Thursday, November 6, 2025
Flats for sale
Homeರಾಜ್ಯಮಡಿಕೇರಿ ; ಮಂಗಳೂರು - ಮಡಿಕೇರಿ ರಸ್ತೆ ಸಂಪರ್ಕ ಕಡಿತದ ಭಯ.

ಮಡಿಕೇರಿ ; ಮಂಗಳೂರು – ಮಡಿಕೇರಿ ರಸ್ತೆ ಸಂಪರ್ಕ ಕಡಿತದ ಭಯ.

ಮಡಿಕೇರಿ ; ಅನಧಿಕೃತವಾಗಿ ಹೊಮ್ ಸ್ಟೇ ನಿರ್ಮಿಸುವುದರಿಂದ ಕೊಡಗಿನಲ್ಲಿ ಮಳೆಗಾಲದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ,ಕಳೆದ ಕೆಲವು ವರ್ಷಗಳಿಂದ ಮಳೆಗಾಲವೆಂದರೆ ಕೊಡಗಿನ ಜನ ಭಯಭೀತರಾಗಿತ್ತಾರೆ.ಎನಾದರೂ ದೊಡ್ಡ ಅನಾಹುತ ವಾಗುತ್ತದೊ ಎಂಬುದೇ ಚಿಂತೆ.

ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಅನಾವುತಕ್ಕೆ ಕೊಡಗಿನ ಜನರಿಗೆ ಇನ್ನೂ ಮುಕ್ತಿ ಸಿಗಲಿಲ್ಲ.ಜಿಲ್ಲಾಡಳಿತ ನಿರ್ಲಕ್ಷ್ಯ ದಿಂದ ಮತ್ತೊಮ್ಮೆ ಇನ್ನೆನ್ನಾದರೂ ಅನಾಹುತ ಸಂಭವಿಸುತ್ತದೆ ಎಂಬುದು ಭಯ ಸುರುವಾಗಿದೆ.ಕಳೆದ ವರ್ಷ ಮಂಗಳೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಕೊಯನಾಡು ಬಳಿ ದೊಡ್ಡದಾದ ಬಿರುಕುಬಿದ್ದಿದ್ದು ಇದನ್ನು ಸರಿಪಡಿಸದೆಇರುವುದು ಆಡಳಿತ ವೈಫಲ್ಯ ಕ್ಕೆ ಕಾರಣವಾಗಿದೆ.

ದಟ್ಟವಾದ ಬೆಟ್ಟಗುಡ್ಡಗಳ ನಡುವೆ ಸುಂದರವಾಗಿ ಕಾಣಿಸುವ ಮಡಿಕೇರಿ ಯ ರಸ್ತೆಗಳ ಬದಿಭಾಗ ತೀವ್ರ ಹದಗೆಟ್ಟಿದೆ,ಹೆದ್ದಾರಿಯಲ್ಲಿ ಬಿರುಕುಬಿದ್ದ ಪರಿಣಾಮ ಸ್ವಲ್ಪದಿನಗಳ ಕಾಲ ಬೃಹತ್‌ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು,ಮಳೆಗಾಲ ಕಳೆದ ತಕ್ಷಣ ಕಾಮಗಾರಿ ಪ್ರಾರಭಮಾಡಬೇಕಿತ್ತು ಆದರೆ ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟರೂ ಕಾಮಗಾರಿ ಕೆಲಸ ಸುರುಮಾಡದೆ ನಿರ್ಲಕ್ಷ್ಯ ತೊರಿದ್ದಾರೆ,ಕಾಮಗಾರಿ ಸುರು ಮಾಡದೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ದೆ ಎಂದು ನಾಮಫಲಕ ಹಾಕಿರುವುದು ಇಲ್ಲಿ ವಿಶೇಷವಾಗಿದೆ.

2018,19,20 ರ ಅವಧಿಯಲ್ಲಿ ಈ ಪ್ರದೇಶದಲ್ಲಿ ಜಲಪ್ರವಾಹ ಸಂಭವಿಸಿ ಅನೇಕ ಸಾವುನೋವು ಸಂಭವಿಸಿತ್ತು,ಮಂಗಳೂರು – ಮಡಿಕೇರಿ ರಸ್ತೆಯಲ್ಲಿ ಕೂಡ ದೊಡ್ಡದಾದ ಬಿರುಕು ಕಾಣಿಸಿಕೊಂಡಿತ್ತು,ಆದರೆ ಮಳೆ ಕಡಿಮೆಯಾಗಿರುವುದರಿಂದ ಅಂತಹ ದೊಡ್ಡ ಅನಾಹುತ ಆಗಲಿಲ್ಲ,ಆದರೆ ಬಿರುಕು ಬಿಟ್ಟ ರಸ್ತೆ ಸರಿಪಡಿಸದೆ ಇರುವುದರಿಂದ ಈ ಭಾರಿ ದೊಡ್ಡ ಅನಾಹುತ ಸಂಭವಿಸುವುದು ಎಂಬುದು ಜನರ ಭಯ.

ಈ ರಸ್ತೆ ಮಂಗಳೂರು- ಮಡಿಕೇರಿ- ಮೈಸೂರಿಗೆ ನೇರ ಸಂಪರ್ಕ ಹೊಂದಿರುವುದರಿಂದ ಈ ರಸ್ತೆ ಬಿರುಕುಬಿಟ್ಟರೆ ಅನೇಕ ಜನರಿಗೆ ಹಾಗೂ ದಿನನಿತ್ಯ ಚಲಿಸುವ ವಾಹನಗಳಿಗೆ ತೊಂದರೆ ಉಂಟಾಗುತ್ತದೆ ಏಕೆಂದರೆ ಅನೇಕ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.ಆದರೆ ಬಿರುಕುಬಿಟ್ಟ ರಸ್ತೆಯ ದುರಸ್ತಿ ಕಾರ್ಯ ಮಾಡದೆ ಬೃಹತ್ ವಾಹನ ಚಲಿಸುವುದರಿಂದ ಮುಂದೆ ನಡೆಯುವ ಅನಾಹುತಕ್ಕೆ ಯಾರು ಹೊಣೆ ಎಂಬುದು ಜನರ ಮಾತು. ಮಳೆಗಾಲ ಪ್ರಾರಂಭವಾದುದರಿಂದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಅಸಾಧ್ಯವಾದ ಮಾತು,ಆದರೆ ಮುಂದೆ ಬರುವ ಸಂಭವನೀಯ ಅಪಾಯತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬೃಹತ್ ವಾಹನಗಳ ಸಂಚಾರ ನಿಷೇಧಿಸುವುದು ಉತ್ತಮ ಎಂಬುದು ಸ್ಥಳೀಯರ ಒತ್ತಾಯ .ಇದಕ್ಕೆ ಜನಪ್ರತಿನಿಧಿಗಳು ಕೈಜೊಡಿಸಿ ಮುತುವರ್ಜಿ ವಹಿಸುವುದು ಉತ್ತಮ.

RELATED ARTICLES

LEAVE A REPLY

Please enter your comment!
Please enter your name here

Most Popular