ಮಡಿಕೇರಿ : ಅಮಾಯಕ ಯುವತಿಯ ರುಂಡ ಕಡಿದು ಆತ್ಮ ಹತ್ಯೆ ಮಾಡಿದನೆಂದು ಸುಳ್ಳು ಸುದ್ದಿ ಹರಡಿ ಕಾಡಿಗೆ ಕೋವಿ ಹಿಡಿದು ಪರಾರಿಯಾದ ಖತರ್ನಾಕ್ ಕೊಲೆಗಾರ 34 ವರ್ಷದ ಪ್ರಕಾಶನಿಗೆ ಪೊಲೀಸರು ನಿನ್ನೆ ಹುಡುಕಾಟ ನಡೆಸಿದ್ದರು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನು ತಿಳಿಯದ ಯುವತಿಯನ್ನು ಮದುವೆ ಆಗಲು ಹೊರಟಿದಲ್ಲದೆ ಯುವತಿಯನ್ನು ಬರ್ಬರ ಹತ್ಯೆ ಮಾಡಿದ್ದಾನೆ.ಕಾಡಿನಲ್ಲಿ ಪತ್ತೆಯಾದ ಪ್ರಕಾಶ್‌ನನ್ನು ಪೊಲೀಸರು ಸದ್ಯ ಸೋಮವಾರಪೇಟೆ ಠಾಣೆಗೆ ಕರೆತರುತ್ತಿದ್ದಾರೆ.ಆರೋಪಿ ಯುವತಿಯ ರುಂಡವನ್ನು ಎಲ್ಲಿ ಬಿಸಾಕಿದ್ದಾನೆಂದು ಇನ್ನು ತನಿಖೆಯಲ್ಲಿ ತಿಳಿಯಬೇಕಾಗಿದೆ .
SSLC ಬಾಲಕಿಯ ರುಂಡ ಕತ್ತರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಪ್ರಕಾಶ ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಆಕೆಯ ರುಂಡ ಕತ್ತರಿಸಿದ್ದನು. ನಂತರ ಕೋವಿ ಹಿಡಿದು ಕಾಡಿನತ್ತ ಪರಾರಿಯಾಗಿದ್ದನು. ಪರಾರಿಯಾಗಿದ್ದ ಪ್ರಕಾಶನಿಗೆ ಪೊಲೀಸರು ನಿನ್ನೆ ಹುಡುಕಾಟ ನಡೆಸಿದ್ದರು. ಆದರಿಂದ ಕೊಲೆಗಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೊಲೆ ಮಾಡಿದ ಒಂದು ದಿನದ ಬಳಿಕ 34 ವರ್ಷದ ಪ್ರಕಾಶನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮೀನಾಳಿಗೆ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ಇಷ್ಟೆಲ್ಲ ಆದ ಬಳಿಕ ಪ್ರಕಾಶ್ ಮರ ಕಡಿಯುವ ಮಚ್ಚಿನೊಂದಿಗೆ ಮೀನಾಳ ಮನೆಗೆ ಬಂದಿದ್ದು ಮೀನಾ ಹಾಗೂ ಅವಳ ಪೋಷಕರ ಜೊತೆ ಜಗಳವಾಡಿದ್ದಾನೆ. 18 ವರ್ಷ ಆಗುವವರೆಗೆ ಮದುವೆ ಬೇಡ ಎಂದು ಪೋಷಕರು ಹೇಳಿದ್ದು ಕೋಪಗೊಂಡು ಜಗಳ ಜೋರಾಗಿದೆ. ಇದರಿಂದ ಕುಪಿತಗೊಂಡ ಪ್ರಕಾಶ್ ಮಚ್ಚಿನಿಂದ ಮೊದಲು ತಾಯಿ ಜಾನಕಿಯ ಕೈ ಕಡಿದಿದ್ದಾನೆ, ಜಾನಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಡೆಯಲು ಬಂದ ತಂದೆ ಸುಬ್ರಮಣಿಗೆ ಜಾಡಿಸಿ ಒದ್ದ ರಭಸಕ್ಕೆ ಅವರೂ ಕುಸಿದು ಬಿದ್ದಿದ್ದಾರೆ. ಬಳಿಕ ಪ್ರಕಾಶ್, ಮೀನಾಳನ್ನ ಎಳೆದೊಯ್ದಿದ್ದಾನೆ. ಮನೆಯಿಂದ ಅಂದಾಜು 300 ಮೀಟರ್ ದೂರದವರೆಗೆ ಎಳೆದೊಯ್ದು ಮೀನಾಳ ಕುತ್ತಿಗೆಯನ್ನೇ ಕಡಿದು ರುಂಡ ಮುಂಡ ಬೇರ್ಪಡಿಸಿ ರುಂಡದೊಂದಿಗೆ ಪರಾರಿಯಾಗಿದ್ದ. ಕಾಡಿನಲ್ಲಿ ಪತ್ತೆಯಾದ ಪ್ರಕಾಶ್‌ನನ್ನು ಪೊಲೀಸರು ಕರೆತರುತ್ತಿದ್ದಾರೆ. ಸದ್ಯ ಸೋಮವಾರಪೇಟೆ ಠಾಣೆಗೆ ಕರೆತರುತ್ತಿದ್ದು ಹೈ ಕ್ಲಾಸ್ ಪೊಲೀಸ್ ಟ್ರೀಟ್ಮೆಂಟ್ ನಿಂದ ಎಲ್ಲ ಬಾಯಿಬಿಡಬಹುದೆಂದು ತಿಳಿಯಲಾಗಿದೆ.
ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದೆ. ಬಾಲಕಿಯನ್ನು ಹತ್ಯೆ ಮಾಡಿದ ಬಳಿಕ ತಲೆಯನ್ನು ಆರೋಪಿ ಪ್ರಕಾಶ್ ಮರದ ಮೇಲಿರಿಸಿದ್ದ. ಇದೀಗ ಪೊಲೀಸರು ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ಲಾಸ್ಟಿಕ್ ಚೀಲದ ಬ್ಯಾಗಿಗೆ ಅಪ್ರಾಪ್ತೆಯ ತಲೆಯನ್ನು ಹಾಕಿಕೊಂಡಿದ್ದು, ಆರೋಪಿಯನ್ನು ಸ್ಥಳ ಮಹಜರ್ ಗೆ ಪೊಲೀಸರು ಕರೆದೊಯ್ದಿದ್ದಾರೆ. ನಿನ್ನೆ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾ ತಲೆ ಪತ್ತೆಯಾಗಿರಲಿಲ್ಲ. ನಿನ್ನೆ ಹುಡುಕಾಡಿದ್ದ ಸ್ಥಳದಲ್ಲೇ ಮರದ ಮೇಲೆ ಆರೋಪಿ ತಲೆ ಇರಿಸಿದ್ದ.
ಮನೆ ಬಳಿ ಮಹಜರು ಬಳಿಕ ಮರಣೋತ್ತರ ಪರೀಕ್ಷೆಗೆ ಪೊಲೀಸರು ತಲೆಯನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಿದ್ದಾರೆ. ಬಾಲಕಿಯ ಮುಂಡಕ್ಕೆ ರುಂಡ ಹೊಂದಾಣಿಕೆ ಆಗುತ್ತಾ ಎಂದು ಪರಿಶೀಲನೆ ನಡೆಸಿ,ಹೊಂದಾಣಿಕೆ ಆದಲ್ಲಿ ಬಳಿಕ ಶವ ಪರೀಕ್ಷೆ ನಡೆಯಲಿದೆ.