Sunday, March 15, 2026
Flats for sale
Homeರಾಜ್ಯಮೈಸೂರು : ಅರಣ್ಯ ಇಲಾಖೆಯ ನಿರ್ಲಕ್ಯ್ಸಕ್ಕೆ ಬಲಿಯಾದನ ಅರ್ಜುನ .

ಮೈಸೂರು : ಅರಣ್ಯ ಇಲಾಖೆಯ ನಿರ್ಲಕ್ಯ್ಸಕ್ಕೆ ಬಲಿಯಾದನ ಅರ್ಜುನ .

ಮೈಸೂರು : ಮಾನವನು ಕಾಡನ್ನು ಅತಿಕ್ರಮಣ ಮಾಡಿದರೆ ,ಕಾಡುಪ್ರಾಣಿಗಳು ನಾಡನ್ನು ಅತಿಕ್ರಮಣ ಮಾಡುತ್ತದೆ,ಕಾರಣ ಇತ್ತೀಚಿನ ದಿನಗಳಲ್ಲಿ ಕಾಡಾನೆ ,ಹುಲಿ,ಕಾಡೆಮ್ಮೆ ,ಚಿರತೆ ಇನ್ನಿತರ ಪ್ರಾಣಿಗಳು ನಾಡಿಗೆ ಬರುತ್ತಾ ಇರುವುದೇ ದೊಡ್ಡ ಉದಾಹರಣೆ. ಕಳೆದ ಮೇ ತಿಂಗಳಿನಲ್ಲಷ್ಟೇ ಬಲರಾಮನನ್ನು ಕಳೆದುಕೊಂಡಿದ್ದ ಮೈಸೂರಿಗೀಗ ಮತ್ತೊಂದು ಅಂಬಾರಿ ಆನೆ ಅರ್ಜುನನ ದುರಂತ ಸಾವಿನ ಸುದ್ದಿ ಸಿಡಿಲಿನಂತೆ ಬಂದೆರಗಿದೆ ಕಾಡಾನೆಯನ್ನು ಪಳಗಿಸುವ ಸಮಯದಲ್ಲಿ ಗುಂಡೇಟು ತಗುಲಿ ಕಾಲಿಗೆ ಗಾಯವಾದ ಪರಿಣಾಮ ಅರ್ಜುನನಿಗೆ ಕಾಡಾನೆಯಿಂದ ದಾಳಿಯಾಗಿದೆ ಎಂದು ಮಾವುತನ ಹೇಳಿಕೆ ಅರಣ್ಯ ಅಧಿಕಾರಿಗಳಿಗೆ ನುಂಗಲಾರದಂತಹ ತುತ್ತಿನಂತಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವಲ್ಪ ಮುನ್ನೆಚ್ಚರಿಕೆ ವಹಿಸುತಿದ್ದರೆ ಅರ್ಜುನನನ್ನು ಬದುಕಿಸಬಹುದಿತ್ತು ಎಂಬುದು ಜನರ ಮಾತು.ಆನೆ ಸೆರೆ ಕಾರ್ಯಾಚರಣೆ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸದಿದ್ದರೆ ಎಂತಹ ದೊಡ್ಡ ಅನಾಹುತ ನಡೆಯಬಹುದು ಎಂಬುದಕ್ಕೆ ಹಾಸನದಲ್ಲಿ ಬಲಿಯಾಗಿರುವ ಅರ್ಜುನನ ಅಮೂಲ್ಯ ಜೀವ ಸಾಕ್ಷಿ. ಅರ್ಜುನನ ಈ ಹಠಾತ್ ನಿರ್ಗಮನ, ಈ ಆನೆಯ ಬಹುದೊಡ್ಡ ಅಭಿಮಾನಿವರ್ಗ ಮತ್ತು ಮೈಸೂರಿನ ಜನತೆಗೆ ಆಘಾತ ತಂದಿದೆ. ಇತ್ತೀಚಿನ ಬೇರೆಲ್ಲಾ ಅಂಬಾರಿ ಆನೆಗಳಿಗೆ ಹೋಲಿಸಿದರೆ ಅರ್ಜುನನಿಗೆ ಅಭಿಮಾನಿ ಬಳಗ ಹೆಚ್ಚು. ಈ ಹಿಂದೆ ಕಾವಾಡಿಯೊಬ್ಬನನ್ನು ಹೊಸಕಿ ಕೊಂದಿದ್ದ ಅರ್ಜುನನಿಗೆ ಈ ಕಾರಣದಿಂದ ಕೋಪಿಷ್ಠ ಎಂಬದು ಅಂಟಿಕೊAಡಿತ್ತು.ನAತರದಲ್ಲಿ ಬಹಳ ಬದಲಾಗಿದ್ದ ಈ ಆನೆ ಹೇಳಿದ್ದನ್ನು ಕೇಳುವ ಮಗುವಿನಂತಾಗಿ ಬಹಳ ಉತ್ತಮ ಬೆಳವಣಿಗೆ ಕಂಡಿತ್ತು.

