Monday, April 6, 2026
Flats for sale
Homeಜಿಲ್ಲೆಮಂಗಳೂರು : ವಿಶ್ವ ಆರೋಗ್ಯ ದಿನದ ಅಂಗವಾಗಿ ಇಂಡಿಯಾನಾ ಆಸ್ಪತ್ರೆಯಿಂದ ವಿಶೇಷ ಆರೋಗ್ಯ ಕಾರ್ಡ್ ಯೋಜನೆಗೆ...

ಮಂಗಳೂರು : ವಿಶ್ವ ಆರೋಗ್ಯ ದಿನದ ಅಂಗವಾಗಿ ಇಂಡಿಯಾನಾ ಆಸ್ಪತ್ರೆಯಿಂದ ವಿಶೇಷ ಆರೋಗ್ಯ ಕಾರ್ಡ್ ಯೋಜನೆಗೆ ಚಾಲನೆ.

ಮಂಗಳೂರು ; ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ನಗರದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ Indiana Hospital & Heart Institute ರೋಗಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೈಕೆ ಒದಗಿಸುವ ಉದ್ದೇಶದಿಂದ ವಿಶೇಷ ಆರೋಗ್ಯ ಕಾರ್ಡ್ ಯೋಜನೆಯನ್ನು ಘೋಷಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ World Health Organization ಸ್ಥಾಪನೆಯ ವಾರ್ಷಿಕೋತ್ಸವದ ಅಂಗವಾಗಿ ಆಚರಿಸಲ್ಪಡುವ ಈ ದಿನಕ್ಕೆ 2026ರಲ್ಲಿ “ಆರೋಗ್ಯಕ್ಕಾಗಿ ಒಟ್ಟಾಗಿ: ವಿಜ್ಞಾನದೊಂದಿಗೆ ನಿಲ್ಲು” ಎಂಬ ಧ್ಯೇಯವಾಕ್ಯವನ್ನು ಘೋಷಿಸಲಾಗಿದೆ.

ಆಸ್ಪತ್ರೆಯ ನಿರ್ದೇಶಕ ಡಾ. ನಿಹಾಲ್ ಅಲಿ ಕುಂಬ್ಳೆ ಮಾತನಾಡಿ, “ಆರೋಗ್ಯವು ಅಮೂಲ್ಯವಾದ ಸಂಪತ್ತು. ಪ್ರತಿಯೊಬ್ಬರೂ ತಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು. ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಬದ್ಧತೆ,” ಎಂದರು.

ಏಪ್ರಿಲ್ 8ರಿಂದ 14ರವರೆಗೆ ರೂ. 399 ಬೆಲೆಯ ಇಂಡಿಯಾನಾ ಆರೋಗ್ಯ ಕಾರ್ಡ್ (ಗೋಲ್ಡ್ ಕಾರ್ಡ್) ಅನ್ನು ರೂ. 99ಕ್ಕೆ ನೀಡಲಾಗುತ್ತದೆ. ಜೊತೆಗೆ ಏಪ್ರಿಲ್ 7ರಂದು ಆಸ್ಪತ್ರೆಗೆ ಭೇಟಿ ನೀಡುವ ಎಲ್ಲಾ ಒಳರೋಗಿ ಮತ್ತು ಹೊರರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಕಾರ್ಡ್ (ಸಿಲ್ವರ್ ಕಾರ್ಡ್) ಉಚಿತವಾಗಿ ವಿತರಿಸಲಾಗುತ್ತದೆ.

ಕಾರ್ಡ್ ಹೊಂದಿದವರಿಗೆ ಇನ್-ಹೌಸ್ ವೈದ್ಯರ ಸಮಾಲೋಚನೆ ಮತ್ತು ಒಪಿ ಸೇವೆಗಳಲ್ಲಿ 20% ರಿಯಾಯಿತಿ, ಲ್ಯಾಬ್ ಹಾಗೂ ರೇಡಿಯಾಲಜಿ ಸೇವೆಗಳಲ್ಲಿ 15% ರಿಯಾಯಿತಿ, ಐಪಿ ಸೇವೆಗಳಲ್ಲಿ 10% ರಿಯಾಯಿತಿ (ವೈದ್ಯರ ಶುಲ್ಕ ಮತ್ತು ಔಷಧಿಗಳನ್ನು ಹೊರತುಪಡಿಸಿ) ಹಾಗೂ ಒಪಿ ಔಷಧಿಗಳಲ್ಲಿ 5% ರಿಯಾಯಿತಿ ದೊರೆಯಲಿದೆ.

ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ಅವರು, “ರೋಗಿಗಳ ಆರೋಗ್ಯ ಕಾಪಾಡುವುದು ಮತ್ತು ಅವರ ಆರ್ಥಿಕ ಭಾರ ಕಡಿಮೆ ಮಾಡುವುದು ನಮ್ಮ ಮುಖ್ಯ ಗುರಿ. ಈ ಯೋಜನೆಯಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗಲಿದೆ,” ಎಂದು ಹೇಳಿದರು.

NABH ಮಾನ್ಯತೆ ಪಡೆದ 300 ಹಾಸಿಗೆಗಳ ಇಂಡಿಯಾನಾ ಆಸ್ಪತ್ರೆ, 25ಕ್ಕೂ ಹೆಚ್ಚು ಸೂಪರ್-ಸ್ಪೆಷಾಲಿಟಿ ವಿಭಾಗಗಳಲ್ಲಿ ಸೇವೆ ನೀಡುತ್ತಿದ್ದು, ಇತ್ತೀಚೆಗೆ ಲೇಸರ್ ಅಂಜಿಯೋಪ್ಲಾಸ್ಟಿ ಪರಿಚಯಿಸಿದೆ. ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಇಂಡಿಯಾನ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಪೂರ್ವ ಶ್ರೀಜಯದೇವ , ಕನ್ಸಲ್ಟೆಂಟ್ ಫಿಸಿಶಿಯನ್, ಇಂಟೆನ್ಸಿವಿಸ್ಟ್, ಡಯಾಬಿಟಾಲಜಿಸ್ಟ್ ಡಾ. ಆದಿತ್ಯ ಭಾರದ್ವಾಜ್ , ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಇ. ವಿಜಯ್ ಚಂದ್ರ ಉಪಸ್ಥಿತರಿದ್ದರು .

RELATED ARTICLES

LEAVE A REPLY

Please enter your comment!
Please enter your name here

Most Popular