ಮುಂಬೈ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸಾಕಷ್ಟು ಚರ್ಚೆಗಳ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿದೆ. ಈಗಾಗಲೇ ಭಾರತ ಸೇರಿದಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು ಪ್ರಕಟಗೊಂಡಿವೆ. ಟ್ರೋಫಿ ಗೆಲ್ಲುವ ಹೊಗನಸಿನೊಂದಿಗೆ ಟೀಂ ಇಂಡಿಯಾ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಆದರೆ ಭಾರತದ ಮುಂದಿದೆ ಹಲವು ಸವಾಲುಗಳು. ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಿದೆ.
ಒಂದು ವೇಳೆ ಪ್ರಕಟಿತ ತಂಡದಲ್ಲಿ ಬದಲಾವಣೆ ಮಾಡಲು ಫೆ.11ರವರೆಗೆ ಅವಕಾಶವಿದೆ. ಹೀಗಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ ಬದಲಾಗುವ ಆಟಗಾರರು ಯಾರು ಎಂಬುದನ್ನು ನೋಡೋಣ. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಆಡುವುದು ಅನುಮಾನ. ಆಸ್ಟೆçÃಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬುಮ್ರಾ ಗಾಯಗೊಂಡಿದ್ದರು. ಅವರಿನ್ನು ಚೇತರಿಸಿಕೊಂಡಿಲ್ಲ. ಇಂತಹ ಸುದ್ದಿಯೊಂದು ಕ್ರಿಕೆಟ್ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಒಂದು ವೇಳೆ ಬುಮ್ರಾ ದುಬೈ ವಿಮಾನ ಹತ್ತದೇ ಇದ್ದಲ್ಲಿ ಈ ಸ್ಥಾನವನ್ನು ತುಂಬಲ ಮೊಹಮ್ಮದ್ ಸಿರಾಜ್ ಸಿದ್ದರಾಗಿದ್ದಾರೆ .
ಇವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಅಮೋಘ ದಾಳಿ ಸಂಘಟಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಒಂದು ವೇಳೆ ಬುಮ್ರಾ ಗಾಯದಿಂದಾಗಿ ದೂರ ಸರಿದರೆ, ಸಿರಾಜ್ಗೆ ಅವಕಾಶ ಪಕ್ಕಾ ಎಂದು ಹೇಳಲಾಗುತ್ತಿದೆ. ಸದ್ಯ ಟೀಮ್ ಇಂಡಿಯಾದಲ್ಲಿರುವ ಟಾಪ್ ಆರ್ಡರ್ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರೆಲ್ಲರೂ ಬಲಗೈ ಬ್ಯಾಟರ್ ಗಳು.
ಈ ಪೈಕಿ ಒಬ್ಬರೂ ಎಡಗೈ ಬ್ಯಾಟರ್ ಇಲ್ಲ. ಹೀಗಾಗಿ ಬೌಲರ್ ಲೈನ್ ಹಾಳು ಮಾಡಲು ಇಂಗ್ಲೆAಡ್ ವಿರುದ್ಧದ ಟಿ೨೦ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ಇಂಗ್ಲೆAಡ್ ತಂಡವನ್ನು ಬಹುವಾಗಿ ಕಾಡುತ್ತಿರುವ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಬೌಲರ್ ವರುಣ್ ಚಕ್ರವರ್ತಿ. ಇವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಆಯ್ಕೆ ಮಾಡಿಲ್ಲ. ಸ್ಪಿನ್ ಬೌಲರ್ ಅವರನ್ನು ಕೈ ಬಿಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗಳು ಎದ್ದಿವೆ.
ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಲ್ಕು ಸ್ಪಿನ್ ಬೌಲರ್ಗಳ ಪೈಕಿ ಮೂವರು ಎಡಗೈ ಸ್ಪಿನ್ ಬೌಲರ್ಗಳು. ಎದುರಾಳಿ ಬ್ಯಾಟರ್ಗಳನ್ನು ಕಾಡಲು ಓರ್ವ ಸ್ಪಿನ್ ಬೌಲರ್ ಅಗತ್ಯವಿದೆ. ಹೀಗಾಗಿ ವರುಣ್ಗೆ ಅವಕಾಶ ನೀಡಿದರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲ ಲೆಕ್ಕಾಚಾರಗಳು ಏನೇ ಇದ್ದರೂ ಅಂತಿಮವಾಗಿ ಕೋಚ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರದ ಮೇಲೆ ಅವಲಂಬಿಸಿದೆ.