ಪ್ರಶ್ನೆ ಎತ್ತಿದ್ದ ಆಯ್ಕೆ: ಅಂಬಾರಿ ಹೊರುತ್ತಿದ್ದ ಬಲರಾಮ ೨೦೧೨ರಲ್ಲಿ ನಿವೃತ್ತನಾಗುವ ಸಂದರ್ಭ ಬAದಾಗ ಬಲರಾಮನ ಉತ್ತರಾಧಿಕಾರಿ ಯಾರಾಗಬೇಕೆಂಬ ಚರ್ಚೆ ಚುರುಕು ಪಡೆದಿತ್ತು. ಈ ಸಮಯ ಅರ್ಜುನನ ಹೆಸರು ಮುನ್ನೆಲೆಗೆ ಬಂದಾಗ ಕೆಲವರು ಈತ ಬಹಳ ಕೋಪಿಷ್ಠ ಕಾವಾಡಿಯನ್ನು ಕೊಂದಿರುವ ಇದು ೧೫೦೦ ಕೆಜಿ ತೂಕ ಹೊತ್ತು ಲಕ್ಷಾಂತರ ಜನರ ನಡುವೆ ಸಂಯಮದಿAದ ಹೆಜ್ಜೆ ಹಾಕುವುದು ಸಾಧ್ಯವಿಲ್ಲ ಎಂದೆಲ್ಲಾ ಹೇಳಿ ದಿಗಿಲು ಮೂಡಿಸಿದ್ದರು. ಆದರೆ ಅರ್ಜುನ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದ ಇದಕ್ಕೆ ೨೦೧೩ರಿಂದ ೨೦೨೦ ರವರೆಗೆ ಸತತ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ತನ್ನ ಇಷ್ಟೂ ವರ್ಷಗಳ ಕೆಲಸದ ಅವಧಿಯಲ್ಲಿ ಎಲ್ಲಿಯೂ ಲೋಪಕ್ಕೆ ಅವಕಾಶ ನೀಡಿರಲಿಲ್ಲವೆನ್ನುವುದು ಮತ್ತೊಂದು ವಿಶೇಷ.

