ಮಂಡ್ಯ : ಈ ರಾಜಕೀಯನೇ ಈಗೆ ಯಾರು ಯಾವಾಗ ಜೊತೆಯಾಗ್ತಾರೆ ಎಂಬುದು ಗೊತ್ತಾಗೋದಿಲ್ಲ ,ಇಂತಹ ಸುದ್ದಿ ಮಂಡ್ಯದಲ್ಲಿ ಹಾರಿದ್ದುತ್ತಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕಣ ಅಕ್ಷರಶಃ ರಣಾಂಗಣವಾಗಿತ್ತು. ಆದರೆ ಈ ಬಾರಿ ಕಾಲಚಕ್ರವೇ ತಿರುಗಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ್ದು ಹೀಗಾಗಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಬೇಕೆಂದಿದ್ದ ಸುಮಲತಾ ಅಂಬರೀಶ್ಗೆ ಟಿಕೆಟ್ ಬಹುತೇಕ ಅನುಮಾನವಾಗಿದೆ ಎಂಬ ಮಾಹಿತಿ ದೊರೆತಿದೆ.ಈ ಹಿನ್ನೆಲೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ರವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಕುರಿತು ಮಂಡ್ಯ ಜೆಡಿಎಸ್ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಸರ್ವೆ ವರದಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಂತರೆ ಮಂಡ್ಯದಲ್ಲಿ ಗೆಲುವು ಫಿಕ್ಸ್ ಎಂದು ರಿಪೋರ್ಟ್ ಬಂದಿದೆ. ಇದರಿಂದ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಕೂಡ ಒತ್ತಡ ಹೇರುತ್ತಿದ್ದು ಸುಮಲತಾ ಅಂಬರೀಷ್ ರವರಿಗೆ ನಿರಾಶೆಯಾಗುವ ಲಕ್ಷಣಕಂಡುಬರುತ್ತಿದೆ.
ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಗೆಲುವಿನ ಹಾದಿ ಸುಲಭ ಎಂಬ ವರದಿ ಹೇಳಿದೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬರುತ್ತದೆ ಎಂದು ಜಿಲ್ಲಾ ಜೆಡಿಎಸ್ ನಾಯಕರು ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಕೂಡ ಸಂಪೂರ್ಣ ಸಾಥ್ ನೀಡುತ್ತಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ಡಿಕೆ ಸುರೇಶ್ನನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಹೇಳಿದ್ದು ಒಂದು ವೇಳೆ ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಲು ನಿರಾಕರಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಸ್ ಪುಟ್ಟರಾಜು ಕಣ್ಣಕ್ಕಿಳಿಯವುದು ಬಹುತೇಕ ಖಚಿತ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಸುಮಲತಾ ಆಪ್ತ ಸಚ್ಚಿದಾನಂದರನ್ನ ಮನವೊಲಿಸುವಲ್ಲಿ ಹೆಚ್ಡಿಡಿ ಯಶಸ್ವಿಯಾಗಿದ್ದಾರೆ. ಸಚ್ಚಿದಾನಂದ ಯಡಿಯೂರಪ್ಪ ಅವರಿಗೂ ಶಿಷ್ಯ, ನನಗೂ ಶಿಷ್ಯ. ರಾಜಕಾರಣದಲ್ಲಿ ಯಾರು ಶತ್ರವೂ ಅಲ್ಲ, ಮಿತ್ರರು ಅಲ್ಲ ಎಂದಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ, ಬಿಜೆಪಿಯಿಂದ ಸ್ಪರ್ಧಿಸ್ಬೇಕೆಂಬ ಸುಮಲತಾ ಕನಸು ಛಿದ್ರವಾದಂತೆಯೇ ಅಂತಾ ಅಖಾಡದಲ್ಲಿ ಗುಸುಗುಸು ಚರ್ಚೆ ಶುರುವಾಗಿದೆ.ಸುಮಲತಾರನ್ನ ಕಾಂಗ್ರೆಸ್ಗೆ ಕರೆತರುವ ಬಗ್ಗೆ ಪಕ್ಷದಲ್ಲಿ ಒಮ್ಮತ ಮೂಡಿಲ್ಲ. ಮಂಡ್ಯದಲ್ಲಿ ಕ್ಲೀನ್ ಇಮೇಜ್ ಇರುವ ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿ ಮಣೆ ಹಾಕಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಇದರಿಂದ ಮಂಡ್ಯದಿಂದ ಕಣಕ್ಕಿಳಿಯಬೇಕೆಂಬ ಸುಮಲತಾ ಲೆಕ್ಕಾ ಉಲ್ಟಾವಾಗಿದ್ದು ಸುಮಲತಾ ಅಂಬರೀಷ್ ರವರ ಮುಂದಿನ ರಾಜಕೀಯ ನಡೆ ಕುತೂಹಲಉಂಟುಮಾಡಿದೆ .
ಹನುಮ ಧ್ವಜ ಹಾರಾಟ ವಿಚಾರದಲ್ಲಿ ಕಾಂಗ್ರೆಸ್ ನಡೆ ವಿರುದ್ಧ ಮಂಡ್ಯ ಜನತೆ ಕೂಡ ರೊಚ್ಚಿಗೆದ್ದಿದ್ದಾರೆ ಎಂದು ತಿಳಿದಿದೆ.ಕಾಂಗ್ರೆಸ್ ಗೆ ಸಡ್ಡು ಹೊಡೆಯಲು ಹಿಂದೂ ಕಾರ್ಯಕರ್ತರು ತೀರ್ಮಾನಿಸಿದ್ದು ಒಟ್ಟಿನಲ್ಲಿ ಮಂಡ್ಯ ರಾಜಕೀಯನೇ ಕುತೂಹಲಕ್ಕೆ ತೆರೆಹಾಕಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ರವರು ಬಿಜೆಪಿ-ಕಾಂಗ್ರೆಸ್ಗೆ ಸೆಡ್ಡು ಹೊಡೆದು ಮಂಡ್ಯದಲ್ಲೇ ಪಕ್ಷೇತರರಾಗಿ ಸ್ಪರ್ಧಿಸ್ತಾರಾ? ಅಥವಾ ಬಿಜೆಪಿ ನಾಯಕರು ಸುಮಲತಾರನ್ನ ಮನವೊಲಿಸಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾರಾ? ಇದಕ್ಕೆ ಸುಮಲತಾ ಒಪ್ತಾರಾ? ಎಂಬುದು ಮುಂದೆ ಕಾದುನೋಡಬೇಕಾಗಿದೆ .


