ಮಂಗಳೂರು ; ನಗರದ ಜೆಪ್ಪು ವೇಲೆನ್ಸಿಯಾ ಬಳಿ ಇರುವ ಸೇಂಟ್ ಜೆರೋಸಾ ಶಾಲೆಯ ಘಟನೆಗೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಲು ಗುಲ್ಬರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ನಗರಕ್ಕೆ ಆಗಮಿಸಿದ್ದರು. ಅವರು ಇಂದು ಏಳನೇ ತರಗತಿಯ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ತನಿಖೆ ನಡೆಸಿದ್ದಾರೆ.ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ನನ್ನ ಬಳಿ ತುಂಬಾ ವಿಷಯ ಕೇಳಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಶಾಲೆಯಲ್ಲಿರುವಾಗ ಶಿಕ್ಷಕಿ ಏನೆಲ್ಲಾ ಹೇಳಿದ್ದರು ಎಂದು ಪ್ರಶ್ನೆ ಕೇಳಿದ್ದಾರೆ ಇದಕ್ಕೆ ಪ್ರತಿಕ್ರಿಹಿಸಿದ ಮಕ್ಕಳು ಅಯ್ಯೋಧ್ಯೆ ಶ್ರೀರಾಮ ಮಂದಿರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಹೇಳನದ ವಿಚಾರ, ನಾಗದೇವರಿಗೆ ಹಾಲು ಹಾಕುವ ಬಗ್ಗೆ ಹೇಳಿರೋದನ್ನು ಹೇಳಿದ್ದಾರೆ ನಾಗದೇವರಿಗೆ ಯಾಕೆ ಹಾಲು ಹಾಕೋದು, ಅದರ ಬದಲು ಪಾಪದವರಿಗೆ ಆ ಹಾಲು ಕೊಡಬಹುದಲ್ವಾ ಅಂತ ಶಿಕ್ಷಕಿ ಹೇಳಿದ್ದಾಗಿ ತಿಳಿಸಿದ್ದಾಳೆ. ಹಣೆಗೆ ಪ್ರಸಾದ, ಕೈಗೆ ಬಳೆ, ಕಾಲಿಗೆ ಗೆಜ್ಜೆ ಹಾಕುವಂತೆ ಇರಲಿಲ್ಲ. ಹಾಕಿದರೆ ಬೈಯುತ್ತಿದ್ದರು. ನಾನು ಏಳನೇ ತರಗತಿಯಲ್ಲಿರುವಾಗ ಇದೆಲ್ಲ ಹೇಳುತ್ತಿದ್ದರು. ಅವಾಗ ಸಮಾಜ ವಿಜ್ಞಾನ ವಿಷಯಕ್ಕೆ ಆ ಶಿಕ್ಷಕಿ ಇದ್ದರು. ಆ ಸಮಯದಲ್ಲಿ ನಾವು ಚಿಕ್ಕವರಿದ್ದೆವು. ಹೆಚ್ಚೇನು ಗೊತ್ತಾಗುತ್ತಿರಲಿಲ್ಲ. 10 ನೇ ತರಗತಿಯಲ್ಲಿದ್ದಾಗ ಪೋಷಕರ ಬಳಿ ಹೇಳಿದ್ದೆ ಇದೆಲ್ಲ ಮೊದಲಿನಿಂದಲೇ ನಟೆಯುತ್ತ ಇತ್ತು ಆದರೆ ನಾವು ಅಷ್ಟೊಂದು ತಲೆಕೆಡಿಸಿಕೊಳ್ಳಲಿಲ್ಲ ಎಂದು ಮತ್ತೊರ್ವೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಸಂಗ್ರಹಿಸಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ತನಿಖೆಯ ಸ್ಪಷ್ಟತೆ ಸಿಗಲಿದೆ ಎಂಬುದು ಬಲ್ಲಮೂಲಗಳಿಂದ ಮಾಹಿತಿ.ರಾಜಕೀಯ ಪ್ರಭಾವಕ್ಕೆ ಒಳಗಾಗಿ ತನಿಖೆ ಅಧಿಕಾರಿಗಳು ನಡೆದಿರುವ ಸತ್ಯವನ್ನು ಮರೆಮಾಚಲು ಯತ್ನಿಸುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.


