Saturday, July 25, 2026
Homeಜಿಲ್ಲೆಮಂಗಳೂರು : ಸುಧೀರ್ ಶೆಟ್ಟಿ ಕಣ್ಣೂರು ನೂತನ ಆಗಿ ಮೇಯರ್; ಉಪಮೇಯರ್ ಆಗಿ ಸುನಿತಾ ಸಾಲಿಯಾನ್...

ಮಂಗಳೂರು : ಸುಧೀರ್ ಶೆಟ್ಟಿ ಕಣ್ಣೂರು ನೂತನ ಆಗಿ ಮೇಯರ್; ಉಪಮೇಯರ್ ಆಗಿ ಸುನಿತಾ ಸಾಲಿಯಾನ್ ಆಯ್ಕೆ.

ಮಂಗಳೂರು : ಶುಕ್ರವಾರದಂದು ಎಂಸಿಸಿ ಮಂಗಳಾ ಆಡಿಟೋರಿಯಂನಲ್ಲಿ ನಡೆದ ಚುನಾವಣೆಯಲ್ಲಿ ಮಂಗಳೂರಿನ 24ನೇ ಮೇಯರ್ ಆಗಿ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಉಪಮೇಯರ್ ಆಗಿ ಸುನೀತಾ ಸಾಲಿಯಾನ್ ಆಯ್ಕೆಯಾದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಚುನಾವಣಾ ಪ್ರಕ್ರಿಯೆ ನಡೆಸಿದರು.

ಸುಧೀರ್ ಶೆಟ್ಟಿ ಕೊಡಿಯಾಲ್ ಬೈಲ್ ವಾರ್ಡ್ ಪ್ರತಿನಿಧಿಸುತ್ತಿದ್ದರೆ, ಸುನೀತಾ ಸಾಲಿಯಾನ್ ಪಣಂಬೂರು ಬೆಂಗ್ರೆ ವಾರ್ಡ್ ನಿಂದ ಕಾರ್ಪೊರೇಟರ್ ಆಗಿದ್ದಾರೆ.ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಿಳಿಸಿದರು.

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ಉಪಸ್ಥಿತರಿದ್ದು ನೂತನ ಮೇಯರ್ ಮತ್ತು ಉಪಮೇಯರ್ ಅವರನ್ನು ಅಭಿನಂದಿಸಿದರು.

ನೂತನ ಮೇಯರ್ ಸುಧೀರ್ ಶೆಟ್ಟಿ ಮೂರು ಬಾರಿ ಕಾರ್ಪೊರೇಟರ್ ಆಗಿದ್ದು, ಉಪಮೇಯರ್ ಮೊದಲ ಬಾರಿಗೆ ಕಾರ್ಪೊರೇಟರ್ ಆಗಿದ್ದಾರೆ.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನವೀನ್ ಆರ್ ಡಿಸೋಜಾ ಅವರನ್ನು ಕಣಕ್ಕಿಳಿಸಿತ್ತು. ಸುಧೀರ್ 47 ಮತಗಳನ್ನು ಪಡೆದರೆ, ನವೀನ್ 14 ಮತಗಳನ್ನು ಗಳಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಉಪಮೇಯರ್ ಅವಿರೋಧವಾಗಿ ಆಯ್ಕೆಯಾದರು.
RELATED ARTICLES

LEAVE A REPLY

Please enter your comment!
Please enter your name here

Most Popular