ಮುಂಡಗೋಡ : ತಾಲೂಕಿನ ಟಿಬೆಟಿಯನ್ ಕ್ಯಾಂಪಿಗೆ ಮಂಗಳವಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಟಿಬೆಟಿಯನ್ನರು ಅದ್ದೂರಿಯಾಗಿ ಬರಮಾಡಿಕೊಂಡರು.
ಹುಬ್ಬಳ್ಳಿಯಿಂದ ತಡಸ ಮಾರ್ಗವಾಗಿ ಮುಂಡಗೋಡದಿಂದ ಕ್ಯಾಂಪ್ ನಂಬರ 1 ಗಾದೇನ ಝಾಂಗ್ಸಗೆ ಬಂದರು. ಮುಖ್ಯಮಂತ್ರಿ ಅವರನ್ನು ಟಿಬೆಟಿಯನ್ನರು ಸಂಪ್ರಾದಯಕ ಉಡುಗೆ ತೊಟ್ಟು ಸರತಿಸಾಲಿನಲ್ಲಿ ನಿಂತು ಅದ್ದೂರಿಯಾಗಿ ಬರಮಾಡುಕೊಂಡರು.
ಇದಕ್ಕೂ ಮೊದಲು ತಾಲೂಕಿನ ಗಡಿ ವಡಗಟ್ಟಾದಲ್ಲಿ ಜಿಲ್ಲಾಡಳಿತ ವತಿಯಿಂದ ಶಿರಶಿ ಎಸಿ ದೇವರಾಜ ಡಿ ಮತ್ತು ತಾಲೂಕಾ ತಹಶೀಲ್ದಾರ ಶಂಕರ ಗೌಡಿ ಅವರು ಹೂ ಗೂಚ್ಛಾ ನೀಡಿ ತಾಲೂಕಿಗೆ ಬರಮಾಡಿಕೊಂಡರು.
ಮುಖ್ಯಮಂತ್ರಿ ಪೇಮಾ ಖಂಡು ಅವರು ಮಂಗಳವಾರದಿಂದ ಗುರುವಾರದ ವರೆಗೆ ಟಿಬೆಟಿಯನ್ ವಿವಿಧ ಕ್ಯಾಂಪ್ ಗಳಿಗೆ ಭೇಟಿ ನೀಡಿ ಟಿಬೆಟಿಯನ್ ರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಪೊಲೀಸ ಬಿಗಿ ಭದ್ರತೆ: ಇಬ್ಬರು ಡಿವೈಎಸ್ಪಿ, 8 ಜನ ಸಿಪಿಐ,14 ಜನ ಪಿಎಸ್ಐ, 27ಜನ ಎಎಸೈ,147 ಕಾನ್ ಸ್ಟೇಬಲ್, 12 ಮಹಿಳಾ ಸಿಬ್ಬಂದಿಗಳು,1 ಕೆಎಸ್ಆರ್ ಪಿ ಮತ್ತು 2 ಡಿಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.


