Wednesday, October 22, 2025
Flats for sale
Homeಕ್ರೀಡೆಮುಂಬೈ : ಕಠಿಣ ಗುಂಪಿನಲ್ಲಿ ಕಂಚಿನ ಪದಕ ವಿಜೇತ ಭಾರತ ತಂಡ.

ಮುಂಬೈ : ಕಠಿಣ ಗುಂಪಿನಲ್ಲಿ ಕಂಚಿನ ಪದಕ ವಿಜೇತ ಭಾರತ ತಂಡ.

ಮುಂಬೈ : ಇದೇ ವರ್ಷ ಜುಲೈ 27 ರಿಂದ ಅಗಸ್ಟ್ 8 ರವರಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ 33 ನೇ ಓಲಿಂಪಿಕ್ಸ್ನ ಪುರುಷರ ಹಾಕಿ ಸ್ಪರ್ಧೆಗಳಲ್ಲಿ ಟೋಕಿಯೋ ಒಲಿಂಪಿಕ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ತಂಡ ಕಠಿಣ ಗುಂಪಿನಲ್ಲಿರಿಸಲ್ಪಟ್ಟಿದೆ.

ಭಾರತ ತಂಡವನ್ನು `ಬಿ’ ಗುಂಪಿನಲ್ಲಿರಿಸಲಾಗಿದ್ದು, ಪ್ರಸಕ್ತ ಚಾಂಪಿಯನ್ ಬೆಲ್ಜಿಯಂ , ವಿಶ್ವದ ಐದನೇ ಶ್ರೇಯಾಂಕಿತ ಆಸ್ಟ್ರೇಲಿಯಾ ಹಾಗೂ ಏಳನೇ ಸೀಡ್ ಅರ್ಜೆಂಟಿನಾಗಳೂ ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ನ್ಯೂಜಿಲೆಂಡ್ ಹಾಗೂ ರ‍್ಲೆಂಡ್‌ಗಳು ಆರು ತಂಡಗಳಿರುವ ಈ ಗುಂಪಿನಲ್ಲಿರುವ ಇನ್ನೆರಡು ತಂಡಗಳಾಗಿವೆ.

ವಿಶ್ವದ ಅಗ್ರ ಶ್ರೇಯಾಂಕಿತ ನೆದರ್ಲೆಂಡ್ಸ್, ವಿಶ್ವ ಚಾಂಪಿಯನ್ ಜರ್ಮನಿ, 1988 ರಲ್ಲಿಯ ಸಿಯೋಲ್ ಓಲಿಂಪಿಕ್ಸ್ ಚಿನ್ನದ ಪದಕ ವಿಜೇತ ಗ್ರೇಟ್ ಬ್ರಿಟನ್, ಮೂರು ಸಲದ ರಜತ ಪದಕ ವಿಜೇತ ಸ್ಪೇನ್, ದಕ್ಷಿಣ ಆಫ್ರಿಕ ಹಾಗೂ ಆತಿಥೇಯ ಫ್ರಾನ್ಸ್ ಒಟ್ಟು 12 ರಾಷ್ಟçಗಳು ಭಾಗ ವಹಿಸುತ್ತಿರುವ ಈ ಸ್ಪರ್ಧೆಯಲ್ಲಿ `ಎ’ ಗುಂಪಿನಲ್ಲಿ ಇರಿಸಲ್ಪಟ್ಟಿವೆ.

ಎಂಟು ಸಲ ಓಲಿಂಪಿಕ್ ಹೊನ್ನಿನ ಪದಕ ಬಾಚಿಕೊಂಡಿರುವ ಭಾರತ, ಅಗಸ್ಟ್ ೬ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ದೊರಕಿಸಿಕೊಳ್ಳಬೇಕಿದ್ದರೆ ತನ್ನ ಗುಂಪಿನಲ್ಲಿ ಮೊದಲ ನಾಲ್ಕರಲ್ಲಿ ಸ್ಥಾನ ಸಂಪಾದಿಸಿಕೊಳ್ಳಬೇಕಿದೆ. ಅಂತಿಮ ಪಂದ್ಯ ಅಗಸ್ಟ್ 8 ರಂದು ನಡೆಯಲಿದೆ.

ತಂಡಗಳನ್ನು ಜನವರಿ ೨೧ರಂದು ಅವು ಹೊಂದಿದ್ದ ಎಫ್.ಐ.ಎಚ್. ವಿಶ್ವ ರಾಂಕಿಂಗ್ ಆಧಾರದ ಮೇಲೆ ಎರಡು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಮೊದಲ, 4ನೇ, 5ನೇ, 8ನೇ, 9ನೇ ಹಾಗೂ 13ನೇ ರಾಂಕಿಂಗ್ ಹೊಂದಿರುವ ತಂಡಗಳನ್ನು ಎ' ಗುಂಪಿನಲ್ಲೂ ಮತ್ತು ಎರಡನೇ, 3 ನೇ, 4ನೇ, 6ನೇ, 7ನೇ, 11ನೇ ಹಾಗೂ 12ನೇ ಶ್ರೇಯಾಂಕ ಹೊಂದಿರುವ ತAಡಗಳನ್ನುಬಿ’ ಗುಂಪಿನಲ್ಲೂ ಇರಿಸಲಾಗಿದೆ. ಭಾರತ ಇತ್ತೀಚಿನ ಎಫ್.ಐ.ಎಚ್. ವಿಶ್ವ ರಾಂಕಿಂಗ್ ಪ್ರಕಾರ ೩ನೇ ಸ್ಥಾನದಲ್ಲಿದ್ದು `ಬಿ’ ಗುಂಪಿನಲ್ಲಿದೆ.

ಮಹಿಳೆಯರ ವಿಭಾಗದಲ್ಲಿ ವಿಶ್ವ ಹಾಗೂ ಓಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್, ಬೆಲ್ಜಿಯA, ಜರ್ಮನಿ, ಜಪಾನ, ಚೀನಾ ಹಾಗೂ ಫ್ರಾನ್ಸ್ಗಳು ಎ' ಗುಂಪಿನಲ್ಲಿದ್ದರೆ, ವಿಶ್ವದ ದ್ವಿತೀಯ ಶ್ರೇಯಾಂಕಿತ ಆಸ್ಟ್ರೇಲಿಯಾ , ತೃತೀಯ ರಾಂಕಿಂಗ್ ಹೊಂದಿರುವ ಅರ್ಜೆಂಟಿನಾ, ಗ್ರೇಟ್ ಬ್ರಿಟನ್, ಸ್ಪೇನ್, ಅಮೇರಿಕ ಹಾಗೂ ದಕ್ಷಿಣ ಆಫ್ರಿಕಾಗಳುಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular