ಮಂಗಳೂರು : ಕಾಂಗ್ರೆಸ್ ಪಕ್ಷ ಅಭಿವೃದ್ದಿ, ಬಡವರ ಏಳಿಗೆ, ಸಾಮರಸ್ಯ ಮುಂತಾ ವಿಚಾರ ಮುಂದಿಟ್ಟು ಚುನಾವಣೆ ಎದುರಿಸ್ತಾ ಇದ್ರೆ ಬಿಜೆಪಿ ದ್ವೇಶವನ್ನು ಬಿತ್ತುವ ಮೂಲಕ ಚುನಾವಣೆ ಮಾಡಲು ಹೊರಟಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿಯೇ ಮುಸ್ಲಿಂರ ವಿರುದ್ಧ ಧ್ವೇಶದ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಚಾರ ಪ್ರಸ್ತಾಪಸಿದ್ದಾರೆ. ಕರ್ನಾಟಕದಲ್ಲಿ ಹೀನಾಯ ಸೋಲಿನ ಬೀತಿ ಬಿಜೆಪಿಗೆ ಎದುರಾಗಿದೆ . ಹೀಗಾಗಿ ಜನಪರ ಕಾಳಜಿಯ ವಿಚಾರ ಬಿಟ್ಟು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವಂತಹ ಹೇಳಿಕೆ ನೀಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಚಾರ ಮಾಡಲು ಪ್ರಧಾನಿ ಮೋದಿ 28 ಸಲ ಬಂದಿದ್ದಾರೆ. ಅದ್ರಲ್ಲಿ 16 ರೋಡ್ ಶೋ ಮಾಡಿದ್ರೆ 12 ಸಮಾವೇಶ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ 136 ಸ್ಥಾನ ಗೆದ್ದು ಮೋದಿ ಅಲೆ ಇಲ್ಲ ಅನ್ನೋದನ್ನು ಸಾಭೀತು ಮಾಡಿತ್ತು. ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ತನಗಾಗಿ ಮತ ಕೇಳದೆ ಮೋದಿ ಅವರಿಗೆ ಮತ ಕೇಳುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಗರು ದೇಶದ ಇತಿಹಾಸದಲ್ಲೇ ನಡೆದಿರುವ ದೊಡ್ಡ ಬ್ರಷ್ಟಾಚಾರವಾಗಿರೋ ಎಲೆಕ್ಟ್ರೋರಲ್ ಬಾಂಡ್ ವಿಚಾರದ ಬಗ್ಗೆ ಮಾತನಾಡಬೇಕು. ದೇಶದ ಜನ ರಾಜ್ಯದ ಜನ ಎಲ್ಲವನ್ನೂ ಗಮನಿಸಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಸೇರಿದಂತೆ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮಂಜುನಾಥ ಭಂಡಾರಿ ಹೇಳಿದ್ದಾರೆ.