Tuesday, February 4, 2025
Flats for sale
Homeಕ್ರೀಡೆಮುಂಬೈ : ಡಬ್ಲೂಟಿಸಿಯಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್ ಗಳು..!

ಮುಂಬೈ : ಡಬ್ಲೂಟಿಸಿಯಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್ ಗಳು..!

ಮುಂಬೈ : ವಿಶ್ವಕಪ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು ಕಂಡಿದೆ.ಆದರೆ ಭಾರತದ ಆಟಗಾರರು ದಾಖಲೆ ಬರೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಡಬ್ಲೂ ಟಿಸಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಬ್ಯಾಟರ್ ಗಳ ಐದು ಆಟಗಾರರ ಪಟ್ಟಿಯಲ್ಲಿ ಭಾರತದವರೇ ಮೂವರು ಇರುವುದು ವಿಶೇಷ.

ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆAಡ್ ತಂಡದ ನಾಯಕ ಹಾಗೂ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 53 ಟೆಸ್ಟ್ ಪಂದ್ಯಗಳಲ್ಲಿ 83 ಸಿಕ್ಸರ್ ಬಾರಿಸಿದ್ದಾರೆ. ಭಾರತದ ಯಶಸ್ವಿ ವಿಕೆಟ್ ಕೀಪರ್ ಬ್ಯಾಟರ್ ಎನಿಸಿರುವ ರಿಷಭ್ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ೩೬ ಪಂದ್ಯಗಳಲ್ಲಿ 56 ಸಿಕ್ಸರ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕಡೆಯ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ್ದರು. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮೂರನೇ ಬ್ಯಾಟರ್ ಎನಿಸಿದ್ದಾರೆ. 40 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ೫೬ ಸಿಕ್ಸರ್ ಗಳಿಸಿದ್ದಾರೆ.

ಈಗಾಗಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.ಬ್ಯಾಟಿಂಗ್ ಲಯ ಕಂಡುಕೊಳ್ಳಲು ತೀವ್ರ ಕಸರತ್ತು ನಡೆಸಿದ್ದಾರೆ. ದೇಶಿಯ ಕ್ರಿಕೆಟ್ ರಣಜಿಯಲ್ಲಿ ಆಡುತ್ತಿದ್ದಾರೆ. ಆದರೆ ರಣಜಿಯಲ್ಲೂ ಬ್ಯಾಟಿಂಗ್ ನಲ್ಲಿ ಎರಡಂಕಿ ತಲುಪಲು ವಿಫಲರಾಗಿದ್ದಾರೆ. ಭಾರತದ ಮತ್ತೊಬ್ಬ ಉದಯೋನ್ಮುಖ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಆಕ್ರಮಿಸಿ ಕೊಂಡಿದ್ದಾರೆ.

19 ಪಂದ್ಯಗಳಲ್ಲಿ 39 ಸಿಕ್ಸರ್ ಸಿಡಿಸಿದ್ದಾರೆ. ಆಸೀಸ್ ಪರ ಆರಂಭಿಕ ಆಟಗಾರನಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ನ್ಯೂಜಿಲೆAಡ್ ಬ್ಯಾಟರ್ ಡೆರಿಲ್ ಮಿಚೆಲ್ 27 ಟೆಸ್ಟ್ ಪಂದ್ಯಗಳಲ್ಲಿ ೩೪ ಸಿಕ್ಸರ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular