ಮುಂಬೈ : ಖ್ಯಾತ ಹಾಸ್ಯನಟ ಹಾಗೂ ಅದ್ಭುತ ಕಲಾವಿದ ಗೋವರ್ಧನ್ ಅಸ್ರಾನಿ ಅವರು ದೀರ್ಘಕಾಲದ ಅನಾರೋಗ್ಯದಿಂದ ತಮ್ಮ ೮೪ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಭಾರತೀಯ ಚಿತ್ರರಂಗ ದಲ್ಲಿ ತಮ್ಮದೇ ಕಲಾಶೈಲಿಯಿಂದ ಐದು ದಶಕಗಳಿಗೂ ಹೆಚ್ಚು ಕಲಾ ಪ್ರೇಕ್ಷಕರನ್ನು ಅಸ್ರಾನಿ ರಂಜಿಸಿದ್ದರು. ಶೋಲೆ ಚಿತ್ರದ ಅವರ ಪಾತ್ರಕ್ಕೆ ಭಾರಿ ಪ್ರಶಂಸೆಗಳಿಸಿದ್ದರು. ೧೯೬೦ರಲ್ಲಿ ಅಸ್ರಾನಿ ತಮ್ಮ ಚಿತ್ರರಂಗ ಜೀವನವನ್ನು ಆರಂಭಿಸಿದ್ದರು.
ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಸ್ರಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನಿಧನರಾಗಿದ್ದನ್ನು ಅವರ ಸಂಬAಧಿ ಅಶೋಕ್ ಅಸ್ರಾನಿ ಖಚಿತಪಡಿಸಿದ್ದಾರೆ.
ಭಾನುವಾರವಷ್ಟೇ ಅವರು ಇನ್‌ಸ್ಟಾಗ್ರಾಂನಲ್ಲಿ ದೀಪಾವಳಿ ಶುಭಾಶಯ ತಿಳಿಸಿದ್ದರು. ಅವರ ಸಾವಿಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದಿಲ್ಲವಾದರೂ ಇಲ್ಲಿನ ಸಾಂತಾಕ್ರೂಸ್‌ನ ಶಾಸ್ತಿçನಗರ್ ಚಿತಾಗಾರದಲ್ಲಿ ಕುಟುಂಬ ಹಾಗೂ ಬಂಧುಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸುಮಾರು 350ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಅಸ್ರಾನಿ ಅವರು ಬ್ಲಾಕ್‌ಬಸ್ಟರ್ ಸಿನಿಮಾ ಶೋಲೆಯಲ್ಲಿ ಜೈಲರ್ ಹಾಗೂ ಭೂಲ್ ಭುಲಯ್ಯ ಮತ್ತಿತರ ಚಿತ್ರಗಳಲ್ಲಿನ ಪಾತ್ರಗಳಿಂದಾಗಿಸುಪ್ರಸಿದ್ಧರಾಗಿದ್ದರು.