ಮುಂಬೈ : ಥಗ್ ಲೈಫ್ ಸಿನಿಮಾ ಬಿಡುಗಡೆಯಾಗಿ ಐದು ದಿನಗಳು ಕಳೆದರೂ ನಿರೀಕ್ಷಿತ ಗಳಿಕೆ ಕಾಣುತ್ತಿಲ್ಲ. ಕೇವಲ 40 ಕೋಟಿ ರೂಪಾಯಿ ಗಳಿಸಿದ್ದು, 300 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ದೊಡ್ಡ ನಷ್ಟ ಎದುರಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಬಿಡುಗಡೆಯಾಗದಿರುವುದು ಹಾಗೂ ಉತ್ತಮ ವಿಮರ್ಶೆಗಳನ್ನು ಪಡೆಯದಿರುವುದು ಚಿತ್ರದ ಗಳಿಕೆಯ ಮೇಲೆ ಪ್ರಭಾವ ಬೀರಿದೆ. `ಥಗ್ ಲೈಫ್’ ಸಿನಿಮಾ ರಿಲೀಸ್ ಆಗಿ ಐದು ದಿನಗಳು ಕಳೆದಿವೆ. ಆದರೆ ಕಲೆಕ್ಷನ್ ಮಾತ್ರ ಇನ್ನೂ ಕುಟುಂತ್ತಲೇ ಸಾಗುತ್ತಿದೆ. ಈ ಚಿತ್ರ ಏಳ್ಗೆ ಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಚಿತ್ರ ಐದು ದಿನಕ್ಕೆ 50 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿದೆ. ಹೀಗೆ ಮುಂದುವರಿದರೆ ನಿರ್ಮಾಪಕ ಕಮಲ್ ಹಾಸನ್?ಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬಂದಿವೆ.
`ಥಗ್ ಲೈಫ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಇಟ್ಟುಕೊಂಡಿದ್ದರು. ಆದರೆ, ಚಿತ್ರ ಉತ್ತಮ ವಿಮರ್ಶೆ ಪಡೆದಿಲ್ಲ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗದೇ ಇರುವುದು ಕೂಡ ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಸಿನಿಮಾ ಸೋಮವಾರದ (ಜೂನ್ 9) ಪರೀಕ್ಷೆಯಲ್ಲಿ ಫೇಲ್ ಆಗಿದೆ. ಈ ಸಿನಿಮಾ ಕೇವಲ 3 ಕೋಟಿ ರೂಪಾಯಿ ಗಳಿಸಿದೆ.
ಸಾಮಾನ್ಯವಾಗಿ ಚಿತ್ರಗಳು ವೀಕೆಂಡ್‌ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಕುಂಟುತ್ತದೆ. ಆದರೆ, ಥಗ್ ಲೈಫ್’ವೀಕೆಂಡ್ ಹಾಗೂ ವಾರದ ದಿನ ಎರಡರಲ್ಲೂ ಡಲ್ ಹೊಡೆದಿದೆ. ಸದ್ಯ
ಥಗ್ ಲೈಫ್’ ಚಿತ್ರದ ಒಟ್ಟೂ ಗಳಿಕೆ 40 ಕೋಟಿ ರೂಪಾಯಿ ಆಗಿದೆ.
ಥಗ್ ಲೈಫ್’ ಚಿತ್ರದ ಬಜೆಟ್ 300ಕೋಟಿ ರೂಪಾಯಿ ಎಂದು ತAಡದವರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಈಗಾಗಲೇ ಒಟಿಟಿ ಹಕ್ಕಿನಿಂದ ಚಿತ್ರಕ್ಕೆ 150 ಕೋಟಿ ರೂಪಾಯಿ ಬಂದಿದೆ. ಸಿನಿಮಾ ಲಾಭ-ಟಿವಿ ಹಕ್ಕು ಸೇರಿ 50 ಕೋಟಿ ರೂಪಾಯಿ ಲಾಭ ಬಂತು ಎAದರೂ ನಿರ್ಮಾಪಕರಿಗೆ 100 ಕೋಟಿ ರೂಪಾಯಿ ಮೇಲೆ ನಷ್ಟ ಉಂಟಾಗಲಿದೆ. ಇದನ್ನು ಕಮಲ್ ಹಾಸನ್ ಹೇಗೆ ಭರಿಸುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ವಿಕ್ರಮ್’ ಸಿನಿಮಾ ಮಾಡಿ ಕಮಲ್ ಹಾಸನ್ ಅವರು ದೊಡ್ಡ ಮೊಟ್ಟದಲ್ಲಿ ಲಾಭ ಕಂಡಿದ್ದರು. ಇದೇ ಹುಮ್ಮಸಿನಲ್ಲಿ ಅವರು
ಥಗ್ ಲೈಫ್’ ಸಿನಿಮಾನ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದಾರೆ.