ಮಂಗಳೂರು : ಉದ್ಯಮಿ ಒಬ್ಬರ ದೂರಿನ ಅನ್ವಯ ಕರಾವಳಿಯ ವಂಚಕ ರೋಹನ್ ಸಲ್ದಾನ ನನ್ನ ಬಂಧಿಸಿದ್ದಾರೆ.ಸಾಲ ಕೊಡುವ ಆಮೀಷವೊಡ್ಡಿ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಂದ ಬರೋಬ್ಬರಿ 2೦೦ ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದಾನೆ.ಗುರುವಾರ ರಾತ್ರೆ ತನ್ನ ಐಷಾರಾಮಿ ಬಂಗಲೆಯಲ್ಲಿ ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಖತರ್ನಾಕ್ ನನ್ನು ಬಂಧಿಸಿದ್ದಾರೆ. ರೋಹನ್ ಸಲ್ದಾನ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದು ಭೂ ವ್ಯವಹಾರ ಮತ್ತು ದೊಡ್ಡ ಮಟ್ಟದ ಉದ್ಯಮದಲ್ಲಿ ತೊಡಗಿಸಿಕೊಂಡಿರುವಂತೆ 5 ಮಂದಿ ಬಾಡಿ ಗಾರ್ಡ್ ಜೊತೆ ಐಷಾರಾಮಿ ಕಾರಿನಲ್ಲಿ ಬಂದಿಳಿಯುತ್ತಿದ್ದನು .ಮಂಗಳೂರಿನ ಜಪ್ಪಿನಮೊಗರಿನ ಬಳಿ ಇರುವ ತನ್ನ ಮನೆಯನ್ನು ಐಷಾರಾಮಿ ಬಂಗಲೆಯಂತೆ ಪರಿವರ್ತಿಸಿದ್ದು ಹೊರರಾಜ್ಯ ಮತ್ತು ಹೊರ ಜಿಲ್ಲೆಯ ಶ್ರೀಮಂತರನ್ನು ಕರೆದು ವ್ಯವಹಾರದ ಮಾತುಕತೆ ನಡೆಸುತ್ತಿದ್ದ .ಆತನ ಜೀವನ ಶೈಲಿಗೆ ಮಾರುಹೋಗಿ ಉದ್ಯಮಿಗಳು ಕೋಟ್ಯಂತರ ರೂಪಾಯಿ ಹಿಂದೂ ಮುಂದು ನೀಡದೆ ಕೊಡುತ್ತಿದ್ದರೆಂದು ತಿಳಿದಿದೆ.
ರೋಹನ್ ಸಲ್ದಾನ ಕಳೆದ 4 ವರ್ಷದ ಹಿಂದೆ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದು ಆ ಕಾರ್ಯಕ್ರಮಕ್ಕೆ ಹೊರದೇಶದಿಂದ ಡ್ಯಾನ್ಸರ್ ಗಳನ್ನೂ ಕರೆದುಕೊಂಡಿದ್ದನು ಕೇವಲ ಹುಟ್ಟು ಹಬ್ಬಕ್ಕೆ ಸುಮಾರು ಕೋಟಿ ರೂಪಾಯಿ ವ್ಯಹಿಸಿದ್ದನು.ಮೊದಲಿನ ಮಾತುಕತೆಯ ಬಳಿಕ 5೦ ಕೋಟಿ ಯಿಂದ 1೦೦ ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಸಾಲ ಅಥವಾ ವ್ಯವಹಾರ ಹಣದ ಬೇಡಿಕೆ ಇಡುತ್ತಿದ್ದು ಒಮ್ಮೆ ಗುರಿಯಾದ ಮೊತ್ತವನ್ನು ವಸೂಲಿ ಮಡಿದ ನಂತರ ನಾನಾ ನೆಪಗಳನ್ನು ಹೇಳಿ ಉದ್ಯಮಿಗಳಿಂದ ತಪ್ಪಿಸಿಕೊಳ್ಳುತ್ತಿದ್ದನು.ಈ ಹಿಂದೆ ಹುಬ್ಬಳ್ಳಿ ದಾರಾವಾಡದಲ್ಲೂ ವಂಚಿಸಿದ್ದು ಆ ಪ್ರಕರಣದಿಂದ ಮುಕ್ತಗೊಂಡಿದ್ದನೆಂದು ತಿಳಿದಿದೆ.ಕೇವಲ 3ತಿಂಗಳಲ್ಲಿ 45 ಕೋಟಿ ರೂಪಾಯಿಗಳ ವಂಚನೆ ನಡೆಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಈತನ ಐಷಾರಾಮಿ ಬಂಗಲೆಯಲ್ಲಿ ಕೋಟಿ ಮೌಲ್ಯದ ಮದ್ಯ ಹಾಗೂ ಗುಪ್ತ ಬೆಡ್ರೂಮ್ ಹೊಂದಿದ್ದನು ಹುಟ್ಟುತ್ತಲೇ ಶ್ರೀಮಂತನಲ್ಲ ರೋಹನ್ ಸಲ್ಡಾನಾ 2016 ರವರೆಗೂ ಕಷ್ಟ ದ ಜೀವನ ಮಾಡುತ್ತಿದ್ದನು, ವಂಚನೆಯ ಜಾಲಕ್ಕೂ ಮುನ್ನ ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದು ತನಗೆ ಪ್ರಸಿದ್ಧ ಉದ್ಯಮಿಗಳ ಪರಿಚಯ ಇದೆ ಅಂತಾ ಹೇಳಿಕೊಳ್ಳುತ್ತಿದ್ದನು.
ಸ್ಟೋನ್,ಹಣದ ವ್ಯವಹಾರವನ್ನೂ ಮಾಡುತ್ತಿದ್ದ ರೋಹನ್ 2016 ರ ಬಳಿಕ ವಂಚನೆಯ ಜಾಲಕ್ಕೆ ಕೈ ಹಾಕಿದ್ದನು ,ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದು ಇದೇ ವರ್ಷದ ಜನವರಿಯಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು. ಆ ಬಳಿಕ ಕೋಟಿ ರೂಪಾಯಿ ವಂಚನೆ ಗೆ ಕೈ ಹಾಕಿದ ರೋಹನ್ ಸಲ್ಡಾನಾ ಕಳೆದ ಮೂರು ತಿಂಗಳ ಅವಧಿಯಲ್ಲಿ 4೦ ಕೋಟಿ ರೂಪಾಯಿ ವ್ಯವಹಾರ ಮಾಡಿದ್ದಾನೆ. ರೋಹನ್ ಬ್ಯಾಂಕ್ ಅಕೌಂಟ್ ನಲ್ಲಿ 4೦ ಕೋಟಿ ರೂಪಾಯಿ ವ್ಯವಹಾರ ಪತ್ತೆಯಾಗಿದ್ದು ಕಳೆದ ತಿಂಗಳು 1೦ ಕೋಟಿ ರೂಪಾಯಿ ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದನೆಂದು ಮಾಹಿತಿ ದೊರೆತಿದೆ.