ಮುಂಬೈ : ಬಾಲಿವುಡ್ನ ತಾರಾ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಕ್ಕಿ ಕೌಶಲ್, ನಮ್ಮ ಮನೆಯಲ್ಲಿ ಸಂಭ್ರಮ ತುಂಬಿದೆ. ನವೆಂಬರ್ 7 ರಂದು ಕತ್ರಿನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಸುದ್ದಿಯನ್ನು ನಿಮ್ಮೊಂದಿಗೆ ಹAಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ತಾರಾ ಜೋಡಿ ಈ ಸುದ್ದಿ ಹಂಚಿಕೊಳ್ಳುತ್ತಿದ್ದAತೆಯೇ ಕರೀನಾ ಕಪೂರ್, ಮಾಧುರಿ ದಿಕ್ಷೀತ್ ಸೇರಿದಂತೆ ಬಹುತೇಕ ಬಾಲಿವುಡ್ ಸೆಲಬ್ರೆಟಿಗಳು ಶುಭಕೋರಿ ಹಾರೈಸಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ೨೦೨೧ರ ಡಿಸೆಂಬರ್ ೬ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದರು.