ವಯೋನಿವೃತ್ತಿ ಸಂದರ್ಭದಲ್ಲೂ ಅತ್ಯಂತ ಬಲಿಷ್ಠನೇ ಆಗಿದ್ದ ಅರ್ಜುನ ನಂತರದ ವರ್ಷಗಳಲ್ಲಿ ದಸರಾ ಮೆರವಣಿಗೆಯ ನೌಪತ್ ಮತ್ತು ನಿಷಾನೆ ಆನೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ಆನೆಯಂತೆ ಅರ್ಜುನನ್ನೂ ಆನೆ ಕ್ಯಾಂಪ್‌ನಿAದ ರಾತ್ರಿ ವೇಳೆ ಕಾಡಿಗೆ ಮೇಯಲು ಕಳುಹಿಸಲಾಗುತ್ತಿತ್ತು. ಮರುದಿನ ಬೆಳಗ್ಗೆ ಎಲ್ಲಾ ಆನೆಗಳು ಕ್ಯಾಂಪ್‌ಗೆ ಬಂದರೆ, ಅರ್ಜುನ ಮಾತ್ರ ಶಿಬಿರಕ್ಕೆ ಬಾರದೇ ಮಾವುತ ದೊಡ್ಡಮಾಸ್ತಿ ಮನೆಗೆ ಹೋಗುತ್ತಿತ್ತು.ಅಲ್ಲಿ ಮನೆಯಲ್ಲಿ ದೊಡ್ಡಮಾಸ್ತಿ ಅಥವಾ ಅವರ ಕುಟುಂಬದ ಸದಸ್ಯರು ಅರ್ಜುನನಿಗೆ ರಾಗಿಮುದ್ದೆ ಅಥವಾ ಚಪಾತಿ ಕೊಡಲೇಬೇಕಾಗಿತ್ತು. ಪ್ರೀತಿಯಿಂದ ಕೈತುತ್ತು ತಿಂದು ಬಳಿಕವಷ್ಟೇ ಕ್ಯಾಂಪ್ ಹೋಗುವ ಅಭ್ಯಾಸ ಬೆಳೆಸಿಕೊಂಡಿತ್ತು ಅರ್ಜುನ. ಹೀಗಾಗಿ ಮಾಸ್ತಿ ಕುಟುಂಬದವರಿಗೆ ಅರ್ಜುನನ ಬಗ್ಗೆ ಮನೆಯ ಮಕ್ಕಳಂತಹ ಅಕ್ಕರೆ. ಮಾವುತರಾಗಿದ್ದ ಕೂಸ ಹಾಗೂ ದೊಡ್ಡಮಾಸ್ತಿಗಂತೂ ಇದು ಮನೆಯ ಹಿರಿಯ ಮಗನಂತೆ ಅಚ್ಚು ಮೆಚ್ಚು.

ಅರ್ಜುನನ ಹಿನ್ನೆಲೆ: ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ೧೯೬೮ರಲ್ಲಿ ಖೆಡ್ಡಾ ವಿಧಾನದಲ್ಲಿ ಸೆರೆ ಹಿಡಿದ ಅರ್ಜುನ ಕರ್ನಾಟಕದ ಅರಣ್ಯ ಇಲಾಖೆಯ ಪ್ರತೀಕದಂತೆ ಇತ್ತು. ಸೆರೆ ಹಿಡಿದಾಗ ಇದಕ್ಕೆ ಕೇವಲ ೧೫ ವರ್ಷ ವಯಸ್ಸು. ಹೀಗಾಗಿ ಕೋಪದ ಗುಣ ಸಹಜವಾಗಿತ್ತು. ಇದಕ್ಕೆಷ್ಟು ಕೋಪವಿತ್ತೆಂದರೆ ಅರ್ಜುನನ ಬಳಿ ಕೂಸನನ್ನು ಬಿಟ್ಟು ಬೇರೆ ಯಾವ ಮಾವುತರು ಹೋಗುವುದಕ್ಕೂ ಭಯಪಡುತ್ತಿದ್ದರು. ಬಳಿಕ ಅರ್ಜುನನನ್ನು ಮನೆ ಮಗನಂತೆ ಪ್ರೀತಿಯಿಂದ ಪಾಲನೆ ಮಾಡಿದ ದೊಡ್ಡಮಾಸ್ತಿ ಹಾಗೂ ಕುಟುಂಬದ ಸದಸ್ಯರಿಗೆ ಅರ್ಜುನ ಮನಸೋತಿದ್ದ.

ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ವಲಯ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿದ್ದ ಅರ್ಜುನ ದೊಡ್ಡಮಾಸ್ತಿ ಕುಟುಂಬದ ಸದಸ್ಯರೊಂದಿಗೆ ಅವಿನಾಭಾವ ಸಂಬAಧ ಹೊAದಿತ್ತು. ಹಠವಾದಿ ಅರ್ಜುನ ಇಷ್ಟರ ಮಟ್ಟಿಗೆ ಸೌಮ್ಯ ಸ್ವಭಾವಿಯಾಗಿ ಮಾರ್ಪಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಮಾವುತರಿಗೂ ಆಶ್ಚರ್ಯವನ್ನುಂಟು ಮಾಡಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular