Saturday, March 14, 2026
Flats for sale
Homeಜಿಲ್ಲೆಮಂಗಳೂರು : ಸೋಲಿನ ಭಯದಲ್ಲಿ ಪುತ್ತಿಲಗೆ ಮುಕ್ತ ಅವಕಾಶ ನೀಡಿದ ಬಿಜೆಪಿ,ಸತ್ಯ ಜೀತ್ ಸುರತ್ಕಲ್,ಅರುಣ್ ಕುಮಾರ್...

ಮಂಗಳೂರು : ಸೋಲಿನ ಭಯದಲ್ಲಿ ಪುತ್ತಿಲಗೆ ಮುಕ್ತ ಅವಕಾಶ ನೀಡಿದ ಬಿಜೆಪಿ,ಸತ್ಯ ಜೀತ್ ಸುರತ್ಕಲ್,ಅರುಣ್ ಕುಮಾರ್ ಪುತ್ತಿಲ ಜೊತೆ ನಿಂತ ಯುವ ಕಾರ್ಯಕರ್ತರು ,ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಾರಿ ಅಸಮಾಧಾನ.

ಮಂಗಳೂರು : ಪ್ರತಿ ಬಾರಿ ಹಿಂದುತ್ವ ,ಮೋದಿ ಹೆಸರಲ್ಲಿ ಗೆದ್ದು ಬರುತ್ತಿದ್ದ ನಳಿನ್ ಕುಮಾರ್ ಕಟೀಲ್ ವಿರುದ್ಧ ಯುವ ಮತದಾರರು ಬದಲಾವಣೆ ಬೇಕೆಂದು ಕೇಳುತಿದ್ದಾರೆ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ,ಆದರೆ ಸಂಘಪರಿವಾರ ಕೂಡ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಬದಲಾವಣೆಗೆ ಪ್ರಯತ್ನ ಪಡುತ್ತಿದ್ದು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನದ ದಗೆ ಬೀಸುತ್ತಿದೆ.

ಮೊದಲನೆಯದಾಗಿ ಕಾರ್ಯಕರ್ತರ ಕಡೆಗಣನೆ,ಸರ್ವಾಧಿಕಾರ ದೋರಣೆ, ಎಲ್ಲಾ ಕಮಿಷನ್ ವಿಚಾರದಲ್ಲೂ ಹಸ್ತಕ್ಷೇಪ ಇರುವ ಕಾರಣ ಬಿಜೆಪಿ ನಾಯಕರು ಯುವ ಕಾರ್ಯಕರ್ತರು ನಳೀನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಬಾಯಿ ಬುಡಕೆ ತರ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ,ಪ್ರಧಾನ ಮಂತ್ರಿಯವರ ಗ್ರಾಮ ದತ್ತು ಯೋಜನೆಯನ್ನು ಕೂಡ ಸರಿಯಾಗಿ ಸಮರ್ಥಿಸದ ಕಾರಣ ಸುಳ್ಯ ಹಾಗೂ ಪುತ್ತೂರು ಭಾಗದಲ್ಲಿ ಕಟೀಲ್ ವಿರುದ್ಧ ಅಸಮಾಧಾನದ ಗಾಳಿ ಬಿಸಿದೆ.ಈ ಬಗ್ಗೆ ವರಿಷ್ಠರು ವಿದ್ಯಾವಂತ ಕ್ರಿಯಾಶೀಲ,ಎಲ್ಲಾ ಕಾರ್ಯಕರ್ತರ ನಾಡಿಮಿಡಿತವನ್ನು ಸೆಳೆಯುವ ಯುವ ಕಾರ್ಯಕರ್ತರನ್ನು ಆಯ್ಕೆ ಮಾಡಲು ಪ್ರೇರೇಪಿಸಿತ್ತಿರುವುದು ನಿಜವಾದ ಸಂಗತಿ.

