ಮಂಗಳೂರು : ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರಿಂದ ಖೀರ್ ಮಿಕ್ಸ್ ಪ್ಯಾಕೆಟ್ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಶಪಡಿಸಿಕೊಂಡ ಚಿನ್ನ 347 ಗ್ರಾಂ ತೂಕವಿದ್ದು, 24 ಕ್ಯಾರೆಟ್ ಶುದ್ಧತೆ ಹೊಂದಿದೆ. ಈ ಚಿನ್ನದ 20 ಲಕ್ಷ ರೂ.ಎಂದು ಅಂದಾಜುಮಾಡಲಾಗಿದೆ.
ಪ್ರಯಾಣಿಕರು ಶುಕ್ರವಾರ ದುಬೈನಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದರು. ಅವರ ಬ್ಯಾಗ್ನಲ್ಲಿ ಕಿಚನ್ ಟ್ರೆಶರ್ಸ್ ಬ್ರಾಂಡ್ನ ಐದು ಪ್ಯಾಕೆಟ್ ಖೀರ್ ಮಿಕ್ಸ್ ಇತ್ತು. ಕಸ್ಟಮ್ ಅಧಿಕಾರಿಗಳು ಅನುಮಾನಗೊಂಡು ಪ್ಯಾಕೆಟ್ಗಳನ್ನು ತೆರೆದಾಗ ಅದರಲ್ಲಿ ಚಿನ್ನ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಮೂಲಗಳು ಈ ಮಾಹಿತಿಯನ್ನು ನೀಡಿವೆ.


