Monday, November 3, 2025
Flats for sale
Homeಕ್ರೀಡೆಮುಂಬೈ : ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದು ಬೀಗಿದ ವನಿತೆಯರು.

ಮುಂಬೈ : ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದು ಬೀಗಿದ ವನಿತೆಯರು.

ಮುಂಬೈ : ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ ತವರಿನಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದು ಬೀಗಿದೆ.

ಭಾನುವಾರ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಿAದ ಗೆದ್ದು ಬೀಗಿತು. ಇದರೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಹೊಸ ಇತಿಹಾಸವನ್ನು ನಿರ್ಮಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತ್ತು.

ದಕ್ಷಿಣ ಆಫ್ರಿಕಾ ತಂಡ 45.3ಓವರ್‌ಗಳಲ್ಲಿ 246ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಗೆಲ್ಲುತ್ತಿದ್ದಂತೆ ಹರ್ಮನ್ ಪಡೆ ಸಂಭ್ರಮಿಸಿತು. 299ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಸವಾಲಿನ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕಿ ಲಾರಾ ವೊಲ್ವರ್ಡ್ತ್ ಹಾಗು ಬ್ರಿಟ್ಸ್ ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. 23 ರನ್‌ಗಳಿಸಿದ್ದ ಬ್ರಿಟ್ಸ್ ರನೌಟ್ ಬಲೆಗೆ ಬಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ಬೋಸ್ಕ್ ಅವರು ಶ್ರೀಚಾರಿಣಿ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಲುಸ್ ಅವರು ಶೆಫಾಲಿ ವರ್ಮಾ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದರು. ಮತ್ತೆ ದಾಳಿಗಿಳಿದ ಶೆಫಾಲಿ ಕಾಪ್ ಹೊಡೆದ ಚೆಂಡನ್ನ ರಿಚಾ ಘೋಷ್‌ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಪಂದ್ಯಕ್ಕೆ ತಿರುವು ನೀಡಿದ ದೀಪ್ತಿ: ಅರ್ಧ ಶತಕ ಸಿಡಿಸಿದ್ದ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲೂ ಮಿAಚಿದರು. ಮಧ್ಯಮ ಕ್ರಮಾಂಕದಲ್ಲಿ ಸಿನಾಲೊ ಜಾಫ್ತಾ ಮತ್ತು ಡೆರೆಕ್‌ಸನ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿ ಆತಂಕ ಹುಟ್ಟಿಸಿದರು. 40ನೇ ಓವರ್‌ನಲ್ಲಿ ದಾಳಿಗಿಳಿದ ದೀಪ್ತಿ ಶರ್ಮಾ ಡೆರೆಕ್‌ಸನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದದರು.

ನಂತರ 42 ನೇ ಓವರ್‌ನಲ್ಲಿ ದಾಳಿಗಿಳಿದು ವೋಲ್ವೋರ್ಡ್ತ್ ಅವರ ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ತಂಡದ ಸೋಲನ್ನು ಖಚಿತಪಡಿಸಿದರು. ನಾಲ್ಕನೆ ಎಸೆತದಲ್ಲಿ ಟ್ರಿಯಾನ್ ವಿಕೆಟ್ ಪಡೆದರು. ಕೊನೆಯಲ್ಲಿ ಕ್ಲೆರ್ಕ್ ಅವರನ್ನು ಔಟ್ ಆಗುತ್ತಿದ್ದಂತೆ ಭಾರತ ಸಂಭ್ರಮ ಮುಗಿಲು ಮುಟ್ಟಿತ್ತು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಮೊದಲ ವಿಕೆಟ್‌ಗೆ 104 ರನ್‌ಗಳ ಭರ್ಜರಿ ಆರಂಭ ನೀಡಿದರು. ಆದರೆ 45 ರನ್‌ಗಳಿಸಿ ಮುನ್ನಗುತ್ತಿದ್ದ ಸ್ಮೃತಿ ಮಂದಾನ (45ರನ್) ಅವರು ಜಾಫ್ತಾಗೆ ಕ್ಯಾಚ್ ನೀಡಿ ಹೊರ ನಡೆದರು. ಮೂರನೇ ಕ್ರಮಾಂಕದಲ್ಲಿ ಜೆಮ್ಮಿಮಾ ರಾಡ್ರಿಗಸ್ ಓಪನರ್ ಶೆಫಾಲಿಗೆ ಉತ್ತಮ ಸಾಥ್ ನೀಡಿದರು. 7 ಬೌಂಡರಿ 2 ಸಿಕ್ಸರ್ ಸಿಡಿಸಿದ ಶೆಫಾಲಿ 87 ರನ್ ಗಳಿಸಿದ್ದಾಗ ಕಾಕಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

ದಿಢೀರ್ ಕುಸಿತ ಕಂಡ ಹರ್ಮನ್ ಪಡೆ: ಶೆಫಾಲಿ ವರ್ಮಾ ಔಟಾದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಜೆಮಿಮ್ಮಾ (24ರನ್) ಕಾಕಾಗೆ ಬಲಿಯಾದರು. ನಾಲ್ಕನೆ ಕ್ರಮಾಂಕದಲ್ಲಿ ಬಂದ ನಾಯಕಿ ಹರ್ಮನ್‌ಪ್ರೀತ್ 20 ರನ್ ಗಳಿಸಿ ಮ್ಲಾಬಾಗೆ ಬೌಲ್ಡ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬAದ ಅಮನೋಜತ್ ಕೌರ್ (12 ರನ್) ಕ್ಲೆರ್ಕ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದರು. ದೀಪ್ತಿ ಶರ್ಮಾ ಏಕಾಂಗಿ ಹೋರಾಟ ಮಾಡಿ ಅರ್ಧ ಶತಕ ಬಾರಿಸಿ ರನೌಟ್ ಬಲೆಗೆ ಬಿದ್ದರು. ಕೆಳಕ್ರಮಾಂಕದಲ್ಲಿ ರಿಚ ಘೋಷ್ ೩೪ ರನ್ ಹೊಡೆದು ತಂಡದ ಮೊತ್ತವನ್ನು ೩೦೦ರ ಗಡಿಯತ್ತ ಕೊಂಡೊಯ್ದರು. ರಾಧಾ ಯಾದವ್ ಅಜೇಯ 3 ರನ್ ಗಳಿಸಿದರು.

ಭಾರತ ಮಹಿಳಾ ತಂಡ ಮೂರನೇ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ 2005 ಮತ್ತು 2017ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತು ನಿರಾಸೆ ಅನುಭವಿಸಿತ್ತು. ಇದೀಗ ವಿಶ್ವಕಪ್ ಗೆಲ್ಲುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಫೈನಲ್‌ಗೇರಿತ್ತು. ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು. ಮಹಿಳಾ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂದಾನ ಪಾತ್ರರಾದರು. ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

Most Popular