ನೈಜ ಹಿಂದೂ ಕಾರ್ಯಕರ್ತರಾದ ಸತ್ಯಜೀತ್ ಸುರತ್ಕಲ್,ಅರುಣ್ ಪುತ್ತಿಲ,ತಿಮರೋಡಿ ,ಶ್ರೀಕರ್ ಪ್ರಭು ಇನ್ನೂ ಅನೇಕ ಹಿಂದುತ್ವ ಕಾರ್ಯಕರ್ತನ್ನು ಮೂಲೆ ಗುಂಫು ಮಾಡಿದ ಪ್ರತೀತಿ ಈ ನಳೀನ್ ಕುಮಾರ್ ಮೇಲೆ ಇದೆ.ಕೇವಲ ಸ್ವಾರ್ಥ ರಾಜಕಾರಣದಿಂದ ಎಲ್ಲಾ ಲಾಭವನ್ನು ಪಡೆದು ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿದು ಸತ್ಯ. ಪ್ರಬಲ ಹಿಂದೂ ನಾಯಕ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಫಲಗೊಂಡಿದೆ. ಲೋಕಸಭೆ ಚುನಾವಣೆಗೆ ಪುತ್ತಿಲ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.ಸತ್ಯ ಜೀತ್ ಸುರತ್ಕಲ್ ರವರ ತಂಡ ಕೂಡ ಈ ಬಾರಿ ಮಾಡು ಇಲ್ಲವೇ ಮಡಿ ತರಹ ಈಗಲೇ ಪ್ರಚಾರಕಾರ್ಯದಲ್ಲಿ ತೊಡಗಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯಲ್ಲಿ ಅಸಮಾದಾನ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ, ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತಾ ಆಹ್ವಾನ ನೀಡಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದ್ದೇವೆ. ಕಳೆದ ಎರಡು ದಿನಗಳಿಂದ ಅವರ ಜೊತೆ ಸಂಧಾನ ನಡೆಯುತ್ತಿದೆ. ಮಂಡಲ ಅಧ್ಯಕ್ಷ, ಜಿಲ್ಲಾಧ್ಯಕ್ಷ, ಪದಾಧಿಕಾರಿ ಕೊಡಬೇಕೆಂದು ಹೇಳಿದ್ದಾರೆ. ಅವರ ಬೇಡಿಕೆಗೆ ನಾವು ಓಕೆ ಅಂದಿದ್ದೇವೆ. ಆದರೆ ಮೊದಲು ಪಕ್ಷಕ್ಕೆ ಸೇರಬೇಕು. ಸೇರಿದ ಬಳಿಕ ಸೂಕ್ತ ನಾಯಕತ್ವ ಕೊಡುವ ಬಗ್ಗೆ ತೀರ್ಮಾನ ಆಗುತ್ತದೆ. ಅವರಿಗೆ ಇದು ಒಪ್ಪಿಗೆ ಆಗಬೇಕಾಗಿದೆ ಎಂದರು.

ಸುಳ್ಯ,ಪುತ್ತೂರು ನಿಂದ ಬಿಜೆಪಿ ಗೆ ಅತಿ ಹೆಚ್ಚು ಲೀಡ್ ಬರುವುದರಿಂದ ಈ ಬಾರಿ ತಲೆನೋವು ಶುರುವಾಗಿದೆ, ಸುರತ್ಕಲ್ ನಿಂದ ಬಿಲ್ಲವ ನಾಯಕ ಮಾಜಿ ಹಿಂದೂ ಜಾಗರಣೆ ವೇದಿಕೆಯ ಮುಖಂಡ ಸತ್ಯಜೀತ್ ಸುರತ್ಕಲ್,ಪುತ್ತೂರಿನಿಂದ ಅರುಣ್ ಪುತ್ತಿಲ ಚುನಾವಣೆಗೆ ಸ್ಪರ್ದಿಸುವುದರಿಂದ ಈ ಬಾರಿಯ ಸ್ಪರ್ಧೆ ಪೈಪೋಟಿ ಇದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಲೋಕಸಭೆಗೆ ಅಭ್ಯರ್ಥಿಯನ್ನು ಬದಲಾವಣೆ ಮಾಡಿದರೆ ಅಸಮಾಧಾನದ ಬೇಗೆಯನ್ನು ಹಾರಿಸಬಹುದು ಎಂಬುದು ಮುಖಂಡರ ಮಾತು.ಅವಶ್ಯಕತೆ ಬಿದ್ದರೆ ಎಷ್ಟು ಸಲ ಬೇಕಾದರೂ ರಾಜ್ಯಾಧ್ಯಕ್ಷರು ಕರೆದು‌ ಮಾತನಾಡುತ್ತಾರೆ. ಅವರನ್ನು ಸೇರಿಸಲು ಮನವೊಲಿಸುವ ಎಲ್ಲಾ ಕೆಲಸವನ್ನು ಮಾಡುತ್ತಾರೆ. ಎರಡು ಕಡೆಯಿಂದ ಎಷ್ಟು ಬೇಗ ಅಸಮಾಧಾನದ ಮುಗಿಸುತ್ತಾರೆಯೋ ಅಷ್ಟು ಬೇಗ ಗೊಂದಲ ಮುಗಿಯುತ್ತದೆ ಸತೀಶ್ ಕುಂಪಲ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular