ಮುಂಬೈ: ಭಾರತ ತಂಡದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ಕಳೆದ ವರ್ಷದ (೨೦೨೩) ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಫುಟ್ಬಾಲ್ ಪಟು ಲಿಯೋನೆಲ್ ಮೆಸ್ಸಿ ನಡುವೆ ಪೈಪೋಟಿ ಏರ್ಪಟ್ಟಿತ್ತು.ಅಂತಿಮವಾಗಿ ಕೊಹ್ಲಿ ಪ್ರಶಸ್ತಿಗೆ ಆಯ್ಕೆಯಾದರು.
ಪ್ರಶಸ್ತಿಗಾಗಿ ನಡೆದ ಪೈಪೋಟಿಯಲ್ಲಿ ವಿರಾಟ್ ಕೊಹ್ಲಿ, ಲಿಯೋನೆಲ್ ಮೆಸ್ಸಿ ಅವರನ್ನು ೭೮-೨೨ ರಿಂದ ಪರಾಜಯಗೊಳಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪ್ಯೂಬಿಟಿಯು ಆನ್ಲೈನ್ ಸಮುದಾಯವಾಗಿದ್ದು, ೨೦ ಚಾನಲ್ಗಳನ್ನು ವ್ಯಾಪಿಸಿದೆ. ಪ್ರತಿ ವರ್ಷ ಓರ್ವ ಕ್ರೀಡಾಪಟುವಿಗೆ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.