Monday, October 20, 2025
Flats for sale
Homeವಿದೇಶಮುಂಬೈ : ಭಾರತಕ್ಕೆ ಮೊದಲ ಬಾರಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಭೇಟಿ, ಭಾರತ-ಬಿಟನ್ ನಡುವೆ...

ಮುಂಬೈ : ಭಾರತಕ್ಕೆ ಮೊದಲ ಬಾರಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಭೇಟಿ, ಭಾರತ-ಬಿಟನ್ ನಡುವೆ ಹಲವು ಮಹತ್ವದ ಒಪ್ಪಂದಗಳಿಗೆ ಅಂಕಿತ.

ಮುಂಬೈ : ಭಾರತಕ್ಕೆ ಮೊದಲ ಬಾರಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಭೇಟಿ ನೀಡಿದ ಸಂದರ್ಭದಲ್ಲಿ ಎರಡೂ ದೇಶ ಪ್ರಧಾನಿಗಳು ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ(ಸಿಇಟಿಎ) ಒಪ್ಪಂದ ಮತ್ತಷ್ಟು ಬಲಪಡಿಸುವ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ೧೦೦ ಉದ್ಯಮಿಗಳು, ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಸಾಂಸ್ಕೃತಿಕ ಪ್ರತಿನಿಧಿಗಳ ದೊಡ್ಡ ನಿಯೋಗದೊಂದಿಗೆ ಸ್ಟಾರ್ಮರ್ ಆಗಮಿಸಿದ್ದು, ಜುಲೈನಲ್ಲಿ ಎರಡೂ ದೇಶಗಳ ನಡುವೆ ಆಗಿರುವ ಸಿಇಟಿಎ ಒಪ್ಪಂದವನ್ನು ಬಲಪಡಿಸಲಾಗಿದೆ.

ಭಾರತವು ಬ್ರಿಟನ್‌ನಿಂದ ಕ್ಷಿಪಣಿಗಳನ್ನು ಖರೀದಿಸುವ 350 ದಶಲಕ್ಷ ಪೌಂಡ್ (ಸುಮಾರು ೪೧೫೩ ಕೋಟಿ ರೂ.) ಒಪ್ಪಂದ ಸೇರಿದAತೆ ಹಲವು ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ. ಮುಂಬೈನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾರತ ಹಾಗೂ ಬ್ರಿಟನ್ ನಡುವೆ ಶಿಕ್ಷಣ, ವ್ಯಾಪಾರ, ರಕ್ಷಣಾ ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.

ಬೆಂಗಳೂರಲ್ಲಿ ಆರಂಭವಾಗಲಿರುವ ಲಾಂಕಾಸ್ಟರ್ ವಿವಿ ಜೊತೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.ಬ್ರಿಟನ್‌ನಲ್ಲಿ ಬಾಲಿವುಡ್‌ನ ಪ್ರಮುಖ ಸಿನಿಮಾ ನಿರ್ಮಾಣಕ್ಕೆ ಒಪ್ಪಂದ,ಭಾರತ ಮತ್ತು ಬ್ರಿಟನ್ ಜಂಟಿಯಾಗಿ ಎಐ ಸೆಂಟರ್ ಸ್ಥಾಪನೆಗೆ ಒಪ್ಪಂದ,ಭಾರತ, ಬ್ರಿಟನ್ ಇನ್ನೋವೆಶನ್ ಮತ್ತು ಕನೆಕ್ಟಿವಿಟಿ ಸೆಂಟರ್ ನಿರ್ಮಾಣ,೪೬೮ ಮಿಲಿಯನ್ ಡಾಲರ್ ವೆಚ್ಚದಲ್ಲಿ ಬ್ರಿಟನ್‌ನಿಂದ ಕ್ಷಿಪಣಿ ಖರೀದಿ,ಬೆಂಗಳೂರಿನಲ್ಲಿ ಲಾಂಕಾಸ್ಟರ್ ಯುನಿವರ್ಸಿಟಿ ಕ್ಯಾಂಪಸ್ ಶುರು,ನವೋದ್ಯಮ ಬೆಂಬಲಿಸಲು ಎಸ್‌ಬಿಐ
ಹಾಗೂ ಬ್ರಿಟನ್ ನಡುವೆ ಒಪ್ಪಂದ,ಯುಕೆಯ ಯುನಿವರ್ಸಿಟಿ ಆಫ್ ರ‍್ರೆ ಮತ್ತು ಭಾರತ ನಿರ್ಮಾಣ. 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ ಭಾರತ-ಬ್ರಿಟನ್ ನಡುವಣ ಜುಲೈನಲ್ಲಿ ಮಹತ್ವದ ವ್ಯಾಪಾರ ಮಾಡಿಕೊಂಡಿದ್ದೇವೆ. ೨೦೪೭ರವೇಳೆಗೆ ಭಾರತ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬ್ರಿಟನ್ ಸಹಕಾರಿಯಾಗಲಿದೆ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.

ಭಾರತದಲಿ ಬ್ರಿಟನ್‌ನ 9 ವಿಶ್ವವಿದ್ಯಾಲಯಗಳು ಭಾರತ ಮತ್ತು ಬ್ರಿಟನ್ ವ್ಯಾಪಾರದಿಂದ ಭವಿಷ್ಯದಲ್ಲಿ ಯುವಜನೆತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಉಭಯ ದೇಶಗಳು ರಕ್ಷಣಾ, ತಂತ್ರಜ್ಞಾನ, ಎಐ, ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಭಾಗವಾಗಿ ಬ್ರಿಟನ್ ೯ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲಿವೆ ನಮ್ಮ | ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular