Monday, March 16, 2026
Flats for sale
Homeರಾಜ್ಯಮೈಸೂರು : ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಅನುಭವದ ಕೊರತೆ,15 ದಿನವಾದರೂ ಸೆರೆ ಸಿಕ್ಕದ ಹುಲಿ.

ಮೈಸೂರು : ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಅನುಭವದ ಕೊರತೆ,15 ದಿನವಾದರೂ ಸೆರೆ ಸಿಕ್ಕದ ಹುಲಿ.

ಮೈಸೂರು: ಈ ಹಿಂದೆ ಚಿರತೆ ,ಕಾಡಾನೆ ಧಾಳಿ ನಡೆಸುತಿತ್ತು ಈಗ ಹುಲಿ ಧಾಳಿಯ ಬಗ್ಗೆ ಭಯಭೀತರಾದ ಮೈಸೂರಿನ ಗ್ರಾಮಗಳಲ್ಲಿ ಭೀತಿ ಹುಟ್ಟಿಸಿರುವ ಹುಲಿಯಸೆರೆಗೆ ಅರಣ್ಯ ಇಲಾಖೆ ಹರಸಾಹಸಪಡುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ದೊಡ್ಡಕನ್ಯಾ, ಚಿಕ್ಕಕನ್ಯಾ, ಬೈತಹಳ್ಳಿ, ಸಿಂದಿವಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಹುಲಿ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆಯೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ಮಧ್ಯೆ, ಒಂದೂವರೆ ವರ್ಷದ ಹುಲಿಯನ್ನು ಸೆರೆಹಿಡಿಯಲು ಸರಗೂರು ಟ್ರಾಕ್ ತಂಡ ಮತ್ತು ಅಗ್ನಿಶಾಮಕ, ತುರ್ತು ಸೇವೆಗಳ ಸಿಬ್ಬಂದಿ ಜಂಟಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಜತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ದೊಡ್ಡಕನ್ಯಾ ಮತ್ತು ಚಿಕ್ಕಕನ್ಯಾದಲ್ಲಿನ ಕಬ್ಬಿನ ಗದ್ದೆಗಳಲ್ಲಿಟ್ಟಿದ್ದ ಕ್ಯಾಮೆರಾಗಳಲ್ಲಿಹುಲಿಯ ಚಲನವಲನ ಸೆರೆಯಾಗಿತ್ತು. ಅದರ ಆಧಾರದಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತೀವ್ರಗೊಳಿಸಿತ್ತು ಡಿಸೆಂಬರ್ 1 ರಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದ ಹುಲಿ ಡಿಸೆಂಬರ್ 8 ರಂದು ಮತ್ತೆ ಹುಲಿಯ ಚಲನವಲನ ಕಂಡುಬಂದಿತ್ತು ಆದರೆ ಅನೇಕ ಪ್ರಯತ್ನಗಳ ಹೊರತಾಗಿಯೂ, ಹುಲಿ ತಪ್ಪಿಸಿಕೊಂಡಿದೆ ಎಂಬುದು ಅಧಿಕಾರಿಗಳ ಮಾತು.

ಅರಣ್ಯ ಇಲಾಖೆ ಸಿಬ್ಬಂದಿಯ ಅನುಭವದ ಕೊರತೆಯಿಂದಾಗಿ ಕಾರ್ಯಾಚರಣೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಸಿಬ್ಬಂದಿ ಆರಂಭದಲ್ಲಿ ಹುಲಿ ಇರುವಿಕೆಯ ವರದಿಗಳನ್ನು ತಳ್ಳಿಹಾಕಿದರು ಮತ್ತು ಅದನ್ನು ಚಿರತೆ ಎಂದು ಹೇಳಿದ್ದರು. ಅರಣ್ಯ ಸಿಬ್ಬಂದಿಗಳು ಹುಲಿಯನ್ನು ಪತ್ತೆ ಮಾಡಿದ ನಂತರವೇ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು, ತಜ್ಞರು ಸೇರಿದಂತೆ 100 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಕೆಲಸವಿಲ್ಲದ ಅರಣ್ಯ ಇಲಾಖೆಗೆ ಈ ಕಾಡು ಪ್ರಾಣಿಗಳೇ ದೊಡ್ಡ ತಲೆನೋವುಂಟುಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular