ಮುಂಬೈ : ವಾರ್ಷಿಕ ಗುತ್ತಿಗೆಯಿಂದ ಹೊರ ಬೀಳುತ್ತಿದ್ದಂತೆ ಕ್ರಿಕೆಟರ್ಗಳಾದ ಶ್ರೇಯಸ್ ಐಯ್ಯರ್ ಹಾಗೂ ಇಶಾನ್ ಕಿಶನ್ ಬಿಸಿಸಿಐ ವಿರುದ್ಧವೇ ಮುನಿಸಿಕೊಂಡಿದ್ದಾರಾ ಅನ್ನೋ ಸಂಶಯ ಶುರುವಾಗಿದೆ. ಇದಕ್ಕೆ ಸಾಕ್ಷಿಎಂಬಂತೆ ಸ್ವತಃ ಬಿಸಿಸಿಐ ಇಶಾನ್ ಕಿಶನ್ರನ್ನು ಇಂಗ್ಲೆಂಡ್ ವಿರುದ್ಧದ ೫ನೇ ಹಾಗೂ ಅಂತಿಮ ಟೆಸ್ಟ್ ಆಡಲು ಕೇಳಿದ್ದು, ಅವರು ನಿರಾಕರಿಸಿದ್ದಾರೆ. ಇದರಿಂದ, ಬಿಸಿಸಿಐ ಹಾಗೂ ಆಟಗಾರರ ನಡುವೆ ಅಸಮಾಧಾನವಿರುವುದು ದೃಢಪಟ್ಟಿದೆ.
2023-24 ನೇ ಸಾಲಿನ ಗುತ್ತಿಗೆಯಲ್ಲಿ ಬಿಸಿಸಿಐ 30 ಮಂದಿಗೆ ಅವಕಾಶ ನೀಡಿತ್ತು. ಈ ಪಟ್ಟಿಯಿಂದ ಇಬ್ಬರನು ಕೈ ಬಿಟ್ಟಿತ್ತು. ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇರುವುದರಿಂದ ಬಿಸಿಸಿಐ ಈ ಕ್ರಮ ಕೈಕೊಂಡಿತ್ತು. ರಣಜಿ ಆಡಿದ ಶ್ರೇಯಸ್ ಬಿಸಿಸಿಐ ವೈದ್ಯಕೀಯ ತಂಡ ಶ್ರೇಯಸ್ಐ ಯ್ಯರ್ಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದು, ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್ಪಂ ದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದಾರೆ. ಆದರೆ, ಇಶಾನ್ ಮಾತ್ರ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಸದ್ಯ
ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಸಿಸಿಐ ಹಾಗೂ ಆಟಗಾರರ ನಡುವಿನ ಗುದ್ದಾಟ ವೆಸ್ಟ್ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಯ್ಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಎನ್ಸಿಎ ಸೌಲಭ್ಯ ಅಲಭ್ಯ? ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಸ್ಥಾನ ಪಡೆಯದ ಈ ಇಬ್ಬರು ಆಟಗಾರರು, ವಾರ್ಷಿಕವಾಗಿ ಪಡೆಯುತ್ತಿದ್ದ ಬಿಸಿಸಿಐ ವೇತನ ಕಳೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ 2022-23ನೇ ಸಾಲಿನಲ್ಲಿ ಬಿ ಗುಂಪಿನಲ್ಲಿ ಕಾಣಿಸಿಕೊಂಡು ವಾರ್ಷಿಕ 3 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು.
ಇಶಾನ್ ಕಿಶನ್ ಸಿ ಕ್ಯಾಟಗಿರಿ ಆಟಗಾರನಾಗಿದ್ದು 1 ಕೋಟಿ ವೇತನ ಪಡೆದುಕೊಳ್ಳುತ್ತಿದ್ದರು. ಸದ್ಯ ಗುತ್ತಿಗೆಯಲ್ಲಿ ಇರದ ಕಾರಣ ಈ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಸೌಲಭ್ಯಗಳನ್ನು ಪಡೆಯಲು ಆಯಾ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗಳಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.


