Tuesday, March 17, 2026
Flats for sale
Homeಜಿಲ್ಲೆಮಂಗಳೂರು : ಸುಹಾಸ್‌ ಶೆಟ್ಟಿಗೆ ಒಂದು ತಿಂಗಳ ಮೊದಲೆ ಸ್ಟೇಟಸ್ ಹಾಕಿ ಸ್ಕೆಚ್ ಹಾಕಿದ ಕೊಲೆಗಡುಕರು,ಪೋಲಿಸ್...

ಮಂಗಳೂರು : ಸುಹಾಸ್‌ ಶೆಟ್ಟಿಗೆ ಒಂದು ತಿಂಗಳ ಮೊದಲೆ ಸ್ಟೇಟಸ್ ಹಾಕಿ ಸ್ಕೆಚ್ ಹಾಕಿದ ಕೊಲೆಗಡುಕರು,ಪೋಲಿಸ್ ಇಲಾಖೆ ಗುಪ್ತಚರ ಇಲಾಖೆಯ ವೈಫಲ್ಯವೆಂದ ಬಿಜೆಪಿ ಶಾಸಕರು….!

ಮಂಗಳೂರು : ಸುರತ್ಕಲ್ ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆದಿದ್ದು ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ನಡೆದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಅವರು ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ . ಮಂಗಳೂರಿನ ಎ.ಜೆ ಆಸ್ಪತೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದೌದಹಿಸಿದ್ದು ಸುಹಾಸ್‌ ಶೆಟ್ಟಿ ಅಮರ್ ರಹೇ ಎಂದು ಘೋಷಣೆ ಕೂಗಿದ್ದಾರೆ.ಹಲವು ಹೊತ್ತು ಆಸ್ಪತ್ರೆಯ ಬಳಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ಪೊಲೀಸರು ಪರಿಸ್ಥಿತಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರು ಮುಸ್ಲಿಂ ಎಂಬ wಟ್ಸ್ ಅಪ್ ಗ್ರೂಪಿನಲ್ಲಿ ಒಂದು ತಿಂಗಳ ಹಿಂದೆ ಸ್ಟೇಟಸ್ ಹಾಕಿ ಸ್ಕೆಚ್ ಹಾಕಿ ನೆಕ್ಸ್ಟ್ ಟಾರ್ಗೆಟ್ ಎಂದು ಬಹಿರಂಗ ಪಡಿಸಿದ್ದು ಪೊಲೀಸ್ ಇಲಾಖೆ ಹಾಗೂ ಗುಪ್ತ ಚರ ಇಲಾಖೆ ವೈಫಲ್ಯದಿಂದ ಕೊಲೆ ನಡೆದಿದೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

2022ರ ಜುಲೈ 28ರಂದು ನಡೆದಿದ್ದ ಸುರತ್ಕಲ್ ನ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಫಾಜಿಲ್ ಹತ್ಯೆ ಹತ್ಯೆ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಎಂದು ತಿಳಿದಿದೆ. ಸುಹಾಸ್‌ ಶೆಟ್ಟಿ ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಂತರ ಯಾವುದೇ ಜವಾಬ್ದಾರಿ ಇರಲಿಲ್ಲ ಎಂದು ತಿಳಿದಿದೆ.

ತಮ್ಮ ಆತ್ಮ ರಕ್ಷಣೆಗಾಗಿ ಸ್ವತಃ ವಾಹನದಲ್ಲಿ ಸುರಕ್ಷತೆಗಾಗಿ ವಸ್ತುಗಳನ್ನು ಇರಿಸಿದ್ದ ಸುಹಾಸ್ ಶೆಟ್ಟಿಯವರಿಗೆ ಪೊಲೀಸರು ಪದೇ ಪದೇ ಬಂದು ವಾಹನ ಪರಿಶೀಲಿಸುತ್ತಿದ್ದರೆಂದು ಜೊತೆಯಲ್ಲಿದ್ದ ಸಂಗಡಿಗರು ಆಕ್ರೋಶ ಹೊರಹಾಕಿದ್ದಾರೆ ,ಈ ಕೊಲೆಗೆ ನೇರ ಕಾಂಗ್ರೆಸ್ ಸರಕಾರ,ಸಿದ್ದರಾಮಯ್ಯ ಹೊಣೆ,ಈ ಸರಕಾರ ಹಿಂದೂಗಳ ವಿರೋಧಿ ದೋರಣೆ ನಡೆಸುತ್ತಿದೆ ಎಂದು ಸ್ಥಳದಲ್ಲಿ ನೆರೆದಿದ್ದ ಹಿಂದೂ ಕಾರ್ಯಕರ್ತರು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular