Wednesday, December 18, 2024
Flats for sale
Homeಜಿಲ್ಲೆಮಂಗಳೂರು : ಸಾಲ ಮರುಪಾತಿ ವಿಚಾರಕ್ಕೆ ಕಿರುಕುಳ,ವಿಡಿಯೋ ಮಾಡಿ ಮನೋಹರ್ ಪಿರೇರಾ ಆತ್ಮಹತ್ಯೆ ಪ್ರಕರಣ ,MCC...

ಮಂಗಳೂರು : ಸಾಲ ಮರುಪಾತಿ ವಿಚಾರಕ್ಕೆ ಕಿರುಕುಳ,ವಿಡಿಯೋ ಮಾಡಿ ಮನೋಹರ್ ಪಿರೇರಾ ಆತ್ಮಹತ್ಯೆ ಪ್ರಕರಣ ,MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಬಂಧನ…!

ಮಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಹಲವು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ಮನೋಹರ್ ಪಿರೇರಾ (46) ಎಂಬವರು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಗ್ರಾಮಾಂತರ ಪೊಲೀಸರು ಕೊನೆಗೂ MCC ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೊ ನನ್ನ ಬಂಧಿಸಿದ್ದಾರೆ.

ಮನೋಹರ್​ ಎಂಸಿಸಿ ಬ್ಯಾಂಕ್​ನಿಂದ 15 ಲಕ್ಷ ಸಾಲ ಪಡೆದಿದ್ದರು. ಕೊರೊನಾ ಬಳಿಕ ನಷ್ಟಕ್ಕೀಡಾಗಿ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ. ಹೀಗಾಗಿ ಬ್ಯಾಂಕ್​ನ ಆಡಳಿತ ಮಂಡಳಿ ಮನೆ ಜಪ್ತಿ ಮಾಡಲು ಮುಂದಾಗಿದೆ. ಇದರಿಂದ ನೊಂದ ಮನೋಹರ್​ ಪಿರೇರಾ ಅವರು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ” ಮೂರು ವರ್ಷಗಳಿಂದ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ 9 ಲಕ್ಷ ರೂ. ಸಾಲ ಬಾಕಿ ಇದೆ. ಹೀಗಾಗಿ ಬ್ಯಾಂಕ್​ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ಅನೀಲ್ ಲೋಬೊ ಕಾರಣ” ಎಂದು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಬಳಿಕ, ವಿಡಿಯೋವನ್ನು ವಾಟ್ಸಾಪ್​ ಸ್ಟೇಟಸ್​ಗೆ ಹಾಕಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಮನೋಹರ್ ರವರು ನೀಡಿದ ಹಣವನ್ನು ಜಮಾಮಾಡದೆ ಅಧ್ಯಕ್ಷ ಅನಿಲ್ ಲೋಬೊ ಸ್ವತಃ ಬಳಸಿಕೊಂಡಿದ್ದು ಈ ಹಣದಲ್ಲಿ 9 ಲಕ್ಷ ರೂ ಯನ್ನು ತಿಂದಿದ್ದಾರೆಂದು ಹಾಗೂ ಮತ್ತೆ ಸಲ ಮರು ಪಾವತಿ ಮಾಡಲು ಅಧ್ಯಕ್ಷ ಕಿರುಕುಳ ನೀಡುತ್ತಿದ್ದನೆಂದು ದೆತ್ತ್ ನೋಟ್ ಬರೆದಿತ್ತು ಆತ್ಮಹತ್ಯೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಡುವೆ ಸಾಲದ ಸುಳಿಯಲ್ಲಿ ಸಿಲುಕಿದ್ದ ಮನೋಹರ್ ಪಿರೇರ ರವರು ಹೃದಯ ಸಂಬಂದಿ ಕಾಯಿಲೆ ಹಾಗೂ ಪ್ಯಾರಾಲಿಸಿಸ್ ಆಗಿ ಬಳಲುತ್ತಿದ್ದರು. ಕೂಡಿಟ್ಟ ಹಣ ಕಳೆದುಕೊಂಡ ಹಿನ್ನೆಲೆ ಮನನೊಂದು MCC ಬ್ಯಾಂಕ್ ಅಧ್ಯಕ್ಷಅನಿಲ್ ಲೋಬೊ ಕಿರುಕುಳ ನೀಡುತ್ತಿದ್ದಾರೆಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಬ್ಬರು ಪರಸ್ಪರ ಪರಿಯಸ್ಥರಾಗಿದ್ದು ರಾಜಕೀಯ ಪ್ರಭಾವ ಬೀರಿ ಅನಿಲ್ ಲೋಬೊ ಮನೋಹರ್ ವಿರುದ್ಧ ಮಾನಸಿಕ ದೌರ್ಜನ್ಯ ನಡೆಸುತ್ತಿದ್ದರು. ಇದೀಗ ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಅನಿಲ್ ಲೋಬೊ ನನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular