ಜೊತೆ ತವರಿನಲ್ಲೇ ಮತದಾರರ ಮುಂದೆ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಶತಾಯಗತಾಯ ಎರಡೂ ಕ್ಷೇತ್ರ ಗೆಲ್ಲಲು ಸಿದ್ದರಾಮಯ್ಯ ಪಣ ತೊಟ್ಟಿದ್ದು, ವರುಣಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿನಾನು ಇರಬೇಕಾ, ಬೇಡ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇರಬೇಕು ಅಂದ್ರೆ ಕಾಂಗ್ರೆಸ್ಅ ಭ್ಯರ್ಥಿ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.