Wednesday, February 11, 2026
Flats for sale
Homeಜಿಲ್ಲೆಮಂಗಳೂರು ; ಸುರತ್ಕಲ್ ಎನ್‌ಐಟಿಕೆಯ ಮೊದಲ ವರ್ಷದ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನ ಆಹಾರದಲ್ಲಿ ವ್ಯತ್ಯಯ,ಕೆಲವು ವಿದ್ಯಾರ್ಥಿಗಳು ಅಸ್ವಸ್ಥ.

ಮಂಗಳೂರು ; ಸುರತ್ಕಲ್ ಎನ್‌ಐಟಿಕೆಯ ಮೊದಲ ವರ್ಷದ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನ ಆಹಾರದಲ್ಲಿ ವ್ಯತ್ಯಯ,ಕೆಲವು ವಿದ್ಯಾರ್ಥಿಗಳು ಅಸ್ವಸ್ಥ.

ಮಂಗಳೂರು ; ಸುರತ್ಕಲ್ ಎನ್‌ಐಟಿಕೆಯ ಮೊದಲ ವರ್ಷದ ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ ಆಹಾರದಲ್ಲಿ ವ್ಯತ್ಯಯ ಉಂಟಾಗಿ ಹಲವರು ಹೊಟ್ಟೆ ನೋವು ಸಹಿತ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಫೆ. 9 ರಂದು 120 ರಷ್ಟು ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹೆಚ್ಚಿನವರಿಗೆ ವಾಂತಿ -ಭೇದಿಯಿಂದ ಸಮಸ್ಯೆಯಾಗಿದೆ.

ಹಲವರು ಹೊಟ್ಟೆನೋವು, ವಾಂತಿ ಭೇದಿಯಿಂದ ನರಳಿದ್ದಾರೆ. ಎನ್ ಐಟಿಕೆ ಯ ಅರಾವಳಿ ಮತ್ತು ಕರಾವಳಿ ಎನ್ನುವ ಹಾಸ್ಟೆಲ್ ಕಟ್ಟಡಗಳಲ್ಲಿ ಈ ಘಟನೆ ನಡೆದಿದೆ. ಎನ್‌ಐಟಿಕೆ ಕ್ಯಾಂಪ ಸ್ ನ ಕ್ಲಿನಿಕ್‌ನಿಂದಲೇ ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ತಮಗೆ ನೀಡುತ್ತಿರುವ ಆಹಾರದಲ್ಲಿ ಕೀಟಗಳು, ಹುಳಗಳು ಕಂಡುಬಂದಿವೆ, ಶುಚಿತಕ್ಕೆ ಗಮನ ನೀಡಲಾಗುತ್ತಿಲ್ಲ. ಹಾಗಾಗಿ ಈ ಸಮಸ್ಯೆ ಉಂಟಾಗಿದೆ ಎನ್ನುವುದು ವಿದ್ಯಾರ್ಥಿಗಳ ದೂರು.

ಆಹಾರದ ಗುತ್ತಿಗೆದಾರರು ವಿವಿಧ ಬ್ಲಾಕ್ ಗಳಿಗೆ ಬೇರೆಯವರಿದ್ದು, ಸೀನಿ ಯರ್ ವಿದ್ಯಾರ್ಥಿಗಳಿರುವಲ್ಲಿ ಬೇರೆ ಯವರಿದ್ದಾರೆ. ಹಾಗಾಗಿ ಈ ಸಮಸ್ಯೆ ಬೇರೆ ಬ್ಲಾಕ್‌ಗಳಲ್ಲಿ ಕಂಡು ಬಂದಿಲ್ಲ ಪುಡ್ ಕೋರ್ಟ್ ಕೂಡ ಬಂದ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮೆಸ್ ನ ಆಹಾರ ಸರಿ ಇಲ್ಲದಿದ್ದರೆ, ಫುಡ್ ಕೋರ್ಟ್ ಗೆ ಹೋಗಿ ತಮಗೆ

ಗಾಬರಿಪಡುವುದು ಬೇಡ : ಎನ್‌ಐಟಿಕೆ

ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಹೌದು, ಆದರೆ ಅವರಿಗೆ ಕ್ಯಾಂಪಸ್ ನಲ್ಲೇ ಚಿಕಿತ್ಸೆನೀಡಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಎನ್‌ ಐಟಿಕೆ ಸಾರ್ವಜನಿಕ ಸಂಪರ್ಕ ವಿಭಾಗ ತಿಳಿಸಿದೆ. ಕೆಲವು ದಿನಗಳ ಹಿಂದೆ ವಿರಾಸತ್ ಉತ್ಸವವಿದ್ದು, ಹೊರಗಿನ ಫುಡ್ ಸ್ಟಾಲ್ ಗಳೂ ಬಂದಿದ್ದವು, ಅದರಲ್ಲಿ ತಿಂಡಿ ತಿಂದಿರುವ ಕಾರಣ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಸಾಧ್ಯತೆ ಇದೆ. ಮೆಸ್ ನಲ್ಲಿ ನೀಡಲಾಗುವ ಆಹಾರ ಹಾಗೂ ನೀರಿನ ಮಾದರಿಗಳನ್ನೂ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನೈಜ ಕಾರಣ ತಿಳಿಯಲಿದೆ ಎಂದವರು ತಿಳಿಸಿದ್ದಾರೆ. ಸದ್ಯ ಯಾರಿಗೂ ಅಪಾಯ ಉಂಟಾಗಿಲ್ಲ ಹೆತ್ತವರು ಗಾಬರಿಪಡಬೇಕಾಗಿಲ್ಲ’ ಎಂದು ತಿಳಿಸಲಾಗಿದೆ.

ಬೇಕಾದದ್ದನ್ನುತಿನ್ನುತ್ತಾರೆ.ಆದರೆಫುಡ್ ಕೋರ್ಟ್ ಕೂಡ ಮುಚ್ಚಲಾಗಿದ್ದು, ಹೊಸ ಟೆಂಡರ್‌ದಾರರು ಇನ್ನೂ ಬಂದಿಲ್ಲ. ಹಾಗಾಗಿ ಫುಡ್ ಕೋರ್ಟ್ ಆಹಾರವೂ ಸಿಗದಂತಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಹೆತ್ತವರು ತಿಳಿಸಿದ್ದಾರೆ.

ಆಹಾರ ಅಥವಾ ನೀರು ಕಾರಣ?

ವಿದ್ಯಾರ್ಥಿಗಳ ಅಸ್ವಸ್ಥತೆಗೆ ಮಾಲಿನ್ಯಯುಕ್ತ ನೀರು ಅಥವಾ ಆಹಾರ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ವಿದ್ಯಾರ್ಥಿಗಳು ಕಾಯಿಲೆ ಬೀಳುತ್ತಿದ್ದರೂ ಆಡಳಿತ ಯಾವುದೇ ಕ್ರಮ ವಹಿಸಿಲ್ಲ ಶೌಚಾಲಯ, ಬಾತ್ ರೂಂನಲ್ಲೂ ಸ್ವಚ್ಛತೆ ಇಲ್ಲ ಎಂದು ಹೆತ್ತವರು ದೂರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular