ಮಾಗಡಿ :ತಾಲೂಕಿನ ಕಲ್ಯಾಣದೇವರ ಮಠದ ಸುತ್ತಮುತ್ತಲಿನ ತೋಟಗಳಿಗೆ ಒಂಟಿ ಸಲಗ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.
ತಾಲೂಕಿನ ಕಲ್ಯಾಣ ದೇವರ ಮಠದ ಚಂದ್ರಮೌಳಿ ಎಂಬುವರ ತೋಟಕ್ಕೆ ಕಳೆದ ಮೂರುದಿನಗಳಿಂದ ನಿರಂತರವಾಗಿ ಒಂಟಿ ಸಲಗ ದಾಳಿ ನಡೆಸಿ 50 ಬಾಳೆ ಗೋನೆ, 15 ಅಡಿಕೆ ಸೇರಿದಂತೆ ಗಿಡಗೆಂಟೆಗಳನ್ನು ನಾಶಪಡಿಸಿದರೆ ಸಿದ್ದಲಿಂಗಪ್ಪ ಎಂಬುವರ ಜಮೀನಿನಲ್ಲಿ 10 ಬಾಳೆ ಗಿಡ 6 ಅಡಿಕೆ, ಮಾವು, ಸಪೋಟ ಸೇರಿದಂತೆ ಹಲವಾರು ಬಗೆಯ ಗಿಡಗಳನ್ನು ನಾಶಮಾಡಿದ್ದು ಇದರಿಂದ ರೈತರಿಗೆ ನಷ್ಟ ಉಂಟಾಗಿದ್ದು ಅರಣ್ಯ ಇಲಾಖೆ
ನಾಶವಾಗಿರುವ ಗಿಡಗಳಿಗೆ ಪರಿಹಾರ ಒದಗಿಸಿಕೊಡುವಂತೆ ರೈತ ಚಂದ್ರಮೌಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಕಳೆದ ಗುರುವಾರ ಪಟ್ಟಣದಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗ ಪಟ್ಟಣದ ಹೊರ ಹೊಲಯಗಳ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಬೀತಿ ಉಂಟು ಮಾಡಿತ್ತು ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳ ಮೂಲಕ ಗ್ರಾಮಸ್ಥರಿಗೆ ಅರಿವು ಮೂಢಿಸಿ ಒಂಟಿ ಸಲಗ ಹಿಮ್ಮೆಟ್ಟಿಸಲು ಕಾರ್ಯಚರಣೆ ನಡೆಸುವಲ್ಲಿ
ಹರಸಾಹಸ ಪಟ್ಟು ಭಾನುವಾರ ರಾತ್ರಿ ಚಿಕ್ಕಸೂಲಿಕೆರೆಯ ವರೆಗೆ ಹಿಮ್ಮೆಟ್ಟಿಸಿದರು ಮತ್ತೆ ರಾತ್ರೋ ರಾತ್ರಿ ದಿಡೀರ್ ವಾಪಸ್ಸು ತೆರಳಿ ರೈತರ ಬೆಳೆಗಳ ಮೇಲೆ ದಾಳಿ ನಡೆಸಿದೆ ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ.


